ಕನ್ನಡಪ್ರಭ ವಾರ್ತೆ ಗೋಕರ್ಣ
ಅಡಿಗೋಣದ ಶ್ರೀಜಟಗ ನಾಗ ಬಯಲು ಮಂದಿರದಲ್ಲಿ ಯಕ್ಷಗಾನ ಕಲಿಕಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವಪೀಳಿಗೆಗೆ ಯಕ್ಷಗಾನ ಕಲೆ ಕಲಿಸಿ, ನಮ್ಮ ಪಾರಂಪರಿಕ ಕಲೆ ಉಳಿಸಿ ಬೆಳೆಸುವ ಕಾರ್ಯಕ್ರಮ ಮಾಡುತ್ತಿರುವ ನಿವೃತ್ತ ಶಿಕ್ಷಕ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಬೀರಣ್ಣ ನಾಯಕರವರ ಈ ಕಾರ್ಯ ಪ್ರಶಂಸನೀಯ ಎಂದ ಅವರು, ನಮ್ಮಂತಹ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು ಎಂದರು.ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಚ್. ನಾಯಕ ಮಾತನಾಡಿ, ಅನೇಕ ಜಾನಪದ ಕಲೆಗಳು ನಶಿಸುತ್ತಿರುವ ಇಂದಿನ ದಿನದಲ್ಲಿ ಗ್ರಾಮೀಣ ಪ್ರದೇಶ ಅಡಿಗೋಣ ಗ್ರಾಮ ಕಲೆ, ಸಂಸ್ಕೃತಿಯನ್ನ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಬೀರಣ್ಣ ನಾಯಕ ಮಾತನಾಡಿ, ಶಿಕ್ಷಕ ವೃತ್ತಿಗೆ ಪೂರಕವಾಗಿ ಯಕ್ಷಗಾನ ಕಲೆ ನನ್ನ ವೃತ್ತಿ ಬದುಕಿಗೆ ತೃಪ್ತಿ ತಂದು ಕೊಟ್ಟಿದೆ. ಮುಂದಿನ ಜನಾಂಗವು ಈ ಕಲೆಯನ್ನ ಉಳಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ದೇವಾನಂದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಗುನಗ ವಂದಿಸಿದರು. ಹರೀಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಊರಿನ ಗಣ್ಯರು, ನಾಗರಿಕರು, ಶಿಬಿರಾರ್ಥಿಗಳು ಪಾಲ್ಕೊಂಡಿದ್ದರು. ನಂತರ ಖ್ಯಾತ ಭಾಗವತರು ಹಾಗೂ ಅರ್ಥಧಾರಿಗಳಿಂದ ನಡೆದ ಕರ್ಣಾರ್ಜುನ ತಾಳಮದ್ದಳೆ ಪ್ರದರ್ಶನ ಎಲ್ಲರನ್ನ ಮನರಂಜಿಸಿತು.