ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಲ್ಲುವ ವ್ಯಕ್ತಿಗಳನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡುವ ಪಿತೂರಿಯ ಮುಂದುವರಿದ ಭಾಗವಾಗಿ ಬಿ.ಎಲ್.ಸಂತೋಷ್ ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ಧರ್ಮಸ್ಥಳ ಪರ ನಿಂತ ವ್ಯಕ್ತಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ವಿಫಲ ಪ್ರಯತ್ನದಲ್ಲಿ ಮತಾಂಧ ಶಕ್ತಿಗಳು ನಿರತವಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ವಿರುದ್ಧ ಸೆಡ್ಡು ಹೊಡೆದು ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಹಿಂದೂ ವಿರೋಧಿ ಶಕ್ತಿಗಳ ವಿರುದ್ಧ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಲ್ಲುವ ವ್ಯಕ್ತಿಗಳನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡುವ ಪಿತೂರಿಯ ಮುಂದುವರಿದ ಭಾಗವಾಗಿ ಬಿ.ಎಲ್.ಸಂತೋಷ್ ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ಧರ್ಮಸ್ಥಳ ಪರ ನಿಂತ ವ್ಯಕ್ತಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ವಿಫಲ ಪ್ರಯತ್ನದಲ್ಲಿ ಮತಾಂಧ ಶಕ್ತಿಗಳು ನಿರತವಾಗಿದೆ.ಬಾಲ್ಯದಿಂದಲೇ ರಾಷ್ಟ್ರೀಯತೆ, ಹಿಂದುತ್ವದ ವಿಚಾರಗಳಲ್ಲಿ ಪ್ರೇರಣೆ ಪಡೆದು ಓರ್ವ ಇಂಜಿನಿಯರಿಂಗ್ ಪದವೀಧರಾಗಿದ್ದರೂ ರಾಷ್ಟ್ರಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟು, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ನನ್ನಂತಹ ಕೋಟ್ಯಾಂತರ ಕಾರ್ಯಕರ್ತರ ಪಾಲಿನ ಮಾರ್ಗದರ್ಶಕರಾಗಿ ತಾಯಿ ಭಾರತಿಯ ಸೇವೆಯಲ್ಲಿ ನಿರತವಾಗಿರುವ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಸಮಸ್ತ ಹಿಂದೂ ಕಾರ್ಯಕರ್ತರಿಗೆ ಮಾಡಿದ ಅಪಮಾನ.
ಇಂತಹ ಹೇಳಿಕೆಗಳ ಮೂಲಕ ಬಿ.ಎಲ್. ಸಂತೋಷ್ ಅವರ ಧರ್ಮಪರ ಹೋರಾಟ ತಡೆಯಲು ಸಾಧ್ಯವಿಲ್ಲ. ಮತಾಂಧ ಶಕ್ತಿಗಳ, ಜಿಹಾದಿ ಮನಸ್ಥಿತಿಯ ಹಿಂದೂ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿರುವ ವ್ಯಕ್ತಿಗಳ ಹೀನ ಮನಸ್ಥಿತಿ ಈ ಹೇಳಿಕೆಯಿಂದ ಬಯಲಾಗಿದ್ದು, ಧರ್ಮಸ್ಥಳ ಕ್ಷೇತ್ರದ ಪರ ನಿಂತಿರುವ ಹಿಂದೂ ನಾಯಕರ ತೇಜೋವಧೆ ಮಾಡುವ ಶಕ್ತಿಗಳ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಹಿಂದೂ ಕಾರ್ಯಕರ್ತರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಯಶ್ಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.