ಬೆಳಕುಮಾನಿ ಶಾಲೆಯಲ್ಲಿ ‘ಯೋಗ ಸಿಂಚನಾ’ ಚಾಲನೆ

KannadaprabhaNewsNetwork |  
Published : Oct 26, 2026, 03:45 AM IST
 | Kannada Prabha

ಸಾರಾಂಶ

ಮದೆನಾಡಿನ ಯುವ ಯೋಗಸಾಧಕಿ, 18 ದಾಖಲೆಗಳನ್ನು ಯೋಗಪ್ರದಶ೯ನದಲ್ಲಿ ಮಾಡಿರುವ ಸಿಂಚನಾ ಅವರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸುವ ಯೋಗಸಿಂಚನಾ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಸಿಂಚನ ಪ್ರಾಥಮಿಕ ಶಿಕ್ಷಣ ಪಡೆದ ಮದೆನಾಡು ವ್ಯಾಪ್ತಿಯ ಬೆಳಕುಮಾನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗಸಿಂಚನಾ ಚಾಲನೆಗೊಂಡಿದೆ.

ಮಡಿಕೇರಿ: ಮದೆನಾಡಿನ ಯುವ ಯೋಗಸಾಧಕಿ, 18 ದಾಖಲೆಗಳನ್ನು ಯೋಗಪ್ರದಶ೯ನದಲ್ಲಿ ಮಾಡಿರುವ ಸಿಂಚನಾ ಅವರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸುವ ಯೋಗಸಿಂಚನಾ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಸಿಂಚನ ಪ್ರಾಥಮಿಕ ಶಿಕ್ಷಣ ಪಡೆದ ಮದೆನಾಡು ವ್ಯಾಪ್ತಿಯ ಬೆಳಕುಮಾನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗಸಿಂಚನಾ ಚಾಲನೆಗೊಂಡಿದೆ.

ಶಾಲೆಯ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮಿ, ಶಿವರಾಮ್ , ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ, ಯಶೋದರ, ನಿವೃತ್ತ ಶಿಕ್ಷಕ ಶಿವರಾಮ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಸಿಂಚನ ಯೋಗ ಮಂತ್ರದ ಅರ್ಥ, ಅಷ್ಟಾಂಗ ಯೋಗವನ್ನು ವಿವರಿಸಿ, ಆಸನಗಳನ್ನು ಮಾಡಲು ಇರುವ ನಿಯಮಗಳು, ಮತ್ತು ಮಕ್ಕಳಿಗೆ ಯೋಗವಿದ್ಯೆ ಹೇಗೆ ಉಪಯೋಗಿ ಎಂಬುದನ್ನು ತಿಳಿಸಿದರು. ಸರಳ ವ್ಯಾಯಾಮ ಸೂರ್ಯ ನಮಸ್ಕಾರ, ಸೂರ್ಯ ನಮಸ್ಕಾರದ ಮಂತ್ರ, 12 ಆಸನಗಳ ಹೆಸರು, ಉಸಿರಾಟ ಕ್ರಮವನ್ನು ಸಿಂಚನಾ ತಿಳಿಸಿದರು.

ಸಿಂಚನಾಳ ಪೋಷಕರಾದ ಕೀರ್ತಿಕುಮಾರ್, ರೇಣುಕಾ , ಶಾಲೆಯ ಸಹಾಯಕ ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಶ್ಮಿ ಸಾಮಂತ್‌ಗೆ ಉಡುಪಿ ಬಿಜೆಪಿ ಅಭಿನಂದನೆ
ಮುದರಂಗಡಿ ಪ್ರಜಾಸೇವಾ ಸಭೆ: 44 ಅರ್ಜಿ ವಿಲೇ