ದ್ಯುತಿ ಪರ್ವ ಯಕ್ಷ ಟ್ರಸ್ಟ್ ವತಿಯಿಂದ ಮೇ 23 ರ ಸಂಜೆ 6 ರಿಂದ ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಸ್ಪಂದನೆ - ಸಹಕಾರ- ಸಹಾಯ ಉದ್ದೇಶದಿಂದ ಒಡ್ಡೋಲಗ ಕಾರ್ಯಕ್ರಮ ನಡೆಯಲಿದೆ ಎಂದು ದ್ಯುತಿ ಪರ್ವ ಯಕ್ಷ ಟ್ರಸ್ಟ್ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ
ಕುಂದಾಪುರ: ದ್ಯುತಿ ಪರ್ವ ಯಕ್ಷ ಟ್ರಸ್ಟ್ ವತಿಯಿಂದ ಮೇ 23 ರ ಸಂಜೆ 6 ರಿಂದ ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಸ್ಪಂದನೆ - ಸಹಕಾರ- ಸಹಾಯ ಉದ್ದೇಶದಿಂದ ಒಡ್ಡೋಲಗ ಕಾರ್ಯಕ್ರಮ ನಡೆಯಲಿದೆ ಎಂದು ದ್ಯುತಿ ಪರ್ವ ಯಕ್ಷ ಟ್ರಸ್ಟ್ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಹೆಚ್.ಬಾಲಚಂದ್ರ ಭಟ್ ಉದ್ಘಾಟಿಸಲಿದ್ದು, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ರಮೇಶ್ ವೈದ್ಯ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ 25 ಸಾಧಕರಿಗೆ ಯಕ್ಷ ಗೌರವ ನೀಡಿ ಗೌರವಿಸಲಾಗುವುದು. ಕಲಾ ಪೋಷಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮಂಜುನಾಥ ಭಟ್, ಪ್ರಕಾಶ್ ಶೆಟ್ಟಿ ದಾಂಡೇಲಿ, ಡಾ.ಆದರ್ಶ ಹೆಬ್ಬಾರ್, ಡಾ.ಜಗದೀಶ್ ಶೆಟ್ಟಿ ಅವರಿಗೆ ಯಕ್ಷ ಗೌರವ. ಕಲಾಕ್ಷೇತ್ರದ ಬಿ.ಕಿಶೋರ ಕುಮಾರ್, ಯಕ್ಷಗಾನ ಪೋಷಕರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ದಾವಣಗೆರೆ, ಮಹೇಶ ಶೆಟ್ಟಿ ಧಾರವಾಡ, ರಮಾನಂದ ಶೆಟ್ಟಿ ಸೂಡ, ಜಯಕರ ಶೆಟ್ಟಿ ಕೊಂಡಳ್ಳಿ, ಸುರೇಶ್ ಬರ್ಕಳಮಕ್ಕಿ, ಡಾ.ನಿತ್ಯಾನಂದ ಶೆಟ್ಟಿ ಅಂಪಾರು, ವಿಜಯ ಕುಮಾರ್ ಶೆಟ್ಟಿ ಯಳಂತೂರು, ರಾಘವೇಂದ್ರ ಭಟ್ ವಾಜಗದ್ದೆ, ಗಜೇಂದ್ರ ಆಚಾರ್ಯ ಕೋಣಿ, ಪ್ರಶಾಂತ್ ಆಚಾರ್ಯ ಅಂಕೋಲ ಅವರಿಗೆ ಸಾಧಕ ಸಂಘಟನಾ ಗೌರವ ನಡೆಯಲಿದೆ.ಕಲಾವಿದರಾದ ಜಮದಗ್ನಿ ಶೀನ ಮೊಗವೀರ, ಗುಡ್ರಿ ಗಣೇಶ ಭಟ್, ಮಹಮ್ಮದ್ ಗೌಸ್ ಕಾವ್ರಾಡಿ, ಶ್ರೀಧರ ಭಟ್ ಕಾಸರಕೋಡು, ನರಸಿಂಹ ಗಾಂವ್ಕರ್, ಎನ್.ಜಿ.ಹೆಗಡೆ ಯಲ್ಲಾಪುರ, ಪಂಜು ಪೂಜಾರಿ ಬಗ್ವಾಡಿ, ಪ್ರಸನ್ನ ಶೆಟ್ಟಿಗಾರ್, ರಾಕೇಶ ಮಲ್ಯ ಹಳ್ಳಾಡಿ, ದಿ.ರಂಜಿತ್ ದೇವಾಡಿಗ ಬನ್ನಾಡಿ ಅವರ ಮನೆಯವರಿಗೆ ಯಕ್ಷ ಪುರಸ್ಕಾರದಡಿ ನೆರವು ನೀಡಲಾಗುವುದು.ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9 ರಿಂದ ಬಡಗುತಿಟ್ಟಿನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರುಸುದ್ದಿಗೋಷ್ಠಿಯಲ್ಲಿ ದ್ಯುತಿ ಪರ್ವ ಯಕ್ಷ ಟ್ರಸ್ಟ್ ನಿರ್ದೇಶಕ ರವಿರಾಜ ಶೆಟ್ಟಿ, ಸದಸ್ಯರಾದ ಉದಯ ಕುಮಾರ್ ಶೆಟ್ಟಿ ಪಡುಕೆರೆ, ಕಂಡ್ಲೂರು ಸುಧಾಕರ ಆಚಾರ್ಯ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.