ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳಿಗೆ ಮೊಸರು-ಗಡಿಗೆ ಒಡೆಯುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಶಾಲೆಯ ೪ ತಂಡಗಳಿಂದ ಬಾಲಕರು-ಬಾಲಕಿಯರು ಪಾಲ್ಗೊಂಡಿದ್ದು, ಅದೇ ವಿದ್ಯಾರ್ಥಿಗಳು ಸದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಬಾಲಕರ ತಂಡದಿಂದ ಭಗತ್ ಸಿಂಗ್ ತಂಡವು ಪ್ರಥಮ ಸ್ಥಾನ, ಸುಭಾಸ ಚಂದ್ರ ಭೋಸ್ ದ್ವಿತೀಯ ಸ್ಥಾನ ಮತ್ತು ಕಿತ್ತೂರು ರಾಣಿ ಚನ್ನಮ್ಮ ತೃತೀಯ ಸ್ಥಾನ ಪಡೆದರೆ, ಬಾಲಕಿಯರ ತಂಡದಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಥಮ ಸ್ಥಾನ, ಸುಭಾಸ್ ಚಂದ್ರ ಭೋಸ್ ದ್ವಿತೀಯ ಸ್ಥಾನ, ಸಂಗೊಳ್ಳಿ ರಾಯಣ್ಣ ತೃತೀಯ ಸ್ಥಾನ ಗಳಿಸಿತು. ಪ್ರಾಂಶುಪಾಲ ಪ್ರೊ.ಹೇಮಂತ್ ಕೃಷ್ಣ, ಪ್ರಾಂಶುಪಾಲ ಶರ್ಮಿಳಾ ಹೇಮಂತ್, ಉಪಪ್ರಾಂಶುಪಾಲ ಅಣ್ಣಪ್ಪ ಶಿರೂರ, ಉಪಪ್ರಾಚಾರ್ಯ ಜ್ಯೋತಿ ಪಡಸಾಲಿ ಮುಂತಾದವರು ಇದ್ದರು.