ಲೇಖಕರಿಗೆ ಸಾಮಾಜಿಕ ಜವಾಬ್ದಾರಿ ಅಗತ್ಯ: ವಿ. ಹರಿನಾಥಬಾಬು

KannadaprabhaNewsNetwork |  
Published : Aug 06, 2026, 02:30 AM IST
ಕಾರ್ಯಕ್ರಮದಲ್ಲಿ ಸಾಹಿತಿ ವಿ. ಹರಿನಾಥಬಾಬು ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಹೊಸ ತಲೆಮಾರಿನ ಲೇಖಕರು ವಿವಿಧ ಕ್ಷೇತ್ರಗಳಿಂದ ಬರುತ್ತಿದ್ದಾರೆ. ಅವರ ಕೃತಿಗಳ ಬಗ್ಗೆ ಪೂರ್ವಾಗ್ರಹವಿಲ್ಲದ ವಿಮರ್ಶೆ ನಡೆಯಬೇಕು.

ಗದಗ: ಲೇಖಕರಿಗೆ ಸಾಮಾಜಿಕ ಜವಾಬ್ದಾರಿ ಅಗತ್ಯ. ಒಂದು ಕಾಲದಲ್ಲಿ ಲೇಖಕರ, ಕವಿಗಳ ಸಲಹೆಯನ್ನು ಪಡೆದು ಆಡಳಿತ ನಡೆಸುತ್ತಿದ್ದರು. ಸಮಾಜ ಸ್ವಾಸ್ಥ್ಯದ ಹಿನ್ನೆಲೆ ಬರವಣಿಗೆ ರೂಪುಗೊಳ್ಳಬೇಕು. ಜಗದಲ್ಲಿ ಮಾನವೀಯತೆಯೇ ವಿಜೃಂಭಿಸಬೇಕು. ಕವಿ ಜನಪರ ಮತ್ತು ಜೀವಪರ ಧೋರಣೆಯನ್ನು ಹೊಂದಿರಬೇಕು ಎಂದು ಕವಿ ವಿ. ಹರಿನಾಥಬಾಬು ತಿಳಿಸಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಮಾಸದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ತಲೆಮಾರಿನ ಲೇಖಕರು ವಿವಿಧ ಕ್ಷೇತ್ರಗಳಿಂದ ಬರುತ್ತಿದ್ದಾರೆ. ಅವರ ಕೃತಿಗಳ ಬಗ್ಗೆ ಪೂರ್ವಾಗ್ರಹವಿಲ್ಲದ ವಿಮರ್ಶೆ ನಡೆಯಬೇಕು ಎಂದರು.

ಸಾಹಿತಿ ಸಿದ್ದು ಯಾಪಲಪರ್ವಿ ಮಾತನಾಡಿ, ವಿ. ಹರಿನಾಥಬಾಬು ಅವರು ನಾಡಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಸರ್ಕಾರಿ ವ್ಯವಸ್ಥೆಯಲ್ಲಿರುವುದರಿಂದ ಅವರ ಅಭಿವ್ಯಕ್ತಿ ಸೀಮಿತವಾಗಿದೆ. ಅವರ ಚಿಂತನೆಗಳು ಬರಹ ರೂಪದಲ್ಲಿ ಹೆಚ್ಚು ಜನರನ್ನು ತಲುಪುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕವಿ ಮನಸ್ಸಿನ ಒಬ್ಬ ವ್ಯಕ್ತಿ ಅಧಿಕಾರಿಯಾದರೆ ವ್ಯವಸ್ಥೆಯನ್ನು ಹೇಗೆ ರೂಪಿಸಬಲ್ಲರು ಎಂಬುದಕ್ಕೆ ಹರಿನಾಥಬಾಬು ಉದಾಹರಣೆಯಾಗಿದ್ದಾರೆ ಎಂದರು.

