ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಕ್ಕಾಗಿ ಹೋರಾಟ ಮಾಡಿ, ನಮನ್ನು ಸ್ವತಂತ್ರರನ್ನಾಗಿ ಮಾಡಿದ ಹಿರಿಯರ ಶ್ರಮವನ್ನು ಕೇವಲ ಒಂದು ದಿನ ನೆನೆದು ಆಚರಣೆ ಮಾಡುವುದಲ್ಲ. ಅವರ ಆದರ್ಶ, ವಿಚಾರಗಳ ಮುಂದಿಟ್ಟುಕೊಂಡು ಇವತ್ತಿನ ಪೀಳಿಗೆಗಳಿಗೆ ಅವರ ತತ್ವ, ಸಿದ್ಧಾಂತಗಳನ್ನು ಮನದಟ್ಟು ಮಾಡುವ ಕೆಲಸ ಆಗಬೇಕು ಎಂದರು.
ವಿಶ್ವದಲ್ಲಿ ನಮ್ಮ ದೇಶ ಬಲಿಷ್ಠ ಸ್ಥಾನ ಹೊಂದುತ್ತಿದ್ದು. ಇವತ್ತಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜ್ಞಾನ ನೀಡಿ ದೇಶದ ಕಲೆ ಸಂಸ್ಕೃತಿ, ಆಚಾರ ವಿಚಾರಗಳನ್ನು ಅವರಿಗೆ ತಿಳಿಸಿ ಉತ್ತಮ ಪ್ರಜೆಯಾಗಿ ಮಾಡುವ ಶಿಕ್ಷಕರು, ಗುರು ಹಿರಿಯರನ್ನು ಇತ್ತಿನ ಪೀಳಿಗೆಯ ವಿದ್ಯಾರ್ಥಿಗಳು ಸ್ಮರಿಸಿ ಗೌರವಿಸಬೇಕು ಎಂದರು.ನಂತರ ಕೆಆರ್ ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಕುಮಾರ್ ದೇಶ, ಸ್ವಾತಂತ್ರ್ಯ ಕುರಿತಾದ ಉಪನ್ಯಾಸ ನೀಡಿದರು. ವಿವಿಧ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಥ ಸಂಚಲನ ಮಾಡುವ ಮೂಲಕ ಶಾಸಕರಿಗೆ ಗೌರವ ವಂದನೆ ಸಲ್ಲಿಸಿದರು. ಕ್ರೀಡಾಂಗಣದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ದೇಶ ಭಕ್ತಿ ಹಾಡುಗಳ ಮೂಲಕ ನೃತ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಭತೇರಿಯಲ್ಲಿ ಧ್ವಜಾರೋಣ: ಪಟ್ಟಣದ ಐತಿಹಾಸಿಕ ಬತ್ತೇರಿ ಮೇಲೆ ತಹಸೀಲ್ದಾರ್ ಚೇತನಾ ಯಾದವ್ ಧ್ವಜಾರೋಹಣ ನಡೆಸಿ ದೇಶದ ಅಭಿವೃದ್ಧಿ ಕುರಿತ ಸಂದೇಶಗಳನ್ನು ಕುರಿತು ಜನತೆಗೆ ತಿಳಿಸಿದರು.