ಭೀಮಣ್ಣ ಗಜಾಪುರ
ಕೂಡ್ಲಿಗಿ: ಕಲಬುರಗಿಯ ಡಾ. ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಜೋಳದಕೂಡ್ಲಿಗಿ ಅವರು ಬರೆದ ಬರೆಹಗಳು 9 ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ!ಮೊದಲ ಬಾರಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ೨೦೧೨ರಿಂದ ೨೦೧೫ರ ತನಕ ಬಿಎ/ಬಿಎಸ್ಸಿ ಮೊದಲ ಸೆಮಿಸ್ಟರ್‌ಗೆ `ಅವ್ವನ ರಂಗೋಲಿ'''' ಕವಿತೆ ಪಠ್ಯವಾಗಿತ್ತು. ಹರಿಹರದ ಎಸ್‌ಜೆವಿಪಿ ಸ್ವಾಯತ್ತ ಕಾಲೇಜಿನಲ್ಲಿ ೨೦೧೩ನೇ ಸಾಲಿನ ಪದವಿ ತರಗತಿಯ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅರುಣ್ ಅವರ `ನೆಲದ ನೆತ್ತಿಯ ಮೇಲೆ'''' ಕವಿತೆ ಪಠ್ಯವಾಗಿತ್ತು.
ದಾವಣಗೆರೆ ವಿವಿಯ ೨೦೨೧- ೨೨ನೇ ಸಾಲಿನಿಂದ ಬಿಎಸ್ಸಿ/ಬಿಸಿಎ ಎರಡನೆ ಸೆಮಿಸ್ಟರ್‌ಗೆ `ಸಾಮಾಜಿಕ ಜಾಲತಾಣಗಳೆಂಬ ಕಲ್ಪಿತ ಲೋಕಗಳ ಪಯಣ'''' ಲೇಖನ ಪಠ್ಯವಾಗಿದೆ. ಇದೇ ಲೇಖನವು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ೨೦೧೭- ೨೦೨೦ರಲ್ಲಿ ಬಿಕಾಂ/ಬಿಬಿಎ/ಬಿಬಿಎಂ ದ್ವಿತೀಯ ಸೆಮಿಸ್ಟರ್‌ಗೆ ಪಠ್ಯವಾಗಿತ್ತು. ೨೦೨೧ನೇ ಸಾಲಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ರಾಯಚೂರು ವಿಶ್ವವಿದ್ಯಾಲಯಗಳಲ್ಲಿ ಬಿಎಸ್ಸಿ ನಾಲ್ಕನೇ ಸೆಮಿಸ್ಟರಿಗೆ ಅರುಣ್ ನಿರೂಪಿಸಿರುವ ಮಂಜಮ್ಮ ಜೋಗತಿಯ ಆತ್ಮಕಥನ `ನಡುವೆ ಸುಳಿವ ಹೆಣ್ಣು'''' ಕೃತಿಯನ್ನು ಪಠ್ಯಕ್ಕೆ ಸೇರಿಸಲಾಗಿತ್ತು.ಮೈಸೂರು ವಿವಿಯಲ್ಲಿ ೨೦೨೩ನೇ ಸಾಲಿನಿಂದ ಬಿಎ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೨೦೨೩- ೨೪ನೇ ಸಾಲಿಗೆ ಬಿಕಾಂ ಮೂರನೇ ಸೆಮಿಸ್ಟರಿಗೆ `ನಡುವೆ ಸುಳಿವ ಹೆಣ್ಣು'''' ಕೃತಿಯ ಆಯ್ದ ಭಾಗಗಳು ಪಠ್ಯಗಳಾಗಿವೆ. ಮಂಗಳೂರು ವಿವಿಯಲ್ಲಿ ೨೦೨೦-೨೪ನೇ ಸಾಲಿನ ಬಿಕಾಂ ಎರಡನೆ ಸೆಮಿಸ್ಟರ್‌ಗೆ `ಅವ್ವನ ರಂಗೋಲಿ'''' ಕವಿತೆ ಪಠ್ಯವಾಗಿದೆ. ಅಂತೆಯೇ ಬೆಂಗಳೂರು ವಿವಿಯಲ್ಲಿ ೨೦೨೨ನೇ ಸಾಲಿನಿಂದ ಬಿಎಸ್ಸಿ ಎರಡನೇ ಸೆಮಿಸ್ಟರಿಗೆ `ಮಳೆ: ಜಾನಪದ ನಂಬಿಕೆಗಳು'''' ಸಂಶೋಧನ ಪ್ರಬಂಧ ಪಠ್ಯವಾಗಿದೆ. ಹೀಗೆ ಒಟ್ಟು ಒಂಬತ್ತು ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ.
