ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಸಿ.ಎಸ್.ಐ ಕ್ರೀಡಾಂಗಣದಲ್ಲಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಮೇ ಡೇ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ಕತ್ತಲಾದ ಮೇಲೆ ಬೆಳಕು ನೀಡುತ್ತದೆ. ನಾವು ಸಮಚಿತ್ತತೆಯಿಂದ ವರ್ತಿಸಬೇಕು. ಯುವಕರು ಯಾವುದೇ ದುಶ್ಚಟಕ್ಕೆ ವ್ಯಸನಿಗಳಾಗದೆ ಆರೋಗ್ಯಕ್ಕೆ ಅಗತ್ಯವಿರುವ ಕ್ರೀಡಾ ಮತ್ತು ರಚನಾತ್ಮಕ ಹವ್ಯಾಸಗಳನ್ನು ಬೆಳೆಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕ್ರೀಡೆಯನ್ನು ಕ್ರೀಡಾ ಸ್ಫೂರ್ತಿಯಾಗಿ ನೋಡುವುದು ಅಗತ್ಯವಿದೆ. ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕು ಎಂದು ಹೇಳಿದರು.ಸಿಐಟಿಯು ಜಿಲ್ಲಾ ಖಚಾಂಜಿ ಎ.ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ಗ್ರಾಪಂ ನೌಕರರ ಸಂಘದ ನಾಗೇಶ್, ಪೀಟ್ ವೇಲ್ ಕಾರ್ಮಿಕರ ಸಂಘ ಅಧ್ಯಕ್ಷ ಮುತ್ತುರಾಜ್, ದಿಲೀಪ್ ಕುಮಾರ್, ಪೌರಕಾರ್ಮಿಕರ ಸಂಘದ ಮಂಜುನಾಥ್, ಜನವಾದಿ ಮಹಿಳಾ ಸಂಘಟಕಿ ಆರ್ ಕಲ್ಪನಾ, ಪಿ.ಎಫ್ ಪಿಂಚಣಿದಾರರ ಸಂಘ ಸಂಚಾಲಕ ಟಿ.ಜಿ, ಶಿವಲಿಂಯ್ಯ, ಸಂಚಾಲಕ ಸುಚಿತ್, ಶಿವಕುಮಾರ್ ಸ್ವಾಮಿ, ಆನಂದ, ಷಣ್ಮಖಪ್ಪ, ಶಶಿಕಿರಣ್ ಇದ್ದರು.