ಶೈಕ್ಷಣಿಕ ಬದುಕು ರೂಪಿಸಿಕೊಳ್ಳಲು ಯುವ ಆವೃತ್ತಿ ಸಹಕಾರಿ: ಡಾ. ಕೆ.ಬಿ. ಮದ್ನೂರ್

KannadaprabhaNewsNetwork |  
Published : Jan 19, 2026, 03:00 AM IST
ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕನ್ನಡಪ್ರಭ ಯುವ ಆವೃತ್ತಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಬದುಕು ರೂಪಿಸಿಕೊಳ್ಳಬೇಕು ಎಂದು ಶಿಕ್ಷಣ ಪ್ರೇಮಿ ಡಾ. ಕೆ.ಬಿ. ಮದ್ನೂರ್ ಹೇಳಿದರು.

ನವಲಗುಂದ: ವಿದ್ಯಾರ್ಥಿಗಳು ಕನ್ನಡಪ್ರಭ ಯುವ ಆವೃತ್ತಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಬದುಕು ರೂಪಿಸಿಕೊಳ್ಳಬೇಕು ಎಂದು ಶಿಕ್ಷಣ ಪ್ರೇಮಿ ಡಾ. ಕೆ.ಬಿ. ಮದ್ನೂರ್ ಹೇಳಿದರು.

ಅವರು ತಾಲೂಕಿನ ತಿರ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಯುವ ಆವೃತ್ತಿ ಕಲಿಕಾ ಮಕ್ಕಳಿಗಷ್ಟೇ ಅಲ್ಲದೆ ಉದ್ಯೋಗ ಬಯಸುವ ಪ್ರಿಯರಿಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕ್ರೂಢೀಕರಿತವಾಗಿದ್ದು ರಾಜ್ಯದ ಯಾವುದೇ ಭಾಗದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಒಳಗೊಂಡಿದೆ ಎಂದರು.

ಇನ್ನೋರ್ವ ಶಿಕ್ಷಣಪ್ರೇಮಿ ಕುಮಾರಯ್ಯ ಹಿರೇಮಠ ಮಾತನಾಡಿ, ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ರೈತರು, ವಿಶೇಷ ಸಾಧಕರನ್ನು ಗುರುತಿಸುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ₹1 ಬೆಲೆಯಲ್ಲಿ ಯುವ ಆವೃತ್ತಿ ಪ್ರತಿ ನೀಡುವ ಮೂಲಕ ಶೈಕ್ಷಣಿಕ ಪ್ರೇಮ ಮರೆದಿದ್ದಾರೆ. ಮಕ್ಕಳ ಓದಿನಲ್ಲಿ ಶಿಕ್ಷಕರ ಜತೆ ಪಾಲಕರು ತೊಡಗಿಕೊಂಡರೆ ಮಕ್ಕಳು ಉನ್ನತ ಶಿಖರವನ್ನೇರಲು ಅನುಕೂಲವಾಗುತ್ತೆ ಮತ್ತು 1ನೇ ತರಗತಿಯಿಂದ 7ನೇ ತರಗತಿ ವರೆಗೆ ಸರ್ಕಾರ ಮನಸ್ಸು ಮಾಡಿ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಬೇಕೆಂದು ಕಾನೂನು ಜಾರಿಗೆ ಮಾಡಿದರೆ ಸರ್ಕಾರಿ ಶಾಲೆಗಳು ಉಳಿಯಲು ಸಹಕಾರ ನೀಡಿದಂತಾಗಲಿದೆ ಎಂದರು.

ಗ್ರಾಪಂ ಉಪಾಧ್ಯಕ್ಷ ಮಹೇಶ ಬಕ್ಕಣ್ಣವರ, ಶಾಲೆ ಮುಖ್ಯೋಪಾಧ್ಯಾಯ ವಿ.ವೖ. ಆಲಗೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಕುಮಾರಯ್ಯ ಹಿರೇಮಠ ಹಾಗೂ ಡಾ. ಕೆ.ಬಿ. ಮದ್ನೂರ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಸಂಜೀವರಡ್ಡಿ ನವಲಗುಂದ, ಶಾಲಾ ಮೇಲುಸ್ತುವಾರಿ ಅಧ್ಯಕ್ಷ ಶಂಕರಯ್ಯ ಹಿರೇಮಠ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಆಕಳದ, ಮಂಜುನಾಥ ಶಿವಳ್ಳಿ, ವಿಜಯ ಕಾರಿಕಾಯಿ, ಗಿರೀಶ ಆಯಟ್ಟಿ, ಕೆ.ಎಸ್. ದಾನನ್ನವರ, ಎಸ್.ಟಿ. ಖಾನಾಪುರ, ಕನ್ನಡಪ್ರಭ ಸಂಸ್ಥೆ ಸಹಾಯಕ ವ್ಯವಸ್ಥಾಪಕ ನಿಂಗರಾಜ ಹುಲ್ಲೂರ ಸೇರಿದಂತೆ ಹಲವರಿದ್ದರು. ಸಹಶಿಕ್ಷಕಿ ಡಿ.ಸಿ. ಮುಚ್ಚಂಡಿ ನಿರೂಪಿಸಿದರು. ಜೆ.ಎಂ. ಪದ್ಮಸಾಲಿ ಸ್ವಾಗತಿಸಿದರು. ಆರ್.ಎಂ. ನಾಯ್ಕರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಢೀರ್‌ ಸುರ್ಜೇವಾಲಾ ಭೇಟಿಯಾದ ಜಮೀರ್‌
ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