ಯೋಗಾಸನ: ಮತ್ತೆ ಮೂರು ವಿಶ್ವ ದಾಖಲೆಗೆ ಸಿಂಚನ ಸಿದ್ಧತೆ

KannadaprabhaNewsNetwork |  
Published : Mar 10, 2025, 12:16 AM IST
ವಿಶ್ವ ದಾಖಲೆಗೆ ಸಿಂಚಾನ ಸಿದ್ಧತೆ   | Kannada Prabha

ಸಾರಾಂಶ

ಪ್ರಾಚೀನ ಆರೋಗ್ಯ ಕಲೆಯಾಗಿರುವ ಯೋಗಾಸನದ ಮೂಲಕ ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಸಿಂಚನ ಕೀರ್ತಿಕುಮಾರ್‌ ಇದೀಗ ತನ್ನದೇ ದಾಖಲೆ ಮುರಿಯಲು ಸಿದ್ಧತೆ ಮಾಡಿಕೊಂಡಿದ್ದಾಳೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಾಚೀನ ಆರೋಗ್ಯ ಕಲೆಯಾಗಿರುವ ಯೋಗಾಸನದ ಮೂಲಕ ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿ ಸಿಂಚನ ಕೀರ್ತಿಕುಮಾರ್, ಇದೀಗ ತನ್ನದೇ ದಾಖಲೆ ಮುರಿಯಲು ಸಿದ್ಧತೆ ಮಾಡಿಕೊಂಡಿದ್ದಾಳೆ.

ತಾನು ವ್ಯಾಸಂಗ ಮಾಡುತ್ತಿರುವ ಮದೆನಾಡಿನ ಬಿಜಿಎಸ್ ಶಾಲೆಯಲ್ಲಿ ಮಾ.12ರಂದು ಬೆಳಗ್ಗೆ 10 ಗಂಟೆಗೆ ಮೂರು ರೀತಿಯ ಯೋಗ ಪ್ರದರ್ಶನ ಮಾಡುವ ಮೂಲಕ ಸಿಂಚನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ನಲ್ಲಿ ಮೂರು ದಾಖಲೆಯನ್ನು ನಿರ್ಮಿಸಲಿದ್ದಾಳೆ. ಡಿಂಪಾಸನದಲ್ಲಿ ಒಂದು ನಿಮಿಷಕ್ಕೆ 15 ಮೀಟರ್ ಚಲಿಸುವುದು, ಉರಬ್ರಾಸನದಲ್ಲಿ ಒಂದು ನಿಮಿಷ ಅದೇ ಸ್ಥಿತಿಯಲ್ಲಿರುವುದು ಮತ್ತು ಮೃಗಮುಖಾಸನದಲ್ಲಿ ಕೂಡ ಒಂದು ನಿಮಿಷ ಏಕಸ್ಥಿತಿಯಲ್ಲಿರುವ ಯೋಗಾಸನವನ್ನು ಸಿಂಚನ ಪ್ರದರ್ಶಿಸಲಿದ್ದಾಳೆ. ಅಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮಧ್ಯಪ್ರದೇಶದ ಅಧಿಕಾರಿಗಳು ಉಪಸ್ಥಿತರಿದ್ದು, ತೀರ್ಪಿನೊಂದಿಗೆ ಅರ್ಹತಾ ಪತ್ರ ನೀಡಲಿದ್ದಾರೆ. ಈ ಹಿಂದೆಯೂ ಡಿಂಪಾಸನದಲ್ಲಿ ಒಂದು ನಿಮಿಷಕ್ಕೆ 10 ಮೀಟರ್ ಚಲಿಸಿ ವಿಶ್ವ ದಾಖಲೆ ಮೆರೆದಿದ್ದ ಸಿಂಚನ, ಈ ಬಾರಿ ಇದೇ ಆಸನದಲ್ಲಿ ತನ್ನದೇ ದಾಖಲೆಯನ್ನು ಮುರಿಯಲಿದ್ದಾಳೆ. ಈಗಾಗಲೇ ನಿರಾಲಾಂಬ ಪೂರ್ಣ ಚಕ್ರಾಸನದಲ್ಲಿ ಒಂದು ನಿಮಿಷಕ್ಕೆ 10 ಬಾರಿ ಮತ್ತು ಚಕ್ರಾಸನದಲ್ಲಿ ಒಂದು ನಿಮಿಷಕ್ಕೆ 25 ಬಾರಿ ಚಲಿಸಿ ವಿಶ್ವ ದಾಖಲೆ ಬರೆದಿದ್ದಾಳೆ.

