ಕಸ್ತೂರಿ ರಂಗನ್ ವಿರೋಧ ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷಕನ್ನಡಪ್ರಭ ವಾರ್ತೆ ಯಲ್ಲಾಪುರ
ಸೋಮವಾರ ತಾಲೂಕಿನ ವೆಂಕಟರಮಣ ಸಭಾಂಗಣದಲ್ಲಿ ಕಸ್ತೂರಿ ರಂಗನ್ ವಿರೋಧ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಕಣ್ಣೀಗೇರಿ, ಹಿತ್ಲಳ್ಳಿ, ಕುಂದರಗಿ, ನಂದೊಳ್ಳಿ, ಉಮ್ಮಚಗಿ, ಮಾವಿನಮನೆ, ಹಾಸಣಗಿ, ಆನಗೋಡ, ಮದನೂರು, ಚಂದಗುಳಿ, ದೇಹಳ್ಳಿ, ಕಂಪ್ಲಿ, ವಜ್ರಳ್ಳಿ, ಇಡಗುಂದಿ, ಕಿರವತ್ತಿ ಗ್ರಾಪಂ ವ್ಯಾಪ್ತಿಯ ೮೪ ಹಳ್ಳಿಗಳು ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ ಎಂದರು.ಇತ್ತೀಚಿನ ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆಯಂತೆ ಪರಿಸರ ಅತೀ ಸೂಕ್ಷ್ಮ ಪ್ರದೇಶ ನಿಗದಿಗೊಳಿಸುವ ಅಂಶವು ಜನಜೀವನದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ, ವರದಿ ಅನುಷ್ಟಾನದ ಪೂರ್ವದಲ್ಲಿ ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಸಭೆಯಲ್ಲಿ ತಾಲೂಕಾಧ್ಯಕ್ಷ ಭೀಮಶೀ ವಾಲ್ಮೀಕಿ, ಸಂಚಾಲಕರಾದ ಚಂದ್ರಶೇಖರ ಪೂಜಾರಿ, ರಾಘವೇಂದ್ರ ಕುಣಬಿ, ಅಣ್ಣಪ್ಪ ನಾಯ್ಕ ಕಣ್ಣೀಗೇರಿ, ಪ್ರಶಾಂತ್ ಜೈನ ಅಟಬೈಲ್, ಸೀತಾರಾಮ ನಾಯ್ಕ ಕುಂದರಗಿ, ಸುಬ್ರಾಯ ಹೆಗಡೆ ಆನಗೋಡ, ವಿನೋದ ತಳಕೇರಿ ಹಾಸಣಗಿ, ಯೋಗೇಶ ನಾಯ್ಕ, ಅರವೀಸ್ ಫರ್ನಾಂಡಿಸ್ ಬಸ್ತ್ಯಾಂವ್ ಡಿಸೋಜಾ, ಶಿವರಾಮ ಆಚಾರಿ, ಸಹದೇವ ಗಾವಡಿ, ರಾಘವೇಂದ್ರ ಮರಾಠಿ, ಕೃಷ್ಣ ಕುಣಬಿ ಮುಂತಾದವರಿದ್ದರು.