ದಾಂಡೇಲಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರು ಅಥವಾ ಉಡುಪಿಗೆ ಸ್ಥಳಾಂತರ ಮಾಡಬೇಕೆಂಬ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಸಾಧುವಾದ ಕ್ರಮವಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆಯಲ್ಲಿ ತಿಳಿಸಿರುವ ಅವರು, ಯಕ್ಷಗಾನ ಕಲಾವಿದರು ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಬೇಕೆಂಬ ವಾದದ ಹಿನ್ನೆಲೆಯಲ್ಲಿ ಕೆಲವರಿಂದ ಈ ಪ್ರಯತ್ನ ನಡೆಯುತ್ತಿದೆ. ಹಾಗೊಮ್ಮೆ ಸ್ಥಳಾಂತರಿಸುವುದೇ ಇದ್ದರೆ ಯಕ್ಷಗಾನದ ಮೂಲ ಪರಂಪರೆಯ ನೆಲವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಬೇಕೆಂದು ವಾಸರೆ ಒತ್ತಾಯಿಸಿದ್ದಾರೆ.ಈಗಾಗಲೇ ಮಂಗಳೂರಿನಲ್ಲಿ ಬ್ಯಾರಿ ಅಕಾಡೆಮಿ, ತುಳು ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ನಿಗಮ ಮಂಡಳಿಗಳ ಕಚೇರಿಗಳಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಕಾಡೆಮಿ ಅಥವಾ ಪ್ರಾಧಿಕಾರಗಳ ಕಚೇರಿ ಇರುವುದಿಲ್ಲ. ಉತ್ತರಕನ್ನಡ ಇದು ಯಕ್ಷಗಾನದ ತವರು ನೆಲ. ಯಕ್ಷಗಾನ ಅಕಾಡೆಮಿಯ ಕಚೇರಿಯನ್ನು ಒಂದೊಮ್ಮೆ ಸ್ಥಳಾಂತರಿಸುವುದೇ ಇದ್ದರೆ ಜಿಲ್ಲೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ವಾಸರೆ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿತ್ತು. ಅಧ್ಯಕ್ಷರು ಹಾಗೂ 9ಕ್ಕೂ ಹೆಚ್ಚಿನ ಸದಸ್ಯರು ದಕ್ಷಿಣ ಕನ್ನಡದವರೇ ಆಗಿದ್ದರು. ಆಗಲೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆ ಎಂದಿರುವ ವಾಸರೆ, ಈಗ ಮತ್ತೆ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಪ್ರಸ್ತಾಪದ ಮೂಲಕ ಜಿಲ್ಲೆಯನ್ನು ಯಕ್ಷಗಾನ ಅಕಾಡೆಮಿಯಿಂದ ಅಂತರ ಕಾದುಕೊಳ್ಳುವಂತೆ ಮಾಡುವುದು ಕಂಡು ಬರುತ್ತಿದೆ ಎಂದಿದ್ದಾರೆ.ಈ ಬಗ್ಗೆ ಹೇಳಿಕೆಯಲ್ಲಿ ತಿಳಿಸಿರುವ ಅವರು, ಯಕ್ಷಗಾನ ಕಲಾವಿದರು ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಬೇಕೆಂಬ ವಾದದ ಹಿನ್ನೆಲೆಯಲ್ಲಿ ಕೆಲವರಿಂದ ಈ ಪ್ರಯತ್ನ ನಡೆಯುತ್ತಿದೆ. ಹಾಗೊಮ್ಮೆ ಸ್ಥಳಾಂತರಿಸುವುದೇ ಇದ್ದರೆ ಯಕ್ಷಗಾನದ ಮೂಲ ಪರಂಪರೆಯ ನೆಲವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಬೇಕೆಂದು ವಾಸರೆ ಒತ್ತಾಯಿಸಿದ್ದಾರೆ.
ಈಗಾಗಲೇ ಮಂಗಳೂರಿನಲ್ಲಿ ಬ್ಯಾರಿ ಅಕಾಡೆಮಿ, ತುಳು ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ನಿಗಮ ಮಂಡಳಿಗಳ ಕಚೇರಿಗಳಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಕಾಡೆಮಿ ಅಥವಾ ಪ್ರಾಧಿಕಾರಗಳ ಕಚೇರಿ ಇರುವುದಿಲ್ಲ. ಉತ್ತರಕನ್ನಡ ಇದು ಯಕ್ಷಗಾನದ ತವರು ನೆಲ. ಯಕ್ಷಗಾನ ಅಕಾಡೆಮಿಯ ಕಚೇರಿಯನ್ನು ಒಂದೊಮ್ಮೆ ಸ್ಥಳಾಂತರಿಸುವುದೇ ಇದ್ದರೆ ಜಿಲ್ಲೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ವಾಸರೆ ತಿಳಿಸಿದ್ದಾರೆ.ಪ್ರಸಕ್ತ ಸಾಲಿನ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿತ್ತು. ಅಧ್ಯಕ್ಷರು ಹಾಗೂ 9ಕ್ಕೂ ಹೆಚ್ಚಿನ ಸದಸ್ಯರು ದಕ್ಷಿಣ ಕನ್ನಡದವರೇ ಆಗಿದ್ದರು. ಆಗಲೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆ ಎಂದಿರುವ ವಾಸರೆ, ಈಗ ಮತ್ತೆ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಪ್ರಸ್ತಾಪದ ಮೂಲಕ ಜಿಲ್ಲೆಯನ್ನು ಯಕ್ಷಗಾನ ಅಕಾಡೆಮಿಯಿಂದ ಅಂತರ ಕಾದುಕೊಳ್ಳುವಂತೆ ಮಾಡುವುದು ಕಂಡು ಬರುತ್ತಿದೆ ಎಂದಿದ್ದಾರೆ.