ಕನ್ನಡಪ್ರಭ ವಾರ್ತೆ ಶಿರಾ
ನಗರದಲ್ಲಿರುವ ಸಿರಿಗಂಧ ಪ್ಯಾಲೇಸ್‌ನಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನಮೋ ನವ-ಮತದಾನ ಅಭಿಯಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದ ಅವರು ಹಾಗೂ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ವರ್ಚುವಲ್ ಸಭೆಯ ಭಾಗವಹಿಸಿ ವೀಕ್ಷಣೆ ಮಾಡಿ ಮಾತನಾಡಿದರು.
ದೇಶದ ಅಭಿವೃದ್ಧಿ ಇಂದಿನ ಯುವ ಪೀಳಿಗೆ ಮೇಲಿದೆ ಆದುದರಿಂದ ಇಂದಿನ ಸಭೆಯಲ್ಲಿ ನಿಮಗೆಲ್ಲರಿಗೂ ಮತದಾನದ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಾಜರಿದ್ದ ನೂರಾರು ಯುವಕ-ಯುವತಿಯರಿಗೆ ಕಾರ್ಯಕ್ರಮದ ಮಹತ್ವದ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯರಾದ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮುಖಂಡರಾದ ಸಂತೆಪೇಟೆ ನಟರಾಜ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕನಕೋಟೆ ಕರಿಯಣ್ಣ, ಹಿರಿಯ ಮುಖಂಡರಾದ ತಾರಾನಾಥ್, ಗ್ರಾಪಂ ಸದಸ್ಯರಾದ ಎಂ.ಶಿವಲಿಂಗಯ್ಯ, ಯುವ ಮುಖಂಡರಾದ ಭಾಸ್ಕರ್, ಬರಗೂರು ಯುವರಾಜ್, ಜೈರಾಮ್, ಉದ್ದಪ್ಪ, ಲಕ್ಕೇಗೌಡ ಸೇರಿದಂತೆ ಹಲವರು ಹಾಜರಿದ್ದರು.