ನಂತರ ಸಂವಾದ ಜರುಗಿತು. ಈ ವೇಳೆ ಕೆ.ಎಚ್. ಬೇಲೂರ. ಚಂದ್ರಶೇಖರ ವಸ್ತ್ರದ, ಜಿ.ಬಿ. ಪಾಟೀಲ, ಅನ್ನದಾನಿ ಹಿರೇಮಠ, ಸಿ.ಎಂ. ಮಾರನಬಸರಿ, ರಾಜಶೇಖರ ದಾನರಡ್ಡಿ, ಅಂದಾನಪ್ಪ ವಿಭೂತಿ, ಅ.ದ. ಕಟ್ಟಿಮನಿ, ರಾಜೇಂದ್ರ ಗಡಾದ, ಆರ್.ಎಲ್. ಹಂಸನೂರ, ಎಸ್.ಸಿ. ಹಾಲಕೇರಿ, ಮಂಜುಳಾ ವೆಂಕಟೇಶಯ್ಯ, ಬಸವರಾಜ ನೆಲಜೇರಿ, ಶಿಲ್ಪಾ ಮ್ಯಾಗೇರಿ, ಜಯಶ್ರೀ ಅಂಗಡಿ, ಶೈಲಜಾ ಗಿಡ್ನಂದಿ, ರತ್ನಾ ಘಾರ್ಗಿ, ರತ್ನಾ ಪುರಂತರ, ಬಿ.ಬಿ. ಹೊಳಗುಂದಿ, ಶಾರದಾ ಬಾಣದ, ಮರುಳಸಿದ್ಧಪ್ಪ ದೊಡಮನಿ, ಬಸವರಾಜ ವಾರಿ, ಡಿ.ಎಸ್. ಬಾಪುರಿ, ಅಮರೇಶ ರಾಂಪೂರ, ಸತೀಶ ಚನ್ನಪ್ಪಗೌಡರ ಸೇರಿದಂತೆ ಮೊದಲಾದವರು ಇದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.

ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಸಾರ್ವಜನಿಕ ಸೇವಾ ಸಂಸ್ಥೆಗಳು ನೀಡುವ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಮುಖ್ಯೋಪಾಧ್ಯಾಯ ಬಿ.ಎಚ್‌. ನಡುವಿನಮನಿ ಹೇಳಿದರು.ಸಮೀಪದ ಗೊಜನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಯುಥ್ ಫಾರ್ ಸೇವಾ ಸಂಸ್ಥೆ ಹಾಗೂ ಟೆಕ್ಸಾ ಇನ್ಸಟ್ರುಮೆಂಟ್ ಸಂಸ್ಥೆಯು ಇತ್ತೀಚೆಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಉದಯಕುಮಾರ ಹಾಗೂ ಬೃಂದಾ ಅವರು ಮಾತನಾಡಿ, ವಿದ್ಯಾರ್ಥಿಗಳು ಸಾರ್ವಜನಿಕ ಸೇವಾ ಸಂಸ್ಥೆಗಳು ನೀಡುತ್ತಿರುವ ಕಲಿಕಾ ಪರಿಕರಗಳನ್ನು ಉಪಯೋಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಕಲ್ಲೂರ, ಶಿವರಾಜಗೌಡ ಪಾಟೀಲ, ಸಿದ್ದಿಲಿಂಗಪ್ಪ ಸವಣೂರ ಇದ್ದರು. ಎಸ್‌.ಎಚ್. ಬಾಬನ್ನವರ ಕಾರ್ಯಕ್ರಮ ನಿರ್ವಹಿಸಿದರು. ಪಿ.ಎಸ್. ತಳವಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ: ನರೇಂದ್ರಸ್ವಾಮಿ
ರ್‍ಯಾಗಿಂಗ್‌ ನಿಯಂತ್ರಣಕ್ಕೆ ಸರ್ಕಾರ ವಿಫಲ: ಡಾ.ಭರತ್‌ ಶೆಟ್ಟಿ ಟೀಕೆ