ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಯೋಗ ದಿನಾಚರಣೆ

KannadaprabhaNewsNetwork | Published : Jun 23, 2024 2:02 AM

ಸಾರಾಂಶ

ಮಾಹೆಯ ಯೋಗ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣ ಕೆ. ಯೋಗದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ವಿಶೇಷವಾಗಿ ಮಹಿಳೆಯರ ಆರೊಗ್ಯ ಪಾಲನೆಯಲ್ಲಿ ಯೋಗಾಭ್ಯಾಸದ ಮಹತ್ವ ವಿವರಿಸಿದರು,

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಶ್ರೀ ಧರ್ಮಸ್ಥ ಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಐ.ಕ್ಯೂ.ಎ.ಸಿ., ಸ್ವಸ್ಥವೃತ್ತ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳಿಗೆ ಯೋಗ ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಹೆಯ ಯೋಗ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣ ಕೆ. ಯೋಗದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ವಿಶೇಷವಾಗಿ ಮಹಿಳೆಯರ ಆರೊಗ್ಯ ಪಾಲನೆಯಲ್ಲಿ ಯೋಗಾಭ್ಯಾಸದ ಮಹತ್ವ ವಿವರಿಸಿದರು, ಜೊತೆಗೆ ಶಾರೀರಿಕ ಹಾಗೂ ಮಾನಸಿಕ ರೋಗಗಳನ್ನು ನಿಯಂತ್ರಣದಲ್ಲಿಡಲು ಆಯುರ್ವೇದ ಮತ್ತು ಯೋಗ ಸಹಕಾರಿ ಆಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಇತ್ತೀಚಿನ ದಿನಗಳಲ್ಲಿ ಯೋಗವು ಬಹಳ ಪ್ರಾಮುಖ್ಯವನ್ನು ಪಡೆಯುತ್ತಿದೆ. ಯೋಗಾಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ನಿರಂತರ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಬಹುದೆಂದು ತಿಳಿಸಿದರು.

ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಬಿ. ನೆಗಳೂರು ಅವರು ಯೋಗ ದಿನಾಚರಣೆಯ ಮಹತ್ವ ಹಾಗೂ ೨೦೨೪ರ ಧ್ಯೇಯ ವಾಕ್ಯ‘ ವೈಯಕ್ತಿಕ ಮತ್ತು ಸಾಮಾಜಿಕ ಆರೊಗ್ಯಕ್ಕಾಗಿ ಯೋಗ’ ಇದರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶ್ರೀಲತಾ ಕಾಮತ್ (ಶೈಕ್ಷಣಿಕ ವಿಭಾಗ), ಡಾ. ವಿದ್ಯಾಲಕ್ಷ್ಮೀ, ಡಾ. ಯೋಗೀಶ ಆಚಾರ್ಯ, ಡಾ. ಸಂದೇಶ್ ಕುಮಾರ್ ಶೆಟ್ಟಿ, ಡಾ. ಶ್ರೀನಿಧಿ ಧನ್ಯ ಬಿ.ಎಸ್, ಡಾ. ಸೌಮ್ಯಾ ಭಟ್ ಉಪಸ್ಥಿತರಿದ್ದರು.

ಸ್ನಾತಕೊತ್ತರ ವಿದ್ಯಾರ್ಥಿನಿ ಡಾ. ಜೆಲಿನ್ ಜಾರ್ಜ್ ಸ್ವಾಗತಿಸಿದರು. ಡಾ. ಪ್ರಜ್ಞಾ ಯೋಗ ದಶಾಹ ಹಾಗೂ ಯೋಗ ಸ್ಪರ್ಧೆಗಳ ವರದಿ ವಾಚಿಸಿದರು. ಡಾ. ಮೇರಿ ತಬಿತ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶ್ರೀರಕ್ಷಾ ವಂದಿಸಿದರು.

Share this article