ಯುವಕರು ದುಶ್ಚಟಕ್ಕೆ ಬಲಿಯಾಗಬೇಡಿ: ದೊಡ್ಡಗೌಡರ

KannadaprabhaNewsNetwork |  
Published : Mar 21, 2025, 12:37 AM IST
ನೇಸರಗಿ.  | Kannada Prabha

ಸಾರಾಂಶ

ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗದೆ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಓಲಿಂಪಿಕ್ ಕ್ರೀಡೆಗಳಲ್ಲಿ ಪಾಲ್ಗೊಂಡು ಗ್ರಾಮದ ಹೆಸರು ತರಬೇಕು

ಕನ್ನಡಪ್ರಭ ವಾರ್ತೆ ನೇಸರಗಿ

ಇಂದಿನ ಯುವಕ, ಯುವತಿಯರು ರಾಷ್ಟ್ರೀಯ ಕ್ರೀಡೆಗಳಾದ ಕ್ರಿಕೆಟ್, ವಾಲಿಬಾಲ್, ಕಬ್ಬಡಿ, ಕೋಕೋ ಕ್ರೀಡೆಗಳಲ್ಲಿ ಪಾಲ್ಗೊಂಡು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡು ಗ್ರಾಮದ, ತಾಲೂಕಿನ, ಜಿಲ್ಲೆಯ, ರಾಜ್ಯದ, ದೇಶದ ಹೆಸರು ಬೆಳೆಸುವ ಕಾರ್ಯ ಮಾಡಬೇಕೆಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.

ಸಮೀಪದ ಮದನಭಾವಿ ಗ್ರಾಮದಲ್ಲಿ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಹಾಂತೇಶ ಅಣ್ಣಾ ದೊಡ್ಡಗೌಡರ ಅಭಿಮಾನಿಗಳ ಬಳಗದಿಂದ ಆಯೋಜಿಸಲಾಗಿದ್ದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗದೆ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಓಲಿಂಪಿಕ್ ಕ್ರೀಡೆಗಳಲ್ಲಿ ಪಾಲ್ಗೊಂಡು ಗ್ರಾಮದ ಹೆಸರು ತರಬೇಕು ಎಂದರು. ಮದನಭಾವಿ ಗ್ರಾಮದಲ್ಲಿ ಇಷ್ಟೊಂದು ಉತ್ಸಾಹದಿಂದ ವಾಲಿಬಾಲ್ ಕ್ರೀಡೆ ಆಯೋಜನೆ ಮಾಡಿದ ಯುವಕರ ಕಾರ್ಯ ಶ್ಲಾಘನೀಯವಾದದ್ದು. ಈ ವರ್ಷ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಮುಂದಿನ ವರ್ಷ ಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸಲು ಉತ್ಸುಕನಾಗಿದ್ದು ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಚನಗೌಡ ಹಾದಿಮನಿ, ಕಿರಣ ಪಾಟೀಲ, ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ನಿಂಗನಗೌಡ ದೊಡ್ಡಗೌಡರ,ರಾಮನಗೌಡ ಪಾಟೀಲ, ಶಂಕರಗೌಡ ದೊಡ್ಡಗೌಡರ, ಈರನಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ, ಶಿವಪ್ಪ ಗುಜನಾಳ, ನಾಮದೇವ ಸಿದ್ದಮ್ಮನವರ, ಅಶೋಕ ಹೊಸೂರ, ಶಿವಪ್ಪ ಪುಗಟಿ, ಕೃಷ್ಣ ದೊಡ್ಡಗೌಡರ, ರಜನಿಕಾಂತ ಬಾಳಿಗಡ್ಡಿ, ಪ್ರದೀಪ್ ದೊಡ್ಡಗೌಡರ, ಬಸವರಾಜ ಬದ್ರಿ, ಸಿದ್ದು ಹೊಸಮನಿ,ಎಸ್ ಕೆ ಹೊಸಮನಿ, ಅಜಯ ದೊಡ್ಡಗೌಡರ, ನಾಗೇಶ ದೊಡ್ಡಗೌಡರ, ಸೋಮಪ್ಪ ಯರಝರ್ವಿ, ಮಂಜುನಾಥ ನಾಲಪರೊಶಿ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು, ಯುವ ಜನಾಂಗ, ಕ್ರೀಡಾ ಅಭಿಮಾನಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