- ವಿದ್ಯಾರ್ಥಿಗಳ ತಂಡದಿಂದ ವಂದೇ ಮಾತರಂ ಗೀತೆಗೆ ವಿವಿಧ ಭಂಗಿಯ ಆಸನ ಪ್ರದರ್ಶನಕನ್ನಡಪ್ರಭ ವಾರ್ತೆ ಹಿರಿಯೂರು
ಇನ್ನೂ ನಗರದ ಗಂಗಾ ಸೆಂಟ್ರಲ್ ಶಾಲೆಯಲ್ಲಿ ವಿದ್ಯಾರ್ಥಿಗಳ ತಂಡವೊಂದು ವಂದೇ ಮಾತರಂ ಗೀತೆ ಮೂಲಕ ವಿವಿಧ ಭಂಗಿಯ ಆಸನಗಳನ್ನು ಪ್ರದರ್ಶಿಸಿ ವಿಶೇಷ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಗಂಗಾ ಸೆಂಟ್ರಲ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಓಬಯ್ಯ, ಪ್ರಾಂಶುಪಾಲರಾದ ಶೈಲಜಾ ಹಾಗೂ ಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಮನವಿ ಟ್ರಸ್ಟ್ ವತಿಯಿಂದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಸಮ್ಮುಖದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಡಿ ಧರಣೇಂದ್ರಯ್ಯ, ಮನವಿ ಟ್ರಸ್ಟ್ ಅಧ್ಯಕ್ಷೆ ಮಾನಸ ಗೌಡ ಹಾಗೂ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾಧ್ಯಕ್ಷ ಉಮೇಶಣ್ಣ, ಹಿರಿಯ ಯೋಗ ಬಂಧು ತಿಪ್ಪಕ್ಕ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಹೇಮಲತಾ, ದೈಹಿಕ ಶಿಕ್ಷಕರಾದ ಡಾ. ರಾಧಿಕಾ ಮುಂತಾದವರು ಹಾಜರಿದ್ದರು.ಬ್ಯಾಡರಹಳ್ಳಿಯ ಅಧಿರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿಯೂ ಕೂಡ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಯೋಗ ಮಾಡುವುರ ಮೂಲಕ ವಿಶ್ವ ಯೋಗದಿನ ಆಚರಿಸಿದರು.--------------
ಹಿರಿಯೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಯೋಗ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಸುಜಾತಾ ಸುವರ್ಣ ಉದ್ಘಾಟನೆ ಮಾಡಿದರು.