ಕೊಪ್ಪ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ಕೊಪ್ಪ ಕೆ.ಪಿ.ಎಸ್. ಪ್ರೌಢಶಾಲಾ ವಿಭಾಗ ಮತ್ತು ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಪ್ರಕಾಶ್ ಸಿ.ಎಚ್. ಉದ್ಘಾಟಿಸಿ ಮಾತನಾಡಿ, ಯೋಗದಿಂದ ಸರ್ವರೋಗಕ್ಕೂ ಮುಕ್ತಿ ಇದೆ. ಪ್ರತಿದಿನ ಯೋಗ ಮಾಡುವುದರಿಂದ ಮಾನಸಿಕ ಮತ್ತು ಶಾರೀರಿಕವಾಗಿ ಉಲ್ಲಾಸದಿಂದ ಇರಬಹುದು ಎಂದರು.
ನಂತರ ಮಕ್ಕಳಿಂದ ವಿವಿಧ ಯೋಗದ ಆಸನಗಳನ್ನು ಪ್ರದರ್ಶಿಸಲಾಯಿತು. ಆಯುರ್ವೇದ ಕಾಲೇಜು ವೈದ್ಯಕೀಯ ವಿದ್ಯಾರ್ಥಿಗಳಾದ ರಕ್ಷಿತಾ, ಅಂಕಿತ, ರೇಖಾನ್ವಿತ, ಕಿರಣ್ ಮತ್ತು ಪ್ರಜ್ವಲ್ ಎಲ್ಲಾ ಮಕ್ಕಳಿಗೆ ಯೋಗ ತರಬೇತಿ ನೀಡಿದರು. ಪ್ರಾಥಮಿಕ ವಿಭಾಗದಲ್ಲಿ ಡಾ.ಮಂಜುನಾಥ್ ಹೆಗಡೆ ಮತ್ತು ಡಾ.ಜೆನಿಯಾ ಧರಣಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.ಪ್ರಬಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಎಸ್.ಜಿ. ಮುಖ್ಯೋಪಾಧ್ಯಾಯ ರುದ್ರೇಶ್, ಎಸ್.ಡಿ.ಎಮ್.ಸಿ. ಸದಸ್ಯರಾದ ಜೀನತ್, ಸುಷ್ಮ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಮಾನಸಿಕ, ಶಾರೀರಿಕ ಸದೃಡತೆಗೆ ಯೋಗ ಸಹಕಾರಿಶೃಂಗೇರಿ: ಮನುಷ್ಯನಿಗೆ ನೆಮ್ಮದಿಯ ಜೀವನ ನಡೆಸಬೇಕು. ಆರೋಗ್ಯ ಉತ್ತಮವಾಗಿರಬೇಕು. ಮಾನಸಿಕ ಶಾರೀರಿಕ ಸದೃಢತೆಗೆ ಯೋಗ ಸಹಕಾರಿಯಾಗಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮೀತಿಯ ಅಧ್ಯಕ್ಷ ನಾಗೇಶ್ ಕಾಮತ್ ಹೇಳಿದರು.ಪಟ್ಟಣದ ಶ್ರೀ ರಾಮಕೃಷ್ಣ ಆಂಗ್ಲಮಾದ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗವು ಪ್ರಾಚಿನ ಋಷಿಮುನಿಗಳು ನೀಡಿದ ಕೊಡುಗೆಯಾಗಿದೆ.ಇದು ಜಗತ್ತಿಗೆ ಭಾರತೀಯರು ನೀಡಿದ ಕೊಡುಗೆಯಾಗಿದೆ.ಇಂದು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿಗೊಂಡಿದೆ ಎಂದರು.ಯೋಗ, ಧ್ಯಾನಗಳು ಆರೋಗ್ಯ ನೀಡುವುದರ ಜತೆಗೆ ಮಾನಸಿಕ ನೆಮ್ಮದಿ, ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಇಂದು ವಿಶ್ವಮಟ್ಟದಲ್ಲಿ ಯೋಗ ದಿನಾಚಾರಣೆ ನಡೆಯುತ್ತಿವುದು ಹೆಮ್ಮೆಯ ವಿಷಯ. ಯೋಗವು ನಾನು ಎನ್ನುವ ಬದಲು ನಾವು ಎನ್ನುವ ಭಾವನೆ ಮೂಡಿಸುತ್ತದೆ ಎಂದರು.ಶಾಲಾ ಆಡಳಿತ ಮಂಡಳಿ ಸದಸ್ಯ ಅಂಬಲಮನೆ ಸುಬ್ರಮಣ್ಯ, ಶಾಲಾ ಮುಖ್ಯಶಿಕ್ಷಕ ಮಹೇಶ್ವರಪ್ಪ ಮತ್ತಿತರರು ಹಾಜರಿದ್ದರು. ಮನಸ್ವಿ ಸ್ವಾಗತಿಸಿ ಪೂರ್ವ ನಿರೂಪಿಸಿ ವಂದಿಸಿದರು.