ಜನಪದ ಗೀತೆ, ರಂಗಗೀತೆಗಳ ಗಾಯನ ಕಾರ್ಯಕ್ರಮ
ಪಟ್ಟಣದ ರಂಗನಾಥ ಕಾಂಪ್ಲೆಕ್ಸ್‌ನಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್, ಮಳವಳ್ಳಿ ಸುಂದ್ರಮ್ಮ ಸಾಂಸ್ಕೃತಿಕ ವೇದಿಕೆ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಜನಪದ ಚೇತನ ದಿ. ಮಹದೇವಮ್ಮ ಸ್ಮರಣಾರ್ಥ ನಡೆದ ಜನಪದ ಗೀತೆ ಮತ್ತು ರಂಗಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾನಪದ ಕಲೆ ಮನರಂಜನೆಯನ್ನು ಕೊಡುವುದರ ಜೊತೆಗೆ ಜೀವನದ ಮೌಲ್ಯವನ್ನು ತಿಳಿಸುವ ದಾರಿದೀಪವಾಗಿದೆ. ದೇವರ ಕಾಯಕವನ್ನು ಮಾಡಲು ಕಲಿತ ಜಾನಪದ ಕಲೆ ಕಲಾವಿದರ ಹೊಟ್ಟೆಯನ್ನು ತುಂಬಿಸುವುದರ ಜೊತೆಗೆ ದೇವರ ಕಥೆಗಳನ್ನು ಬಾಯಿಂದ ಬಾಯಿಗೆ ಕಲಿಸುವ ಸಾಧನವಾಗಿದೆ ಎಂದು ಹೇಳಿದರು.ತಂಬೂರಿ ಗುರುಬಸವಯ್ಯ ಜಾನಪದ ಕಲೆಯ ಸಾಧಕರಲ್ಲಿ ಒಬ್ಬರಾಗಿದ್ದಾರೆ, ಇತ್ತೀಚಿನ ದಿನಗಳಲ್ಲಿ ಸಾವಿರಾರು ಜಾನಪದ ಕಲಾವಿದರನ್ನು ಕಾಣಬಹುದಾಗಿದ್ದು, ಇನ್ನಷ್ಟು ಜಾನಪದ ಕಲೆಗಳನ್ನು ಯುವ ಕಲಾವಿದರು ಕಲಿಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ ಪ್ರಕಾಶ್, ಮುಖಂಡರಾದ ಸಾಲುಮರದ ನಾಗರಾಜು, ಡಾ. ಹುಸ್ಕೂರು ಕೃಷ್ಣೇಗೌಡ, ಪಿ.ನಾಗರತ್ನಮ್ಮ, ಮಹದೇವ, ನಾಗೇಶ್, ಕೈಲಾಸಮೂರ್ತಿ, ರಾಮಲಿಂಗಯ್ಯ ಸೇರಿದಂತೆ ಇತರರು ಇದ್ದರು.