ಸೂಲಿಬೆಲೆ: ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶ ನೀಡುವಂತೆ ಯುವ ಜನತೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಲಾಲ್‌ಬಾಗ್ ದಾಸರಹಳ್ಳಿ ಸಿಂದೂರಿ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದ್ದು, ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಬಿ.ವಿ.ಸತೀಶಗೌಡರ ಪ್ರಾಯೋಜನೆಯಡಿ ೭೦ ಸಾವಿರ ನಗದು ಹಾಗೂ ಟ್ರೋಪಿ ನೀಡಿ ಗೌರವಿಸಲಾಯಿತು. ದ್ವೀತಿಯಾ ಬಹುಮಾನ ೩೫ ಸಾವಿರ ನಗದು ಹಾಗೂ ಟ್ರೋಪಿಯನ್ನು ಸೂಲಿಬೆಲೆಯ ಲೆವನ್ ಸ್ಟಾರ್ ಕ್ರಿಕೆಟರ್ ತಂಡ ಪಡೆಯಿತು. ಹರಳೂರಿನ ಹೆಚ್ ಸಿಸಿ ತಂಡ ೨೦ ಸಾವಿರ ನಗದು ಮತ್ತು ಟ್ರೋಪಿಯನ್ನು ಪಡೆಯುವ ಮೂಲಕ ೩ನೇ ಬಹುಮಾನ ಪಡೆಯಿತು. ಬೆಸ್ಟ್ ಬೌಲರ್ ಹೃತಿಕ್ ಗೌಡ, ಬೆಸ್ಟ್ ಬ್ಯಾಟ್ಸ್ಮೆನ್ ನವೀನ್, ಮ್ಯಾನ್ ಅಪ್ ದಿ ಮ್ಯಾಚ್ ಜಗದೀಶ್ ಪಡೆದುಕೊಂಡರು.ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಸದಸ್ಯ ನರಸಿಂಹಮೂರ್ತಿ, ಗ್ಯಾರಂಟಿ ಸಮಿತಿ ಜಿಲ್ಲಾ ಸದಸ್ಯ ಸೈಯದ್ ಮಹಬೂಬ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್, ತಿರುಮಲ ಎಂಟರ್ ಪ್ರೆöÊಸಸ್ ಬಿ.ಎಂ.ಬಸವರಾಜ್, ಮುಖಂಡರಾದ ಎಸ್.ವೈ.ನಾಗರಾಜ್, ಪ್ರೋತ್ಸಾಹಕರಾದ ಮುರಳಿ, ಮುನೇಂದ್ರ, ಮುನಿರಾಜು, ಇತರರಿದ್ದರು.
(ಫೋಟೊ ಕ್ಯಾಫ್ಷನ್)ಸೂಲಿಬೆಲೆ ಹೋಬಳಿ ಮಟ್ಟದ ಲೆವನ್ ಸ್ಟಾರ್ ಚಾಂಪಿಯನ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್ ಸಮಾರೋಪದಲ್ಲಿ ಹೊಸಕೋಟೆ ಸಿಂಧೂರಿ ತಂಡಕ್ಕೆ ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ ಪ್ರಥಮ ಬಹುಮಾನ ವಿತರಿಸಿದರು. ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ನಾಗರಾಜ್, ವೆಂಕಟೇಶ್, ಸೈಯದ್ ಮಹಬೂಬ್ ಇತರರಿದ್ದರು.