ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದ 85 ನೇ ದಿನದ ಆಶೀರ್ವಚನ ನೀಡಿದರು, ಜ್ಞಾನದಿಂದ ಸಿಗುವ ಎಲ್ಲವೂ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಕೆಲಸ ಮತ್ತು ಸೇವೆಯಿಂದ ಸಂಪತ್ತು ಸಂಪಾದನೆಯಾಗುತ್ತದೆ. ಕೇವಲ ಹಣವೊಂದೇ ಸಂಪತ್ತು ಅಲ್ಲ. ಜ್ಞಾನದಿಂದ ಸಂಪಾದಿಸುವ ಎಲ್ಲವನ್ನೂ ಸಮಾಜದ ಒಳಿತಿಗೆ ವಿನಯದಿಂದ ಬಳಸಿದರೆ ಧರ್ಮದ ದಾರಿಯಲ್ಲಿ ಮುನ್ನಡೆದಂತೆ ಆಗುತ್ತದೆ ಎಂದು ವಿವರಿಸಿದರು.ಲಾಭವಿಲ್ಲದ ವಿಶಿಷ್ಟ ಸೇವೆ
ವಿಶ್ವ ಸಾಂಸ್ಕೃತಿಕ ಮಹೋತ್ಸವಕ್ಕೆ ಬರುತ್ತಿರುವ ಸಾಧಕರು ತಮ್ಮ ಸಾಧನೆಯಿಂದ ಜಗತ್ತಿನ ಗಮನ ಸೆಳೆದಿದ್ದರೂ ವಿನಯವಂತಿಕೆಗೂ ಮಾದರಿ ಎನ್ನುವಂತೆ ವರ್ತಿಸುತ್ತಾರೆ. ಇವರೆಲ್ಲರ ನಡವಳಿಕೆಯು ಮಕ್ಕಳಿಗೆ ಅತ್ಯುತ್ತಮ ಉದಾಹರಣೆಯಾಗುತ್ತದೆ. ಲಾಭದ ಅಪೇಕ್ಷೆಯಿಲ್ಲದೆ ಉದ್ಯಮಗಳನ್ನು ನಡೆಸಲು ಆಗುವುದಿಲ್ಲ. ಆದರೆ ಆ ಲಾಭವನ್ನು ಸಮಾಜದ ಅಭಿವೃದ್ಧಿಗೆ ಮರಳಿ ಕೊಡುವುದು ಅವರ ವಿಶಿಷ್ಟ ಸೇವೆ ಆಗುತ್ತದೆ ಎಂದು ತಿಳಿಸಿದರು. ಪ್ರಿಕಾಲ್ ಲಿಮಿಟೆಡ್ ಕಂಪನಿಯ ಅಧ್ಯಕ್ಷೆ ಮತ್ತು ನಿರ್ದೇಶಕಿ ವನಿತಾ ಮೋಹನ್, ಸಿಟಿ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ ಎನ್.ಕಾಮಕೋಟಿ ಹಾಗೂ ಲ್ಯಾಂಡ್‌ಮಾರ್ಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಮತ್ತು ಆಡಳಿತ ಮಂಡಳಿ ಸದಸ್ಯ ರಾಮನಾಥನ್ ಹರಿಹರನ್ ಅವರಿಗೆ ಒನ್ ವರ್ಲ್ಡ್ ಒನ್ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್ ನೀಡಿ ಪುರಸ್ಕರಿಸಲಾಯಿತು.