ಮಂಡ್ಯ: ಮೈಸೂರು ವಿಶ್ವವಿದ್ಯಾಲಯದ 2024- 25ನೇ ಸಾಲಿನ ಮೈಸೂರು ವಿಶ್ವ ವಿದ್ಯಾಲಯದ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜು ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದೆ. ಮೈಸೂರು ವಿಶ್ವವಿದ್ಯಾಲಯದ ಜಿಮ್ಯಾಶಿಯಂ ಹಾಲ್‌ನಲ್ಲಿ ನಡೆದ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ 3 ಪ್ರಥಮ ಸ್ಥಾನಗಳನ್ನು ಹಾಗೂ 2 ದ್ವಿತೀಯ ಸ್ಥಾನ ಗಳಿಸಿ ಒಟ್ಟು 5 ಪದಕಗಳನ್ನು ಮಹಿಳಾ ಸರ್ಕಾರಿ ಕಾಲೇಜು ಪಡೆದಿದೆ. ಇದರೊಂದಿಗೆ ಒಟ್ಟು 21 ಅಂಕ ಗಳಿಸಿ ಕುಸ್ತಿ ಚಾಂಪಿಯನ್ ಶಿಪ್ ಪಡೆದಿದೆ.
ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜುಗಳ ಮಹಿಳೆಯರ ಭಾರ ಎತ್ತುವ ಸ್ಪರ್ಧೆಯಲ್ಲಿಯೂ ಸಹ ಕಾಲೇಜಿನ ವಿದ್ಯಾರ್ಥಿನಿಯರು 3 ದ್ವಿತೀಯ ಸ್ಥಾನ ಹಾಗೂ 1 ತೃತೀಯ ಸ್ಥಾನ ಪಡೆದು ಒಟ್ಟು 4 ಪದಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಟೆನ್ನಿಕಾಯ್ಡ್: ಅಂತರ ವಲಯಕ್ಕೆ ಆಯ್ಕೆ:ಮೈಸೂರು ವಿಶ್ವವಿದ್ಯಾಲಯ ಮಾಂಡವ್ಯ ವಲಯ ಮಟ್ಟದ ಅಂತರ ಕಾಲೇಜುಗಳ ಮಹಿಳಾ ಟೆನ್ನಿಕಾಯ್ಡ್ ಪಂದ್ಯಾವಳಿಯಲ್ಲೂ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ), ಮಂಡ್ಯ ಪ್ರಥಮ ಸ್ಥಾನ ಗಳಿಸಿ ವಿಶ್ವವಿದ್ಯಾಲಯದ ಅಂತರ ವಲಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.