ರಾಣಿಬೆನ್ನೂರು: ಒಂದು ದೇಶದ ನಿಜವಾದ ಸಂಪತ್ತು ಯುವ ಜನತೆಯಾಗಿದೆ ಎಂದು ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾ. ಡಾ.ಎಂ.ಎ.ಮೃತ್ಯುಂಜಯ ಮಾತನಾಡಿ, ವಿಶ್ವ ಜನಸಂಖ್ಯೆಯಲ್ಲಿ ಭಾರತದ ಪಾತ್ರ ಹೆಚ್ಚಿದ್ದು, ಜನ ಸಮುದಾಯದ ಅಗತ್ಯತೆ ಈಡೇರಿಸಲು ಸಾಧ್ಯವಿಲ್ಲ. ಆದ್ದರಿಂದ ಜನಸಂಖ್ಯಾ ನಿಯಂತ್ರಣವಾಬೇಕಿದೆ ಎಂದರು. ಜನಗಣತಿ ನಡೆದು ಬಂದ ಹಿನ್ನೆಲೆ ಹಾಗೂ ಅದರ ಔಚಿತ್ಯತೆ ಕುರಿತು
ಪ್ರೊ.ಶಾರದಾ ವಾಲಿ ಉಪನ್ಯಾಸ ನೀಡಿದರು. ವಿಶ್ವ ಜನಸಂಖ್ಯಾ ದಿನದ ನಿಮಿತ್ತ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಪ್ರಿಯಾಂಕ ದ್ಯಾವಕ್ಕನವರ (ಪ್ರಥಮ), ಯುವರಾಜ (ದ್ವಿತೀಯ), ಆರ್ಶಿಯಾ ಡಿ ಮತ್ತು ಸುನೀತಾ ಇವರುಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.ಪ್ರೊ.ಪರಶುರಾಮ ಪವಾರ, ಪ್ರೊ.ಎ.ಶಂಕರನಾಯ್ಕ, ಪ್ರೊ.ಶ್ರೀಕಾಂತ ಗೌಡಶಿವಣ್ಣನವರ, ಪ್ರೊ.ಅಶೋಕ ಬಣಕಾರ, ಮುತ್ತುರಾಜ ಸಿದ್ದಣ್ಣನವರ, ಚಂದನ ಕಿಚಡಿ, ಅನಿತಾ, ಯುವರಾಜ ಜಿ, ಪವನಕುಮಾರ ಲಮಾಣಿ, ಲಕ್ಷ್ಮೀ ಹಣಚಿಕ್ಕಿ ಮತ್ತಿತರರಿದ್ದರು.