ಗುಂಡ್ಲುಪೇಟೆ: ಹೆಣ್ಣುಮಕ್ಕಳಿಗಿಂತ ಯುವಕರು ಪ್ರಸ್ತುತ ಎಲ್ಲಾ ಹಂತದಲ್ಲೂ ಹಿಂದೆ ಬೀಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್ ಹೇಳಿದರು.
ಆಟದ ಹಕ್ಕನ್ನು ಮಕ್ಕಳು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಜತೆಗೆ ಮಕ್ಕಳಿಗೆ ಸಂರಕ್ಷಣೆ ಸಿಗುವಂತಾಗಬೇಕು. ಅವಕಾಶಗಳ ಸದ್ಬಳಕೆಯನ್ನು ಮಕ್ಕಳು ತಪ್ಪದೇ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸರಸ್ವತಿ ಎನ್.ಎಂ., ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ ಮಾತನಾಡಿದರು.
ತಹಸೀಲ್ದಾರ್ ಟಿ.ರಮೇಶ್ ಬಾಬು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯಧಿಕಾರಿ ಡಾ.ಅಲಿಂ ಪಾಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಎಂ., ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ದಿಲೀಪ್ ಕುಮಾರ್, ಪೊಲೀಸ್ ನಿರೀಕ್ಷಕ ಎಸ್.ಪರಶಿವಮೂರ್ತಿ, ಮೈಸೂರು ಹಿರಿಯ ರಂಗ ನಿರ್ದೇಶಕಿ ಸುಮತಿ ಹಾಗೂ ರಬ್ಬಿ ಆಟಗಾತಿ ಮಲ್ಲಯ್ಯನಪುರದ ದೀಪ್ತಿ ಆರ್., ಖೋ ಖೋ ಆಟಗಾರ್ತಿ ವಿನುತಾ ಎಸ್. ಇದ್ದರು.ಯುವಕ, ಯುವತಿಯರು ಹಗ್ಗಜಗ್ಗಾಟ, ಸ್ಫೋ ಸೈಕಲಿಂಗ್, ೨೦೦ ಮೀಟರ್ ಓಟ, ಯುವತಿಯರಿಗೆ-ಪಿರಮಿಡ್, ಯುವಕರಿಗೆ-ರಂಗೋಲಿ, ಜಾನಪದ ನೃತ್ಯಗಳು ಮತ್ತು ಲಿಂಗ ತಾರತಮ್ಯ ಕುರಿತು ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.