ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆಸಂಸ್ಕಾರವನ್ನು ಜಾಗೃತ ಮಾಡುವ, ದ್ವೇಷ ದೂರಮಾಡಿ ಸಮಚಿತ್ತದಿಂದ ಬದುಕುವಂತಾಗಬೇಕೆಂಬ ಮೂಲ ಉದ್ದೇಶದಿಂದ ಪ್ರಾರಂಭವಾದ ಕಲೆಯೇ ಯಕ್ಷಗಾನ ಎಂದು ಸಂಸ್ಕೃತ ಪ್ರಾಧ್ಯಾಪಕ ಡಾ.ರಾಘವೇಂದ್ರ ರಾವ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಿಂಗ ನಾವಡ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಕಾರ್ಕಡ ರಾಜು ಪೂಜಾರಿ ವಹಿಸಿದ್ದರು.
ವೇದಿಕೆಯಲ್ಲಿ ಬಿಲಿಯನೇರ್ ರೈತ ಪ್ರಶಸ್ತಿ ಪುರಸ್ಕೃತ ರಮೇಶ ನಾಯಕ್ ತೆಕ್ಕಟ್ಟೆ, ಬೆಳ್ವೆ ಸತೀಶ ಕಿಣಿ, ಗಣಪಯ್ಯ ನಾವಡ ಉಪಸ್ಥಿತರಿದ್ದರು.ಕಾಳಿಂಗ ನಾವಡ ಸ್ಮರಣೆಯಲ್ಲಿ ಹಿರಿಯ ಭಾಗವತ ಕಲಾಕೇಂದ್ರದ ಹಿಂದಿನ ವಿದ್ಯಾರ್ಥಿ ನಾರಾಯಣ ಶಬರಾಯರಿಗೆ ‘ನಮ್ಮ ಕಾಳಿಂಗ’ ಪ್ರಶಸ್ತಿ ಪ್ರದಾನಿಸಲಾಯಿತು. ಬಿಲಿಯನೇರ್ ರೈತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ತೆಕ್ಕಟ್ಟೆ ರಮೇಶ ನಾಯಕರನ್ನು ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಅಕ್ಷಯ ಶಾಸ್ತ್ರಿ ಬಳಗದವರಿಂದ ಸ್ವರನಾದ ಸಿಂಚನ, ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರದರ್ಶನ ನಂತರ ಕೊಂಡದಕುಳಿ ರಾಮಚಂದ್ರ ಹೆಗಡೆ ಸಂಯೋಜನೆಯಲ್ಲಿ ವಿಭೀಷಣ ನೀತಿ ಮತ್ತು ಕೈಕಸಾ ನೀತಿ ಯಕ್ಷಗಾನ ಪ್ರದರ್ಶನ ಪ್ರದರ್ಶನಗೊಂಡಿತ್ತು.