ಸಬ್‌ಜೈಲಲ್ಲಿ ನಿತ್ಯ ಕೈದಿಗಳಿಗೆ ಯೋಗ, ಧ್ಯಾನ ಕಲಿಕೆ

KannadaprabhaNewsNetwork |  
Published : Mar 29, 2026, 02:30 AM IST
ಧ್ಯಾನ | Kannada Prabha

ಸಾರಾಂಶ

ಕೈದಿಗಳ ಮನಸ್ಸು ಬಹಳ ಚಂಚಲ. ತಿಳಿದೋ ತಿಳಿಯದೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರುತ್ತಾರೆ. ಅವರ ಮನಪರಿವರ್ತನೆ ಅತ್ಯಗತ್ಯ ಹಾಗೂ ಅನಿವಾರ್ಯ. ಹೀಗಾಗಿಯೇ ವರ್ಷಕ್ಕೆ ಒಂದೆರಡು ಸಲ ಯೋಗ ಶಿಕ್ಷಕರನ್ನು ಕರೆಯಿಸಿ ಯೋಗ, ಧ್ಯಾನದ ಶಿಬಿರ ಆಯೋಜಿಸುವುದು ಮಾಮೂಲಿ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕೈದಿಗಳ ಮನಪರಿವರ್ತನೆಗೆ ಆಗಾಗ ಯೋಗ ಶಿಬಿರಗಳನ್ನು ಜೈಲುಗಳಲ್ಲಿ ಆಯೋಜಿಸುವುದು ಮಾಮೂಲಿ. ಆದರೆ, ಹುಬ್ಬಳ್ಳಿ ಸಬ್‌ ಜೈಲ್‌ನಲ್ಲಿ ಕಳೆದ ಎರಡು ತಿಂಗಳಿಂದ ಯೋಗ, ಧ್ಯಾನದ ತರಬೇತಿ ಕಡ್ಡಾಯ ಮಾಡುವ ಮೂಲಕ ಕೈದಿಗಳ ಮನಪರಿವರ್ತನೆಗೆ ಮುಂದಡಿ ಇಟ್ಟಿದೆ.

ಕೈದಿಗಳ ಮನಸ್ಸು ಬಹಳ ಚಂಚಲ. ತಿಳಿದೋ ತಿಳಿಯದೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರುತ್ತಾರೆ. ಅವರ ಮನಪರಿವರ್ತನೆ ಅತ್ಯಗತ್ಯ ಹಾಗೂ ಅನಿವಾರ್ಯ. ಹೀಗಾಗಿಯೇ ವರ್ಷಕ್ಕೆ ಒಂದೆರಡು ಸಲ ಯೋಗ ಶಿಕ್ಷಕರನ್ನು ಕರೆಯಿಸಿ ಯೋಗ, ಧ್ಯಾನದ ಶಿಬಿರ ಆಯೋಜಿಸುವುದು ಮಾಮೂಲಿ. ಇನ್ನು ಕೆಲ ಸಂಘಟನೆಗಳು ಜೈಲಿಗೆ ತೆರಳಿ ರಕ್ಷಾ ಬಂಧನದಂತಹ ಕಾರ್ಯಕ್ರಮ ಮಾಡುತ್ತಾರೆ. ಆದರೆ, ಯಾವಾಗಲೊಮ್ಮೆ ಮಾಡುವ ಯೋಗ, ಧ್ಯಾನದ ಶಿಬಿರಗಳಿಂದ ಕೈದಿಗಳ ಮನಪರಿವರ್ತನೆ ಕಷ್ಟ. ಆ ಶಿಬಿರ ಮುಗಿದ ಮೇಲೆ ಒಂದಿಬ್ಬರು ಕೈದಿಗಳಷ್ಟೇ ಯೋಗಾಸನ ಮುಂದುವರಿಸುತ್ತಾರೆ. ಉಳಿದಂತೆ ಮತ್ತೆ ಯಥಾಪ್ರಕಾರ ಅವರ ಬದುಕು ಸಾಗುತ್ತದೆ. ಆದರೆ, ನಿತ್ಯ ಯೋಗ ಹಾಗೂ ಧ್ಯಾನದ ಶಿಬಿರ ಏರ್ಪಡಿಸಿದರೆ ಅವರಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು ಎಂಬ ಉದ್ದೇಶದಿಂದ ಹುಬ್ಬಳ್ಳಿಯಲ್ಲಿನ ಸಬ್‌ಜೈಲಿನಲ್ಲಿ ಕಳೆದ ಎರಡು ತಿಂಗಳಿನಿಂದ ಯೋಗ ಹಾಗೂ ಧ್ಯಾನದ ತರಬೇತಿ ನಡೆಸಲಾಗುತ್ತಿದೆ.

