ಕನ್ನಡಪ್ರಭ ವಾರ್ತೆಕನ್ನಡಪ್ರಭ ವಾರ್ತೆ ಕಮತಗಿ: ಶಿರೂರ ಪಟ್ಟಣದ ಇಂದಿರಾ ನಗರದಲ್ಲಿರುವ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಜಾತ್ರೆಗೆ ಸಂಭ್ರಮದ ಚಾಲನೆ ನೀಡಲಾಯಿತು. ಬೆಳಿಗ್ಗೆಯೇ ದೇವಿ ಮೂರ್ತಿಗೆ ವಿಶೇಷ ಪೂಜೆ, ಮಂಗಳಾರತಿ, ನಾನಾ ಧಾರ್ಮಿಕ ಪೂಜೆಗಳು ನೆರವೇರಿದವು. ನಂತರ ದೇವಿಯ ಪಲ್ಲಕ್ಕಿಯನ್ನು ಕೃಷ್ಣಾ ನದಿಗೆ ಕರೆದೊಯ್ದು ಧಾರ್ಮಿಕ ಪೂಜೆ ಮತ್ತು ಉಡಿ ಸಲ್ಲಿಸಿ ಪೂಜಾ ಕೈಂಕರ್ಯ ನಡೆಸಲಾಯಿತು. ನಂತರ ಮರಳಿ ಪಟ್ಟಣಕ್ಕೆ ಆಗಮಿಸಿದ ದೇವಿ ಪಲ್ಲಕ್ಕಿಯನ್ನು ಶ್ರೀ ಸಿದ್ದೇಶ್ವರ ಪ್ರೌಢಶಾಲಾ ಮೈದಾನದಿಂದ ಡೊಳ್ಳು ಮೇಳ, ಸುಮಂಗಲಿಯರ ಕಳಸಾರತಿ ಹಾಗೂ 50ಕ್ಕೂ ಹೆಚ್ಚು ಮಹಿಳೆಯರು ಕುಂಭ ಹೊತ್ತು ಸಾಗಿ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ದೇವಿಯ ಜಯ ಘೋಷದೊಂದಿಗೆ ನೂರಾರು ಭಕ್ತರು ಭಂಡಾರ ತೂರುತ್ತ ಘೋಷಣೆಗಳನ್ನು ಕೂಗಿದರು. ಪಟ್ಟಣದ ದಾರಿಯುದ್ದಕ್ಕೂ ಸಾರ್ವಜನಿಕರು ಕಾಯಿ, ಹೂ ನೀಡಿ ದೇವಿಯ ದರ್ಶನ ಪಡೆದರು.