ಆರೋಗ್ಯಯುತ ಜೀವನಕ್ಕೆ ಯೋಗಾಭ್ಯಾಸ ಅವಶ್ಯ: ಯಂಕಪ್ಪ

KannadaprabhaNewsNetwork |  
Published : Jun 22, 2024, 12:45 AM IST
21ಕೆಪಿಎಲ್21ಅಂತರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯತಿ ಹಾಗು ಕೆರೆ ಅಭಿವೃದ್ದಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಯೋಗಭ್ಯಾಸ ಮತ್ತು ಪ್ರಾಣಾಯಮ ಅಭ್ಯಾಸ ಕಾರ್ಯಕ್ರಮ | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಅಭ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಸ್ತುತ ಒತ್ತಡದ ದಿನಗಳಲ್ಲಿ ನಾವೆಲ್ಲಾ ಆರೋಗ್ಯಯುತ ಜೀವನ ನಡೆಸಲು ಯೋಗಭ್ಯಾಸ ಬಹಳ ಮುಖ್ಯ ಎಂದು ತಾಲೂಕು ಪಂಚಾಯತಿಯ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಅಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ದಿನದಲ್ಲಿ ಆಹಾರ ಪದ್ಧತಿ ಬಹು ಮುಖ್ಯವಾದದು. ಆಹಾರ ಪದ್ದತಿಯನ್ನು ನಾವು ಬದಲಾವಣೆ ಮಾಡಿಕೊಳ್ಳುವುದು ಸೂಕ್ತ. ಬದಲಾವಣೆ ಮಾಡಿಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ ಎಂದರು.

ಆಧುನಿಕ ಜಗತ್ತಿನಲ್ಲಿರುವ ನಾವು ಒತ್ತಡ ಜೀವನ ಸಾಗಿಸುತ್ತಿದ್ದೇವೆ. ಆರೋಗ್ಯದಿಂದ ಇರಬೇಕಾದರೆ ಒಂದು ಗಂಟೆಯಾದರು ಯೋಗ ಮತ್ತು ಪ್ರಾಣಾಯಾಮವನ್ನು ರೂಢಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಋಷಿಮುನಿಗಳು ಯೋಗ ಮತ್ತು ಪ್ರಾಣಾಯಮದಿಂದ ಆರೋಗ್ಯವನ್ನು ಗೆಲ್ಲುವುದಕ್ಕೆ ಸಾಧ್ಯ ಎಂಬುದನ್ನು ಮನಗಂಡು ಸಾಧನೆಗೈದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಕಾಮನೂರು ಆಯುಷ್‌ ಆಸ್ಪತ್ರೆಯ ಯೋಗ ವಿಭಾಗದ ಡಾ. ಕಳಕೇಶ್ ಮಾತನಾಡಿ, ಯೋಗದಿಂದ ಅನೇಕ ಮಹತ್‌ ಸಾಧನೆಗಳನ್ನು ಮಾಡಬಹುದಾಗಿದೆ. ಮನಸ್ಸು ಮತ್ತು ದೇಹ ಆರೋಗ್ಯದಿಂದ ಇರಬೇಕಾದಲ್ಲಿ ನಾವುಗಳು ಕ್ರಮಬದ್ಧವಾಗಿ ಯೋಗಭ್ಯಾಸ ರೂಢಿಸಿಕೊಂಡು ನಮ್ಮ ಮನೆಯಲ್ಲಿರುವ ಸದಸ್ಯರಿಗೆ, ಸುತ್ತಮುತ್ತಲಿನವರಿಗೆ ಅದರ ಮಹತ್ವದ ಬಗ್ಗೆ ತಿಳಿ ಹೇಳಬೇಕು ಎಂದರು.

ಕಾರ್ಯಕ್ರಮದಲ್ಲಿ ಯೋಗದ ಅಭ್ಯಾಸ ಮತ್ತು ಪ್ರಾಣಾಯಮ ಭಂಗಿಗಳನ್ನು ಡಾ. ಕಳಕೇಶ್‌, ದೈಹಿಕ ಶಿಕ್ಷಕರಾದ ಬಸನಗೌಡ, ಗೊವಿಂದಶೆಟ್ಟರ ಹೇಳಿಕೊಟ್ಟರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರಂಜಿತಾ ಚವ್ಹಾಣ್, ಉಪಾಧ್ಯಕ್ಷ ಮಂಜುನಾಥ ಪಾಟೀಲ್‌, ಗ್ರಾಪಂ ಸದಸ್ಯರಾದ ಕರಿಯಪ್ಪ ಮೇಟಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಿಡಿಒ ಮಂಜುಳಾದೇವಿ ಹೂಗಾರ, ಮುಖಂಡರಾದ ನೀಲಪ್ಪ ಮೂರಮನಿ, ಗುರಪ್ಪ ಗುಡೇಕಾರ, ನೂರಸಾಬ ಹೊಸಮನಿ, ಶಂಕರಗೌಡ, ಮಲ್ಲಿಕಾರ್ಜುನ ಹಲಗೇರಿ, ಮಲ್ಲಿಕಾರ್ಜುನ ಕಾಸನಕಂಡಿ, ಶಂಕರ ಲಮಾಣಿ, ಹನಮೇಶ್‌ ನಾಯಕ, ದಾವಲ್‌ ಮಲ್ಲಿಕ್‌, ಕೆರೆ ಅಭಿವೃದ್ದಿ ಸದಸ್ಯರಾದ ಅನಿಲ್‌ ಜಾನಾ, ಹರ್ಷ, ಗ್ರಾಪಂ ಕಾರ್ಯದರ್ಶಿ ಮಂಜುನಾಥ, ಗ್ರಾಪಂ ಸಿಬ್ಬಂದಿ ಈಶ್ವರಯ್ಯ ಪೊಲೀಸ್‌ ಪಾಟೀಲ್‌, ರಾಜಾ, ರಾಜಾಭಕ್ಷಿ, ಆಶಾ ಕಾರ್ಯಕರ್ತರು, ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?