ಒತ್ತಡಮುಕ್ತ ಜೀವನಕ್ಕೆ ಯೋಗ ಪ್ರಾಣಾಯಾಮ ಅಗತ್ಯ

KannadaprabhaNewsNetwork |  
Published : Oct 06, 2026, 01:30 AM IST
5ಎಚ್ಎಸ್ಎನ್9 :  | Kannada Prabha

ಸಾರಾಂಶ

ದೈನಂದಿನ ಬದುಕಿನಲ್ಲಿ ನಿರಂತರವಾಗಿ ಒತ್ತಡಮುಕ್ತವಾಗಿರಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ದಿನದ ೨೪ ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ಸ್ವಂತ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಾಗಿ ಮೀಸಲಿಟ್ಟು ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಧ್ಯಾನದಿಂದ ಮನಸ್ಸು ಶಾಂತವಾಗುವುದಲ್ಲದೆ, ಶಾಂತ ಮನಸ್ಸಿನಿಂದ ಕೈಗೊಳ್ಳುವ ನಿರ್ಧಾರಗಳು ಹೆಚ್ಚು ಸಮಯೋಚಿತವಾಗಿರುತ್ತವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಮಹಿಳೆಯರು ಒತ್ತಡಮುಕ್ತರಾಗಿದ್ದಾಗ ಮಾತ್ರ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ನಿತ್ಯ ಜೀವನದಲ್ಲಿ ಮಾನಸಿಕ ನೆಮ್ಮದಿ ಹಾಗೂ ಶಾಂತಿಗಾಗಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ವೇದಶ್ರೀ ರಾಜ್ ತಿಳಿಸಿದರು.ನಗರದಲ್ಲಿ ಶ್ರೀ ಕುವೆಂಪು ಮಹಿಳಾ ಸಂಘದ ಅಕ್ಟೋಬರ್‌ ತಿಂಗಳ ಮಾಸಿಕ ಸಭೆಯಲ್ಲಿ ‘ಮಹಿಳೆಯರ ಪ್ರಸ್ತುತ ಜೀವನಶೈಲಿಯಲ್ಲಿ ಒತ್ತಡಮುಕ್ತ ಜೀವನ ಸಾಧ್ಯವೇ?’ ಎಂಬ ವಿಷಯ ಕುರಿತು ಅವರು ಮಾತನಾಡಿ, ಪ್ರಸ್ತುತ ಜೀವನಶೈಲಿಯಲ್ಲಿ ಮಹಿಳೆಯರು ಒತ್ತಡ ನಿವಾರಣೆಗೆ ಪ್ರವಾಸ, ಸಭೆ-ಸಮಾರಂಭಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ಹಲವು ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಿಂದ ತಾತ್ಕಾಲಿಕವಾಗಿ ನೆಮ್ಮದಿ ದೊರೆಯಬಹುದಾದರೂ, ದೈನಂದಿನ ಬದುಕಿನಲ್ಲಿ ನಿರಂತರವಾಗಿ ಒತ್ತಡಮುಕ್ತವಾಗಿರಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ದಿನದ ೨೪ ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ಸ್ವಂತ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಾಗಿ ಮೀಸಲಿಟ್ಟು ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಧ್ಯಾನದಿಂದ ಮನಸ್ಸು ಶಾಂತವಾಗುವುದಲ್ಲದೆ, ಶಾಂತ ಮನಸ್ಸಿನಿಂದ ಕೈಗೊಳ್ಳುವ ನಿರ್ಧಾರಗಳು ಹೆಚ್ಚು ಸಮಯೋಚಿತವಾಗಿರುತ್ತವೆ ಎಂದರು.ಹಾಸನದಲ್ಲಿ ಆರ್ಟ್‌ ಆಫ್ ಲಿವಿಂಗ್ ವತಿಯಿಂದ ನಡೆಯುವ ‘ಆನಂದ ಅನುಭೂತಿ’ (ಹ್ಯಾಪಿನೆಸ್ ಪ್ರೋಗ್ರಾಂ) ಶಿಬಿರಗಳ ಕುರಿತು ಮಾಹಿತಿ ನೀಡಿದ ಅವರು, ಒತ್ತಡಮುಕ್ತ ಜೀವನ ನಡೆಸಲು ಈ ತರಬೇತಿ ಶಿಬಿರಗಳು ಸಹಕಾರಿಯಾಗಲಿವೆ ಎಂದರು. ಬಳಿಕ ಸದಸ್ಯರಿಗೆ ಪ್ರಾಣಾಯಾಮ ಮತ್ತು ಧ್ಯಾನದ ಪ್ರಾತ್ಯಕ್ಷಿಕೆ ನಡೆಸಿ, ಉಸಿರಾಟದ ಮೂಲಕ ಕಡಿಮೆ ಸಮಯದಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಧಾನಗಳನ್ನು ತಿಳಿಸಿಕೊಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಹೇಮಲತಾ ಕಮಲ್ ಕುಮಾರ್ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಪ್ರಾಣಾಯಾಮ ಮತ್ತು ಧ್ಯಾನದ ಅಗತ್ಯದ ಕುರಿತು ಸದಸ್ಯರಿಗೆ ಅರಿವು ಮೂಡಿಸಿರುವುದು ಉಪಯುಕ್ತವಾಗಿದೆ ಎಂದು ಹೇಳಿದರು.

ಇದೇ ವೇಳೆ ಜಾಹ್ನವಿ ನಟರಾಜ್ ಅವರ ಗೃಹದಲ್ಲಿ ಅವರ ಹಾಗೂ ಮುಕ್ತಾ ಅವರ ಆತಿಥ್ಯದಲ್ಲಿ ಸಭೆ ನಡೆಯಿತು. ಶೈಲಾ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೇಶ್ವರಿ ಹುಲ್ಲೇನಹಳ್ಳಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಲತಾ ಜಗದೀಶ್ ನಿರೂಪಿಸಿದರು, ಸ್ಮಿತಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನಪುಡಿ ಕಲಬೆರಕೆ ಪ್ರಕರ: ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ
ಮನ್ಮುಲ್ ಅಕ್ರಮಗಳ ಕುರಿತು ತನಿಖೆಗೆ ಮಾಜಿ ಅಧ್ಯಕ್ಷ ಆಗ್ರಹ