ಕನ್ನಡಪ್ರಭ ವಾರ್ತೆ ಮಲ್ಪೆ
ಅವರು ಇಲ್ಲಿನ ಏಳೂರು ಮೊಗವೀರ ಮಹಾಜನ ಸಂಘದಲ್ಲಿ ಶ್ರೀನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಇವರಿಂದ ಯಕ್ಷಗಾನ ಬಯಲಾಟ ‘ಸಾಗರ ಸಂಗಮ’ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಕಲೆ ಹೊಂದಿದ ಜನಪ್ರಿಯತೆ ಇನ್ನಾವ ಜಾನಪದ ಕಲೆಯೂ ಹೊಂದಿಲ್ಲ. ಕೇವಲ ಜನಪ್ರಿಯತೆ ಮಾತ್ರವಲ್ಲ, ಈ ಕಲೆಯನ್ನು ನಂಬಿಕೊಂಡಿರುವ ಕಲಾವಿದರಿಗೂ ಇಲ್ಲಿ ಆಶ್ರಯ ಸಿಗುತ್ತದೆ. ಕಲೆ, ಕಲಾವಿದರನ್ನು ಕಟ್ಟಿಕೊಂಡು ಮೇಳವನ್ನು ಹುಟ್ಟು ಹಾಕಿದ ಯಜಮಾನರಿಗೂ ಈ ಕಲೆ ಕೈ ಬಿಡುವುದಿಲ್ಲ ಎನ್ನುವಾಗ ಈ ಯಕ್ಷ ಸಂಸ್ಕೃತಿ ಅದೆಷ್ಟು ಶ್ರೀಮಂತ ಎನ್ನುವುದನ್ನು ನಾವು ಅರಿಯಬೇಕು. ನವರಸಗಳನ್ನು ತನ್ನಲ್ಲಿ ಹುದುಗಿಸಿಕೊಂಡು ಸಂಪೂರ್ಣ ಮನೋರಂಜನೆ ನೀಡಬಲ್ಲ ಈ ಏಕೈಕ ಕಲೆಯ ಉಳಿವು, ಬೆಳವಣಿಗೆಗೆ ಸಂಘ ಸಂಸ್ಥೆಗಳ ಪ್ರೋತ್ಸಾಹ ಬೆಂಬಲ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಯಕ್ಷ ಪ್ರೋತ್ಸಾಹಕ ಉದ್ಯಮಿ ಗೋಪಾಲ ಸಿ.ಬಂಗೇರ ಮಾತನಾಡಿ, ಯಕ್ಷಗಾನ ಕಲೆಗೆ ಇಂದು ರಾಜಾಶ್ರವಿಲ್ಲದಿದ್ದರೂ, ಅದಕ್ಕೆ ಡಾ.ತಲ್ಲೂರು ಅವರಂತಹ ಪ್ರೋತ್ಸಾಹಕರು ಈ ಕಲೆಯ ಉಳಿವಿಗೆ ಶ್ರಮಿಸುತ್ತಿರುವುದು ಪ್ರಶಂಸನೀಯ. ಇಂತಹ ಸುಮನಸ್ಕರದಿಂದಲೇ ಯಕ್ಷಗಾನಕ್ಕೆ ಭದ್ರ ಭವಿಷ್ಯವಿದೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ದೇವದಾಸ್ ಈಶ್ವರಮಂಗಳ ವಿರಚಿತ ‘ಸಾಗರ ಸಂಗಮ’ ಯಕ್ಷಗಾನ ಪ್ರದದರ್ಶನಗೊಂಡಿತು.