ಯುವ ಜನರು ಸಂವಿಧಾನದ ಯೋಧರಾಗಿ: ಶೇಷಾದ್ರಿ

KannadaprabhaNewsNetwork |  
Published : Sep 22, 2026, 01:15 AM IST
21ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ– ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿದ್ದ ‘ಸಂವಿಧಾನ ಓದು ಅಧ್ಯಯನ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.  | Kannada Prabha

ಸಾರಾಂಶ

ರಾಮನಗರ: ದೇಶ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿದೆ. ಕೋಮುವಾದ ಹಿಗ್ಗುತ್ತಿದೆ. ಇವೆಲ್ಲವುಗಳನ್ನು ತಡೆಯಲು ಸಂವಿಧಾನ ಏಕೈಕ ಅಸ್ತ್ರವಾಗಿದೆ. ಯುವ ಜನರು ಸಂವಿಧಾನದ ಯೋಧರಾಗಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು

ರಾಮನಗರ: ದೇಶ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿದೆ. ಕೋಮುವಾದ ಹಿಗ್ಗುತ್ತಿದೆ. ಇವೆಲ್ಲವುಗಳನ್ನು ತಡೆಯಲು ಸಂವಿಧಾನ ಏಕೈಕ ಅಸ್ತ್ರವಾಗಿದೆ. ಯುವ ಜನರು ಸಂವಿಧಾನದ ಯೋಧರಾಗಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ– ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿದ್ದ 2 ದಿನಗಳ ‘ಸಂವಿಧಾನ ಓದು ಅಧ್ಯಯನ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವಶಕ್ತಿ ಮುಂದೆ ಎಂತಹ ಸರ್ಕಾರವೂ ತಲೆಬಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ನಡೆದ ಜೆನ್‌ ಝಿ ಹೋರಾಟವೇ ಸಾಕ್ಷಿ. ಅಂತಹ ಯುವಜನರು ಸಂವಿಧಾನದ ಯೋಧರಾದರೆ ದೇಶದ ಗತಿಯೇ ಬದಲಾಗುತ್ತದೆ ಎಂದರು.

ದೇಶ ಹಾಗೂ ಜನರ ಬದುಕು ಹೇಗಿರಬೇಕೆಂದು ನಿರ್ಣಯಿಸುವ ರಾಜಕೀಯ ಪ್ರಜ್ಞೆಯನ್ನು ಯುವಜನರು ಬೆಳೆಸಿಕೊಳ್ಳಬೇಕು. ಇಂದು ಭ್ರಷ್ಟರು, ಜೂಜುಕೋರರು, ಅಕ್ರಮಗಳಲ್ಲಿ ತೊಡಗಿರುವವರು, ಹಣವಂತರು, ಅಪರಾಧ ಹಿನ್ನೆಲೆಯವರು ಶಾಸನಸಭೆ ಪ್ರವೇಶಿಸುತ್ತಿದ್ದಾರೆ. ಗ್ರಾಪಂನಿಂದ ಆರಂಭಗೊಂಡು ಲೋಕಸಭೆ ಚುನಾವಣೆವರೆಗೆ ಎಲ್ಲವೂ ಹಣದ ಮೇಲೆಯೇ ನಡೆಯುತ್ತಿದೆ. ದುಡ್ಡು ಚೆಲ್ಲಿ ಆಯ್ಕೆಯಾಗುವವರಿಂದಾಗಿ ಚರ್ಚೆ ಇಲ್ಲದೆ ಮಸೂದೆಗಳು ಕಾಯ್ದೆಯಾಗುತ್ತಿವೆ. ಇದಕ್ಕೆ ಕಡಿವಾಣ ಬೀಳಬೇಕಾದರೆ ಪ್ರತಿಯೊಬ್ಬರೂ ಸಂವಿಧಾನದ ಅರಿವು ಬೆಳೆಸಿಕೊಳ್ಳಬೇಕು ಎಂದು ಶೇಷಾದ್ರಿ ಹೇಳಿದರು.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಿದ ಅಭಿಯಾನದ ಸಂಚಾಲಕ ಬಿ. ರಾಜಶೇಖರಮೂರ್ತಿ, ದೇಶದ ಎಲ್ಲಾ ನಾಗರಿಕರಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದೇ ಸಾಮಾಜಿಕ ನ್ಯಾಯ. ಅದನ್ನೇ ಮಾನವ ಹಕ್ಕು ಎಂದು ಪ್ರತಿಪಾದಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ರವರು, ಸಂವಿಧಾನದಲ್ಲಿ ಈ ತತ್ವವನ್ನು ಸರ್ಕಾರದ ನೀತಿಯನ್ನಾಗಿ ಅಳವಡಿಸಿದ್ದರು ಎಂದರು.