::: ಅಮ್ಮನೇ ಗುರು :::

ತನ್ನ ಸಾಧನೆಯ ಕುರಿತು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಹರ್ಷ ಹಂಚಿಕೊಂಡ ಸಿಂಚನ, ನಾನು 6ನೇ ವರ್ಷದಿಂದಲೇ ಯೋಗಾಭ್ಯಾಸ ಮಾಡುತ್ತಿದ್ದೇನೆ, ನನಗೆ ನನ್ನ ಅಮ್ಮನೇ ಯೋಗ ಗುರು ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಅಮ್ಮ ನನ್ನ ಮೇಲಿಟ್ಟಿರುವ ವಿಶ್ವಾಸ, ಅಪ್ಪನ ಬೆಂಬಲ ಹಾಗೂ ಊರಿನವರ ಪ್ರೋತ್ಸಾಹದಿಂದ ಯೋಗದಲ್ಲಿ ವಿಶ್ವ ದಾಖಲೆ ಬರೆಯಲು ಸಾಧ್ಯವಾಯಿತು. ಮಾ.12ರಂದು ನನ್ನ ದಾಖಲೆಯನ್ನು ನಾನೇ ಮುರಿಯಲಿದ್ದು, ಮೂರು ಹೊಸ ದಾಖಲೆ ನಿರ್ಮಾಣಕ್ಕೆ ಎಲ್ಲರ ಪ್ರೋತ್ಸಾಹಬೇಕೆಂದು ಮನವಿ ಮಾಡಿದಳು.

ಸಿಂಚನಾಳ ತಾಯಿ ರೇಣುಕ ಕೀರ್ತಿಕುಮಾರ್ ಮಾತನಾಡಿ ನಾನು ಸ್ವತ: ಯೋಗ ಶಿಕ್ಷಕಿಯಾಗಿದ್ದು, ಯೋಗಾಸನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ನನ್ನಿಂದ ಸ್ಫೂರ್ತಿ ಪಡೆದ ಪುತ್ರಿ ಸಿಂಚನ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾಳೆ. ಮೂರು ವಿಶ್ವ ದಾಖಲೆ, ಒಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಒಂದು ರಾಜ್ಯ ಮಟ್ಟದ ದಾಖಲೆ ಮಾಡುವ ಮೂಲಕ ಐದು ದಾಖಲೆಗಳನ್ನು ಮಾಡಿದ್ದಾಳೆ. ಮಾ.12 ರಂದು ಮತ್ತೆ ಸಿಂಚನ ಮೂರು ವಿಶ್ವ ದಾಖಲೆಗಳನ್ನು ಮಾಡುವ ವಿಶ್ವಾಸವಿದೆ ಎಂದರು.

ಮದೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ ಮಾತನಾಡಿ ಭಾರತೀಯ ಪ್ರಾಚೀನ ಕಲೆ ಯೋಗ ವಿಶ್ವದೆಲ್ಲೆಡೆ ಪಸರಿಸಬೇಕು, ಮದೆ ಗ್ರಾಮದ ಪ್ರತಿಭೆ ಸಿಂಚನಾಳ ಯೋಗ ದಾಖಲೆ ಇತರರಿಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಂಚನಾಳ ತಂದೆ ಬಿ.ಸಿ.ಕೀರ್ತಿಕುಮಾರ್, ಮಡಿಕೇರಿಯ ಯೋಗಗುರು ಕೆ.ಕೆ.ಮಹೇಶ್ ಕುಮಾರ್ ಹಾಗೂ ಹಿರಿಯರಾದ ಹರೀಶ್ ಸರಳಾಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