ಕಾರಂತರಿಂದ ಯಕ್ಷಗಾನ ವಿಶ್ವಗಾನವಾಗಿದೆ: ಚೇತನ್ ಶೆಟ್ಟಿ

KannadaprabhaNewsNetwork |  
Published : Nov 28, 2024, 12:30 AM IST
27ಯಕ್ಷಗಾನ | Kannada Prabha

ಸಾರಾಂಶ

ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲ ವಠಾರದಲ್ಲಿ ಕೋಟ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ವತಿಯಿಂದ ಕಾರ್ತಿಕ ಮಾಸದ ರಂಗದೋಕುಳಿ - ಯಕ್ಷ ದೀಪಾವಳಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಹಿಂದೆ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು, ಆದರೆ ನಂತರದ ದಿನಗಳಲ್ಲಿ ಶಿವರಾಮ ಕಾರಂತರ ಮೂಲಕ ಯಕ್ಷಗಾನ ವಿಶ್ವಗಾನವಾಯಿತು ಎಂದು ನ್ಯೂಕರ್ನಾಟಕ ಬಿಲ್ಡರ್ಸ್‌ ಮುಖ್ಯಸ್ಥ ಚೇತನ್ ಶೆಟ್ಟಿ ಹೇಳಿದರು.

ಅವರು ಸೋಮವಾರ ಇಲ್ಲಿನ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲ ವಠಾರದಲ್ಲಿ ಕೋಟ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ವತಿಯಿಂದ ಕಾರ್ತಿಕ ಮಾಸದ ರಂಗದೋಕುಳಿ - ಯಕ್ಷ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕ್ರಮವನ್ನು ಐರೋಡಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಸುಬ್ರಹ್ಮಣ್ಯ ಮಧ್ಯಸ್ಥ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ಯಕ್ಷಗಾನದ ಉಳಿವಿನಲ್ಲಿ ಮೇಳಗಳ ಪಾತ್ರ ಎಷ್ಟಿದೆಯೋ ಅದೇ ರೀತಿ ಹವ್ಯಾಸಿ ಕಲಾವಿದರ ಕೊಡುಗೆ ಕೂಡ ಅಷ್ಟೆ ಪ್ರಮಾಣದಲ್ಲಿದೆ. ಈ ದಿಸೆಯಲ್ಲಿ ಯಕ್ಷಸೌರಭ ಯಕ್ಷಗಾನದ ಮೂಲಕ ಕಲಾರಸಿಕರ ಮನಸೂರೆಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ವಹಿಸಿದ್ದರು. ಅತಿಥಿಗಳಾಗಿ ಕೋಟ ಅಮೃತೇಶ್ವರ ದೇಗುಲದ ಮಾಜಿ ಟ್ರಸ್ಟಿ ಎಂ. ಸುಬ್ರಾಯ ಆಚಾರ್, ದೇವಾಡಿಗರ ಸಂಘ ಕೋಟ ಸಾಲಿಗ್ರಾಮ ಅಧ್ಯಕ್ಷ ನರಸಿಂಹ ದೇವಾಡಿಗ, ಕಲಾರಂಗದ ಕಾರ್ಯಾಧ್ಯಕ್ಷ ಹರೀಶ್ ದೇವಾಡಿಗ ಉಪಸ್ಥಿತರಿದ್ದರು. ಸಂಘದ ಸ್ಥಾಪಾಕಾಧ್ಯಕ್ಷ ಹರೀಶ್ ಭಂಡಾರಿ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಸಂಘದ ಸದಸ್ಯ ರಾಜೇಶ್ ಕರ್ಕೇರ ಕೋಡಿ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ್ ಉರಾಳ್ ವಂದಿಸಿದರು. ಕಾರ್ಯಕ್ರಮದ ನಂತರ ಚಕ್ರವೂಹ್ಯ ಪೌರಾಣಿಕ ಯಕ್ಷಪ್ರಸಂಗ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!