ಅಸ್ಪೃಶ್ಯತೆ ನಿವಾರಣೆ, ಎಲ್ಲಾ ಜಾತಿ ಮತ್ತು ಧರ್ಮಗಳ ಅವಕಾಶ ವಂಚಿತರಿಗೆ ಮೀಸಲಾತಿ, ಮಹಿಳಾ ಸಬಲೀಕರಣ, ರೈತರು, ಕಾರ್ಮಿಕರು, ಬಡವರು ಹಾಗೂ ಅಶಕ್ತರ ಕಲ್ಯಾಣ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಸಾಮಾಜಿಕ ನ್ಯಾಯವನ್ನು ಸರ್ಕಾರಗಳು ಕಡೆಗಣಿಸುತ್ತಿವೆ. ಖಾಸಗೀಕರಣ ಮತ್ತು ಬಂಡವಾಳಶಾಹಿ ವ್ಯವಸ್ಥೆಗೆ ಮಣೆ ಹಾಕುತ್ತಿವೆ. ಹಾಗಾಗಿ, ಸರ್ಕಾರದ ನೀತಿಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ರಾಜ್ಯದ ಕಲ್ಪನೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಮತ್ತು ಜಾತ್ಯತೀತತೆ ಕುರಿತು ಆರ್. ರಾಮಕೃಷ್ಣ ಹಾಗೂ ಶಿಬಿರಾರ್ಥಿಗಳ ಮುಂದಿನ ಜವಾಬ್ದಾರಿ ಕುರಿತು ರಾಜು ಗೊರೂರು ಮಾತನಾಡಿದರು. ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು, ಪ್ರಾಧ್ಯಾಪಕ ಅಂಕನಹಳ್ಳಿ ಪಾರ್ಥ , ವಿದ್ಯಾರ್ಥಿ ಮುಖಂಡ ಅಭಿ ಗೋಷ್ಠಿಗಳ ನಿರ್ವಹಣೆ ಮಾಡಿದರು.

ಶಿಬಿರಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ಹಾಗೂ ಸಂವಿಧಾನ ಓದು ಪುಸ್ತಕ ವಿತರಿಸಿದರು. ಅಭಿಯಾನದ ಎಚ್.ಎನ್. ಹರಿ, ರೈತ ನಾಯಕಿ ಅನಸೂಯಮ್ಮ, ವಕೀಲ ಸುಲ್ತಾನ್ ಅಹಮದ್, ಉಪನ್ಯಾಸಕ ರುದ್ರೇಶ್ ಅದರಂಗಿ, ಎಚ್.ಡಿ. ಉಮಾಶಂಕರ್, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ,

ಎಸ್ಸಿ ಎಸ್ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೈಪ್ರಕಾಶ್, ವಿದ್ಯಾರ್ಥಿ ಮುಖಂಡರಾದ ವಿಜಯಕುಮಾರ್, ಚಿರಾಗ್, ದೀಪಿಕಾ ಮತ್ತಿತರರು ಉಪಸ್ಥಿತರಿದ್ದರು.

-----------------------

21ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ– ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿದ್ದ ‘ಸಂವಿಧಾನ ಓದು ಅಧ್ಯಯನ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.

------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿತರಣಾ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತ: ಜಿಲ್ಲಾಧಿಕಾರಿ ಆದೇಶಕ್ಕೆ ಖಂಡನೆ
ದೇಶದ ಅಭಿವೃದ್ಧಿಗೆ ಇಂಜಿನಿಯರರಿಂದ ಅಮೂಲ್ಯ ಕೊಡುಗೆ