ಸಬ್‌ಜೈಲ್‌ ಪಕ್ಕದಲ್ಲೇ ಇರುವ ಪಿರಾಮಿಡ್‌ ಧ್ಯಾನ ಮಂದಿರದಿಂದ ಇಬ್ಬರು ಶಿಕ್ಷಕರನ್ನು ಕರೆಯಿಸಿ ಕೈದಿಗಳಿಗಾಗಿ ಧ್ಯಾನ ಹಾಗೂ ಯೋಗ ಶಿಬಿರ ಆಯೋಜಿಸಲಾಗುತ್ತಿದೆ. ಇದರಲ್ಲಿ ಎಲ್ಲ ಕೈದಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕಿದ್ದು ನಿತ್ಯ ಬೆಳಗ್ಗೆ 1 ಗಂಟೆ ಯೋಗ ಹಾಗೂ ಧ್ಯಾನಕ್ಕೆ ಮೀಸಲಿಟ್ಟು ಕೆಲವೊಂದಿಷ್ಟು ಆಸನ ಹೇಳಿಕೊಡಲಾಗುತ್ತಿದೆ. ಇದು ಅವರಲ್ಲಿ ಋಣಾತ್ಮಕ ಭಾವನೆ ಹೋಗಲಾಡಿಸಿ ಸಕಾರಾತ್ಮಕತೆ ಹೆಚ್ಚಿಸಲು ಸಹಕಾರಿಯಾಗುತ್ತಿದೆ. ಇದು ಸಹಜವಾಗಿ ಕೈದಿಗಳ ಮನಪರಿವರ್ತನೆಗೆ ಸಹಕಾರಿಯಾಗುತ್ತಿದೆ.

ಹುಬ್ಬಳ್ಳಿ ಸಬ್‌ಜೈಲಲ್ಲಿ 130 ಜನ ವಿಚಾರಣಾಧೀನ ಕೈದಿಗಳಿದ್ದು ಅವರಿಗೆ ಪಿರಾಮಿಡ್‌ ಧ್ಯಾನ ಮಂದಿರದ ಪೂರ್ಣಿಮಾ ಸೇರಿದಂತೆ ಇಬ್ಬರು ಯೋಗ ಶಿಕ್ಷಕರು ಯೋಗ ಹಾಗೂ ಧ್ಯಾನದ ತರಬೇತಿ ನೀಡುತ್ತಿದ್ದಾರೆಂದು ಜೈಲಿನ ಸಿಬ್ಬಂದಿ ತಿಳಿಸಿದ್ದಾರೆ. ಬಾಕ್ಸ್‌...

ಗಾಂಜಾ, ಮೊಬೈಲ್‌ ಬಳಕೆಗೂ ಕಡಿವಾಣ ಹಾಕಿಜೈಲುಗಳಲ್ಲಿ ಗಾಂಜಾ, ಮೊಬೈಲ್‌ ಬಳಕೆಯೂ ಆಗಾಗ ನಡೆಯುತ್ತಲೇ ಇರುತ್ತದೆ. ಇದು ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ಇವುಗಳಿಗೆಲ್ಲ ಜೈಲಿನ ಸಿಬ್ಬಂದಿ ಸಾಥ್‌ ಇಲ್ಲದೇ ಕೈದಿಗಳು ಮಾಡುವುದಿಲ್ಲ ಎಂಬುದು ಅಷ್ಟೇ ಸ್ಪಷ್ಟ. ಇಂಥ ಕೆಲಸಗಳಿಗೂ ಕಡಿವಾಣ ಹಾಕಲು ಅಧಿಕಾರಿ ವರ್ಗ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.ಕೋಟ್‌...

ಮೊದಲು ಜೈಲುಗಳಲ್ಲಿ ವರ್ಷಕ್ಕೆ ಒಂದೆರಡು ಸಲ ಯೋಗ ಅಥವಾ ಧ್ಯಾನದ ಶಿಬಿರ ಏರ್ಪಡಿಸಲಾಗುತ್ತಿತ್ತು. ಇದು ಅಷ್ಟೊಂದು ಉಪಯುಕ್ತವಾಗುತ್ತಿರಲಿಲ್ಲ. ಆಗಷ್ಟೇ ಮಾಡಿ ಮತ್ತೆ ಕೆಲ ದಿನಗಳಲ್ಲಿ ಅದನ್ನೆಲ್ಲ ಮರೆತೆ ಬಿಡುತ್ತಿದ್ದರು. ಆದರೆ ಕಳೆದ 2 ತಿಂಗಳಿಂದ ಪ್ರತಿನಿತ್ಯ ಯೋಗ, ಧ್ಯಾನದ ಕ್ಲಾಸ್‌ ಮಾಡಿಸಲಾಗುತ್ತಿದೆ. ಇದು ಕೈದಿಗಳ ಮನಪರಿವರ್ತನೆಗೆ ಸಹಕಾರಿಯಾಗುತ್ತಿದೆ.

ಶಂಶುದ್ಧೀನ, ಸುಪ್ರೀಂಟೆಂಡೆಂಟ್‌, ಸಬ್‌ ಜೈಲ್‌ ಹುಬ್ಬಳ್ಳಿಫೋಟೋ ನಂತರ ಕೊಡಲಾಗುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಣಿಪಾಲ ಕೆಎಂಸಿ: ರಕ್ತ ವರ್ಗಾವಣೆ ಸೇವೆ ರಾಷ್ಟ್ರೀಯ ಕಾರ್ಯಾಗಾರ
ಆರೋಗ್ಯ ಸ್ಥಿರವಾಗಿಟ್ಟುಕೊಳ್ಳಲು ಆಯುರ್ವೇದ ಸಹಕಾರಿ