ಯುವತಿಯ ಅಪಹರಿಸಿ ಅತ್ಯಾಚಾರ: ಇಬ್ಬರ ಬಂಧನ

KannadaprabhaNewsNetwork |  
Published : Aug 25, 2024, 01:54 AM IST
ಅಲ್ತಾಫ್ (34) | Kannada Prabha

ಸಾರಾಂಶ

ಅತ್ಯಾಚಾರಕ್ಕೊಳಗಾದ 21 ವರ್ಷದ ಯುವತಿ ಮತ್ತು ಅಲ್ತಾಫ್ ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಯುವತಿಯನ್ನು ಅಲ್ತಾಫ್ ಕಾರಿನಲ್ಲಿ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಕನ್ನಡಪ್ರಭ ವಾರ್ತೆ ಕಾರ್ಕಳಯುವತಿಯೊಬ್ಬಳಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಘಟನೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಅಲ್ತಾಫ್ (34) ಮತ್ತು ಕ್ಸೆವಿಯರ್ ರಿಚರ್ಡ್ ಕ್ವಾಡ್ರಸ್ (35) ಬಂಧಿತ ಆರೋಪಿಗಳು.ಅತ್ಯಾಚಾರಕ್ಕೊಳಗಾದ 21 ವರ್ಷದ ಯುವತಿ ಮತ್ತು ಅಲ್ತಾಫ್ ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಶುಕ್ರವಾರ ಮಧ್ಯಾಹ್ನ ಅಲ್ತಾಫ್, ಒಂದು ಕಡೆಗೆ ಬರಲು ಹೇಳಿದ್ದ. ಅಲ್ಲಿಗೆ ಹೋದ ಯುವತಿಯನ್ನು ಅಲ್ತಾಫ್ ಕಾರಿನಲ್ಲಿ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ಆತನ ಇಬ್ಬರು ಸ್ನೇಹಿತರು ಬಿಯರ್ ಬಾಟಲ್ ತಂದಿದ್ದು, ಅದಕ್ಕೆ ಅಮಲು ಪದಾರ್ಥ ಬೆರೆಸಿ ಬಲವಂತವಾಗಿ ಯುವತಿಗೆ ಕುಡಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.ನಂತರ ಆಕೆಯನ್ನು ಮನೆಯ ಬಳಿ ತಂದು ಬಿಟ್ಟು ಹೋಗಿದ್ದು, ತೀವ್ರ ಅಸ್ವಸ್ಥಳಾಗಿದ್ದ ಆಕೆಯನ್ನು ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರಕರಣ ದಾಖಲಾದ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ಅಲ್ತಾಫ್‌ನನ್ನು ಬಂಧಿಸಿ, ಯುವತಿಯ ಅಪಹರಣಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆತನಿಗೆ ಬಿಯರ್ ಬಾಟಲ್ ತಂದುಕೊಟ್ಟ ಕ್ಸೇವಿಯರ್‌ ಎಂಬಾತನನ್ನು ಬಂಧಿಸಿ ಮತ್ತು ಆತನ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

------ಸುಳ್ಳು ಸುದ್ದಿ, ಕಾನೂನು ಕ್ರಮ: ಎಸ್ಪಿ ಎಚ್ಚರಿಕೆಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಪ್ರಕರಣದ ದೂರು ಮತ್ತು ಮೆಡಿಕಲ್ ರಿಪೋರ್ಟ್‌ನಲ್ಲಿ ಇಲ್ಲದ ಮಾಹಿತಿಗಳನ್ನು ಹರಿಯ ಬಿಡಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಸಾಮಾಜಿಕ ಜಾಲತಾಣಗಳ ಮೇಲೆ ಮತ್ತು ಅವುಗಳನ್ನು ವೈರಲ್ ಮಾಡುತ್ತಿರವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