ಮಕ್ಕಳ ಆರೈಕೆಯಲ್ಲಿ ನಿಗಾವಹಿಸಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಮಕ್ಕಳಿಗೆ ಕಲಿಕಾ ಪೂರ್ವ ಚಟುವಟಿಕೆ, ಆಟೋಟ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರಾಗುವಂತೆ ಮಾಡುವಲ್ಲಿ ಆರೈಕೆದಾರರ ಪಾತ್ರ ತುಂಬ ಮಹತ್ವದ್ದಾಗಿದೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಗ್ರಾಪಂ ಶಿಶುಪಾಲನಾ ಕೇಂದ್ರಗಳಲ್ಲಿರುವ ಮಕ್ಕಳ ಆರೈಕೆಯನ್ನು ಜಾಗ್ರತೆಯಿಂದ ನಿರ್ವಹಿಸಬೇಕೆಂದು ಕೊಪ್ಪಳ ತಾಪಂ ನರೇಗಾ ಸಹಾಯಕ‌ ನಿರ್ದೇಶಕ ಯಂಕಪ್ಪ ಕರೆ ನೀಡಿದರು.

ತಾಪಂ ಸಭಾಂಗಣದಲ್ಲಿ ನರೇಗಾದಡಿ ಗ್ರಾಮೀಣ ಶಿಶುಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರಿಗೆ ಏರ್ಪಡಿಸಿದ್ದ 7 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪ್ರತಿ ಗ್ರಾಪಂಗೆ ಒಂದರಂತೆ ಶಿಶುಪಾಲನಾ ಕೇಂದ್ರ ತೆರೆಯಲಾಗಿದೆ. ದಾಖಲಾಗುವ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ಆರೈಕೆದಾರರ ನೇಮಿಸಲಾಗಿದೆ. ಆ ದಿಸೆಯಲ್ಲಿ ಮಕ್ಕಳಿಗೆ ಕಲಿಕಾ ಪೂರ್ವ ಚಟುವಟಿಕೆ, ಆಟೋಟ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರಾಗುವಂತೆ ಮಾಡುವಲ್ಲಿ ಆರೈಕೆದಾರರ ಪಾತ್ರ ತುಂಬ ಮಹತ್ವದ್ದಾಗಿದೆ ಎಂದರು.ತಾಲೂಕು ಯೋಜನಾಧಿಕಾರಿ ರಾಜೇಸಾಬ್‌ ನದಾಫ್ ಮಾತನಾಡಿ, ಕಾಲ ಕಾಲಕ್ಕೆ ಮೇಲಧಿಕಾರಿಗಳು ಶಿಶುಪಾಲನಾ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಯಾವುದೇ ಲೋಪದೋಷ ಉಂಟಾಗದಂತೆ ಕ್ರಮ ವಹಿಸಬೇಕು. ಶಿಶುಪಾಲನಾ ಕೇಂದ್ರಗಳು ಮಾದರಿ ಕೇಂದ್ರಗಳಾಗಿ ನಿರ್ಮಿಸುವಲ್ಲಿ ಆರೈಕೆದಾರರ ಬಹುಮುಖ್ಯ ಪಾತ್ರವಾಗಿದೆ ಎಂದರು.ಮಕ್ಕಳು ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗುತ್ತಿರುವುದರಿಂದ ಇದು ಸೂಕ್ಷ್ಮ ವಿಷಯವಾಗಿದೆ. ಎಲ್ಲರೂ ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು. ಈ ಕುರಿತು ಆರೈಕೆದಾರರು ವೈಯಕ್ತಿಕ ಗಮನಹರಿಸಿ ಮಕ್ಕಳನ್ನು ಆರೈಕೆ ಮಾಡತಕ್ಕದ್ದು. ಇದರಲ್ಲಿ ಯಾವುದೇ ಕಾರಣಕ್ಕೂ ಕರ್ತವ್ಯ ನಿರ್ಲಕ್ಷ್ಯ ವಹಿಸುವಂತಿಲ್ಲವೆಂದು ಸೂಚಿಸಿದರು.ಕಾರ್ಯಕ್ರಮದಲ್ಲಿ ತಾಪಂನ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತರಬೇತಿ ಮಾಸ್ಟರ್ ಟ್ರೈನರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಜಯಶ್ರೀ, ಮೇಲ್ವಿಚಾರಕಿ ಭುವನೇಶ್ವರಿ, ತಾಪಂ ಸಿಬ್ಬಂದಿ ಬಸವರಾಜ ಬಳಿಗಾರ, ಗಂಗಾಧರ, 38 ಗ್ರಾಪಂ ಕ್ಕಳ ಆರೈಕೆದಾರರು ಹಾಜರಿದ್ದರು.

Share this article