ಹಿನ್ನೆಲೆ:ಅಖಂಡ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯಲ್ಲಿ 1960ರಲ್ಲಿ ಗವಿಯಮ್ಮ ಎಂಬ ಮಾಜಿ ದೇವದಾಸಿ ಅಂಗಡಿ ಇಟ್ಟುಕೊಂಡಿದ್ದರು. ಇದರಿಂದ ಬಂದ ಪುಡಿಗಾಸಲ್ಲಿ ತನ್ನ ಇಬ್ಬರು ಮಕ್ಕಳನ್ನು ಓದಿಸಬೇಕೆಂದು ಪಣ ತೊಟ್ಟರು. ಹಿರಿಯ ಮಗ ಹನುಮಂತಪ್ಪ ಎಸ್‌ಎಸ್‌ಎಲ್‌ಸಿವರೆಗೆ ಓದಿದರು. ಆ ಹೊತ್ತಿಗೆ ಗವಿಯಮ್ಮ ತೀರಿದ ಕಾರಣ ಹನುಮಂತಪ್ಪ ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ. ಮುಂದೆ ಚಿತ್ರದುರ್ಗ ಜಿಲ್ಲೆಯ ಹುಲ್ಲೆಹಾಳಿನ ನಾಗರತ್ನಮ್ಮ ಅವರನ್ನು ಮದುವೆಯಾದರು. ಹತ್ತನೇ ತರಗತಿ ಓದಿದ ರತ್ನಮ್ಮ ಜೋಳದಕೂಡ್ಲಿಗಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸಕ್ಕೆ ಸೇರಿದರು. ಈ ಹನುಮಂತಪ್ಪ ಮತ್ತು ನಾಗರತ್ನಮ್ಮನ ಮೊದಲ ಮಗ ಅರುಣ್ ಕುಮಾರ (೧೯೮೦). ಅವರನ್ನು ಶಾಲೆಗೆ ಸೇರಿಸುವಾಗ ಮನೆತನದ ಗವಿಯಮ್ಮನ ಹೆಸರನ್ನಿಡಲಾಯಿತು. ಹಾಗಾಗಿ ಗವಿಯಮ್ಮನವರ ಅರುಣ್ ಕುಮಾರ್ ಆದರು. ಅರುಣ್ ತನ್ನ ಅಜ್ಜಿಯ ಮಹದಾಸೆಯನ್ನು ಈಡೇರಿಸುವ ಸಲುವಾಗಿ ಸ್ನಾತಕ್ಕೋತ್ತರ ಪದವಿ ಪಡೆದು 12 ಮಹತ್ತರ ಕೖತಿಗಳನ್ನು ರಚಿಸಿದ್ದಾರೆ.
ಕೋಟ್-ನನ್ನ ಶಾಲಾ ದಾಖಲಾತಿಗಳಲ್ಲಿ ಅಜ್ಜಿಯ ಹೆಸರಿದೆ. ಅಜ್ಜಿಯ ಕನಸನ್ನು ನನಸು ಮಾಡಿದ ಸಂತಸ ಇದೆ. ಪ್ರಗತಿಪರ ಲೇಖಕನಾಗಿ ಇಲ್ಲಿಯವರೆಗೆ ಹನ್ನೆರಡು ಕೃತಿಗಳನ್ನು ರಚಿಸಿದ್ದು, ಇದೀಗ ಕಲಬುರಗಿಯ ಡಾ. ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ, ಕವಿ, ಲೇಖಕ, ಸಂಶೋಧಕನಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತಸ ತಂದಿದೆ.
ಡಾ. ಅರುಣ್ ಜೋಳದಕೂಡ್ಲಿಗಿ ಪೋಟೋ 17ಕೆ.ಡಿ.ಜಿ.1- ಡಾ. ಅರುಣ್ ಜೋಳದಕೂಡ್ಲಿಗಿ