ಯಕ್ಷಗಾನದಿಂದ ಬುದ್ಧಿ ಚುರುಕುಗೊಳ್ಳುತ್ತೆ: ಪುಟ್ಟಸ್ವಾಮಿ

KannadaprabhaNewsNetwork |  
Published : Sep 15, 2024, 01:46 AM IST
ಹರಪನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆದರ್ಶ ಮಹಿಳಾ ಮಂಡಳಿ ಹಾಗೂ ಯಕ್ಷಗಾನ ಅಕಾಡೆಮಿ ವತಿಯಿಂದ  ಮೂಡಲಪಾಯ ತರಬೇತಿ ಕಾರ್ಯಕ್ರಮವನ್ನು ಯಕ್ಷಗಾನ ಅಕಾಡೆಮಿ ಸದಸ್ಯ ಪುಟ್ಟಸ್ವಾಮಿ   ಉದ್ಘಾಟಿಸಿದರು. | Kannada Prabha

ಸಾರಾಂಶ

ಯಕ್ಷಗಾನ ಕಲೆಗೆ ಸಾಹಿತ್ಯದ ನೆಲೆಯಲ್ಲಿ ದೊಡ್ಡ ಚರಿತ್ರೆಯೇ ಇದೆ.

ಹರಪನಹಳ್ಳಿ: ಯಕ್ಷಗಾನದಿಂದ ಬುದ್ಧಿ ಚುರುಕುಗೊಳ್ಳುತ್ತದೆ. ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಪುಟ್ಟಸ್ವಾಮಿ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆದರ್ಶ ಮಹಿಳಾ ಮಂಡಳಿ ಹಾಗೂ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಮೂಡಲಪಾಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಯಕ್ಷಗಾನ ಕಲೆಗೆ ಸಾಹಿತ್ಯದ ನೆಲೆಯಲ್ಲಿ ದೊಡ್ಡ ಚರಿತ್ರೆಯೇ ಇದೆ. ಪಡುವಲಪಾಯ-ಪ್ರಸಂಗ ಸಾಹಿತ್ಯ, ಯಕ್ಷಗಾನದಲ್ಲಿ ಪ್ರಯೋಗಶೀಲತೆ, ಮೌಖಿಕ ಸಾಹಿತ್ಯ, ಸಂಶೋಧನೆ ಮತ್ತು ವಿದ್ಯೆ ಪ್ರಮುಖ ಕವಿಗಳು- ಹೀಗೆ ಒಟ್ಟು ಏಳು ಅಧ್ಯಾಯಗಳಲ್ಲಿ ಸಾಗುವ ಈ ಮೂಡಲಪಾಯ ಯಕ್ಷಗಾನದ ಒಟ್ಟು ಸ್ವರೂಪವನ್ನು ಒಂದೇ ತೆಕ್ಕೆಗೆ ಪರಿಚಯಿಸಿಬಿಡುತ್ತದೆ ಎಂದು ಹೇಳಿದರು.

ಖಾಸಗಿ ಶಾಲೆಯ ಭರಾಟೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ. ಪರುಶುರಾಮ ಪ್ರಾಸ್ತಾವಿಕವಾಗಿ ಮಾತನಾಡಿ ಭಾವ, ರಾಗ, ತಾಳದಿಂದ ಮನುಷ್ಯ ಪರಿಪೂರ್ಣನಾಗುತ್ತಾನೆ. ಮೂಡಲಪಾಯ ನಾಟಕ, ದೊಡ್ಡಾಟಗಳಿಂದ ಮನುಷ್ಯ ಪರಿಶುದ್ಧರಾಗುತ್ತಾರೆ ಎಂದರು.

ಆದರ್ಶ ಮಹಿಳಾ ಮಂಡಳಿ ಅಧ್ಯಕ್ಷೆ ಮೈದೂರು ಶಿಲ್ಪಾ ಮಾತನಾಡಿ, ಯಾವುದೇ ಪಾತ್ರ ಮಾಡಿದರೂ ನಾವು ಪರಕಾಯ ಪ್ರವೇಶ ಮಾಡಿದರೆ ಉತ್ತಮ ಅಭಿನಯ ಮಾಡಬಹುದು. ಶಿಕ್ಷಣದ ಜೊತೆ ಕಲೆ, ಸಾಹಿತ್ಯ ಸಂಗೀತ ಕ್ರೀಡೆಗಳಲ್ಲಿ ಭಾಗವಹಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಶಾಲೆಯ ಮುಖ್ಯ ಶಿಕ್ಷಕ ಚೇತನ್ ಬಣಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೂ ಅದನ್ನು ತಂದೆ-ತಾಯಿಗೆ ಮನದಟ್ಟು ಮಾಡಿ. ಯಕ್ಷಗಾನದ ಹಾಡಿನಲ್ಲಿ ಅಂದರೆ ಯಕ್ಷಗಾನ ಸಾಹಿತ್ಯದಲ್ಲಿ ಆರತಿಹಾಡು, ಸೋಬಾನೆ ಹಾಡುಗಳ ಚೆಲುವು, ಗಾದೆ ಮಾತು, ಭಾಷಾಪ್ರಯೋಗದ ಸೌಂದರ್ಯ ಭಾವಗೀತಾತ್ಮಕತೆ, ಶಬ್ದಾಲಂಕಾರ, ಬೆಡಗು, ರೂಪಕ ಹೇಗೆ ಪ್ರಭಾವಿಸಿವೆ ಎಂಬುದನ್ನು ಪರಿಚಯಿಸಲಾಗಿದೆ ಎಂದರು.

ಕಸಾಪ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಉಪನ್ಯಾಸಕರಾದ ಆನಂದ ಕರುವಿನ, ಶಿಕ್ಷಕರಾದ ಹೊನ್ನಪ್ಪ, ಟಿ. ಶಶಿಕಲಾ, ಡಿ. ಮಾಲ ವಿ. ಹಿರೇಮಠ, ಸುಧಾ ಜಿ., ಶರಣಮ್ಮ, ಕೆ. ಶಶಿಕಲಾ ಎಂ. ಸೇರಿದಂತೆ ಇತರರು ಇದ್ದರು.

ಹರಪನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆದರ್ಶ ಮಹಿಳಾ ಮಂಡಳಿ ಹಾಗೂ ಯಕ್ಷಗಾನ ಅಕಾಡೆಮಿ ವತಿಯಿಂದ ಮೂಡಲಪಾಯ ತರಬೇತಿ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ಪುಟ್ಟಸ್ವಾಮಿ ಉದ್ಘಾಟಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು