ಉದ್ಯೋಗಾವಕಾಶ ಸದುಪಯೋಗಕ್ಕೆ ಯುವಜನತೆಗೆ ಕರೆ

KannadaprabhaNewsNetwork |  
Published : Jul 30, 2026, 01:30 AM IST
 | Kannada Prabha

ಸಾರಾಂಶ

Youth urged to make good use of job opportunities

-ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಯವಜನತೆಗೆ ಸಲಹೆ । ಬೃಹತ್ ಉದ್ಯೋಗ ಮೇಳಕ್ಕೆ ಸಚಿವ ಚಾಲನೆ

----

ಕನ್ನಡಪ್ರಭ ವಾರ್ತೆ ಕಲಬುರಗಿ

ದೇಶದಲ್ಲಿ ಉದ್ಯೋಗಾವಕಾಶಗಳಿದ್ದರೂ ಸೂಕ್ತ ಕೌಶಲ್ಯದ ಕೊರತೆಯಿಂದ ಯುವಜನರು ಹಿಂದುಳಿಯುತ್ತಿದ್ದಾರೆ. ಆದ್ದರಿಂದ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಂತ ಕಾಲ ಮೇಲೆ ನಿಲ್ಲಲು ಯುವಕರು ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.

ಪಿ.ಡಿ.ಎ ಕಾಲೇಜಿನ ಅವರಣದಲ್ಲಿ ಕೌಶಲ್ಯಾಭಿವೃದ್ದಿ ಇಲಾಖೆ ಹಾಗೂ ಎಕ್ಸಲರೇಟರ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಹೋಲಿಸಿದಲ್ಲೆ ಕರ್ನಾಟಕದಲ್ಲಿ ಅಷ್ಟೊಂದು ಸಮಸ್ಯೆಯಿಲ್ಲ. ಹಾಗಂತ ನಿರುದ್ಯೋಗಿಗಳು ಇಲ್ಲವಂತಲ್ಲ, ಬದಲಾಗಿ ಉದ್ಯೋಗ ಪಡೆಯುವ ಕೌಶಲ್ಯದ ಕೊರತೆ ಇದೆ. ಅದನ್ನು ನಮ್ಮ ಸರ್ಕಾರ ಸ್ಕಿಲ್ ಕನೆಕ್ಟ್ ಮೂಲಕ ಉದದ್ಯೋಗಾಧಾರಿತ ಕೌಶಲ್ಯ ನೀಡುತ್ತಿದ್ದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಉದ್ಯಮಿಗಳು, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಕೌಶಲ್ಯ ಪರಿಷತ್ತು ರಚಿಸಿ ನಿರುದ್ಯೋಗ ಕುರಿತು ಚರ್ಚಿಸಿದಾಗ ಸ್ವಂತ ಊರಿನಲ್ಲಿ ಕೆಲಸ‌ ಸಿಗಬೇಕು, ಹೆಚ್ಚಿನ ಸಂಬಳ ಬೇಡಿಕೆ, ಕಂಪನಿಗೆ ಅಗತ್ಯ ಕೌಶಲ್ಯ ನಮ್ಮ ಯುವಕರಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಹೀಗಾಗಿ ನಮ್ಮ ಸರ್ಕಾರ ಯುವ ನಿಧಿ + ಯೋಜನೆಯಡಿ ಅಗತ್ಯ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. "ಕೇವಲ ಸ್ವಂತ ಊರಿನಲ್ಲೇ ಉದ್ಯೋಗ ಬೇಕು ಎಂಬ ಮನಸ್ಥಿತಿಯಿಂದ ಹೊರಬಂದಾಗ ಮಾತ್ರ ಯುವಕರಿಗೆ ಉಜ್ವಲ ಭವಿಷ್ಯ ಕಾದಿದೆ ಎಂದು ಯುವಕರಿಗೆ ಸಚಿವ ಡಾ.ಶಣಪ್ರಕಾಶ ಪಾಟೀಲ ಸಲಹೆ ನೀಡಿದರು.

ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಡಿಗ್ರಿ ಹಾಗೂ ಡಿಪ್ಲೊಮಾ ಪದವೀಧರರು ''''''''ಯುವನಿಧಿ'''''''' ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ ಈ ಫಲಾನುಭವಿಗಳಿಗೆ ಉದ್ಯೋಗ ಮೇಳದಲ್ಕಿ ಭಾಗಿಯಾಗಲು, ಕೌಶಲ್ಯ ತರಬೇತಿ ಪಡೆಯಲು ತಿಳಿಸಿದರು ಪಡೆಯಲು ಮುಂದೆ ಬಾರದಿರುವುದು ಆಶ್ಚರ್ಯಕರವಾಗಿದೆ. ಉದ್ಯೋಗ ಒದಗಿಸಲು ಕಂಪನಿಗಲು ಮುಂದೆ ಬರುತ್ತಿವೆ, ಇಂತಹ ಸದಾವಕಾಶವವನ್ನು ಯುವ ಸಮೂಹ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಕಳೆದ 2-3 ವರ್ಷಗಳಲ್ಲಿ ಕರ್ನಾಟಕದಾದ್ಯಂತ ಹಲವೆಡೆ ಯುವಜನರಿಗಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಭೌತಿಕ ಉದ್ಯೋಗ ಮೇಳಗಳಿಗೆ ತಗಲುವ ವೆಚ್ಚ ಹಾಗೂ ಅಭ್ಯರ್ಥಿಗಳ ಪ್ರಯಾಣದ ಅಡಚಣೆಯನ್ನು ತಪ್ಪಿಸಲು ''''''''ಕೌಶಲ್ಯ ಕನೆಕ್ಟ್'''''''' ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಲಾಗಿದೆ. ಇದರ ಮೂಲಕ ನಿರುದ್ಯೋಗಿಗಳು ಆನ್‌ಲೈನ್‌ನಲ್ಲೇ ಇಂಟರ್ವ್ಯೂ ಹಾಗೂ ಉದ್ಯೋಗ ಹುಡುಕಾಟ ನಡೆಸಬಹುದು ಎಂದರು.

ಈ ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ಹೆಚ್‌ಸಿಎಲ್, ಎಕ್ಸ್ಚೇಂಜ್ ಟೆಕ್ನಾಲಜೀಸ್, ಮರ್ಸಿಡಿಸ್ ಬೆಂಝ್, ಸ್ಯಾಮ್‌ಸಂಗ್, ವಿಪ್ರೋ ಮುಂತಾದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, 3,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುತ್ತಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರದ ಮೊದಲ 100 ದಿನಗಳ ಗುರಿಯಲ್ಲಿ ''''''''ಯುವ ಉದ್ಯೋಗ‌ ಸೇತುಗೆ ಆದ್ಯತೆ ನೀಡಲಾಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿ 70,000 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

ಎಕ್ಸಿಲೇಟರ್‌ ಸಂಸ್ಥೆಯ ಎಂ.ಡಿ. ಕೌಶಿಕ್ ಸುಂದರ ರಾಜು ಮಾತನಾಡಿ, "ಒಂದೆಡೆ ಜನರಿಗೆ ಉದ್ಯೋಗವಿಲ್ಲ ಎಂದು ದೂರು ಕೇಳಿಬರುತ್ತದರೆ, ಇನ್ನೊಂದೆಡೆ ಕಂಪನಿಗಳು ತಮಗೆ ಸೂಕ್ತವಾದ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಹೇಳುತ್ತಿವೆ.

ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಮಾರ್ಗದರ್ಶನದಲ್ಲಿ ಆನ್‌ಲೈನ್ ಮೂಲಕವೇ ಜನರು ಎಲ್ಲಾ ಅವಕಾಶಗಳನ್ನು ತಿಳಿದುಕೊಳ್ಳುವಂತಹ ಒಂದು ವೇದಿಕೆಯನ್ನು ನಿರ್ಮಿಸಿದ್ದೇವೆ.

ಇದು ಕೇವಲ ಆರಂಭವಷ್ಟೇ. ಈಗಾಗಲೇ ಆನ್‌ಲೈನ್‌ನಲ್ಲಿ 3,000 ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದರು.

4,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿದ್ದು, ಈ ಕಾರ್ಯಕ್ರಮದಲ್ಲಿ 80 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ ಎಂದರು.

ಇದಕ್ಕು ಮುನ್ನ ಎಕ್ಸಿ ಲರೇಟರ್ ಸಂಸ್ಥೆಯ ನಿರ್ದೇಶಕ (ಕಾರ್ಯಚರಣೆ) ಡಾ.ಟಿ.ಎನ್. ಶ್ರೀನಿವಾಸ ಮಾತನಾಡಿ, ಕಲಬುರಗಿಯಲ್ಲಿ ಇಂತಹ ಅತ್ಯದ್ಭುತ ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಲು ನಮಗೆ ಅವಕಾಶ ಸಿಕ್ಕಿರುವುದು ನಿಜಕ್ಕೂ ಗೌರವದ ಸಂಗತಿ ಎಂದರು.

ಆನ್‌ಲೈನ್ ಮೂಲ‌ಕ ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಗಿಟ್ಟಿಸಿಕೊಂಡ ಕಿರಣಕುಮಾರ, ದೀಪಕ ಸೇರಿ ಆಯ್ದ ಯುವಕರಿಗ ಸಚಿವ ಡಾ.ಸರಣಪ್ರಕಾಶ ಪಾಟೀಲ ಉದ್ಯೋಗದ ಆಫರ್ ಲೆಟರ್ ನೀಡಿ ಶುಭ ಕೋರಿದಲ್ಲದೆ ನಂತರ ಕಂಪನಿಗಳು ಸಂದರ್ಶನ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೇಮಕಾತಿ ಪ್ರಕ್ರಿಯೆ ವೀಕ್ಷಿಸಿದರು.

ಸ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿ., ಜೆಸಿಬಿ ಇಂಡಿಯಾ ಲಿಮಿಟೆಡ್, ಮರ್ಸಿಡಿಸ್-ಬೆನ್ಜ್ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ, ವರ್ಲ ಪೂಲ್ ಆಫ್‌ ಇಂಡಿಯಾ ಲಿ., ಬ್ರಿಡ್ಜ್‍ಸ್ಟೋನ್ ಇಂಡಿಯಾ ಪ್ರೈ.ಲಿ., ಡಿಕ್ಸಾನ್ ಟೆಕ್ನಾಲಾಜೀಸ್, ಸ್ಯಾಮ್‌ಸಂಗ್‌, ಟಾಟಾ ಎಲೆಕ್ಟ್ರಾನಿಕ್ ಪ್ರೈ. ಲಿ., ಹೆಚ್.ಡಿ.ಎಫ್.ಸಿ., ಫಾಕ್ಸಾನ್, ಹೆಚ್.ಸಿ.ಎಲ್. ಟೆಕ್ನಾಲಾಜೀಸ್ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದವು.

ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ‌ ಪಂಚಾಯತ್ ಸಿ.ಇ.ಓ ರಾಹುಲ‌ ಸಂಕನೂರ್, ಹಿರಿಯ ಸಹಾಯಕ ಆಯುಕ್ತರಾದ ಸಾಹಿತ್ಯ ಅಲದಕಟ್ಟಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ ಸೂರ್ಯವಂಶಿ, ಹೆಚ್.ಕೆ.ಇ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ, ಸೇರಿದಂತೆ ವಿವಿಧ ಭಾಗಗಳಿಂದ ಬಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದರು. ಶಿಕ್ಷಕಿ ಅರ್ಚನಾ ನಿರೂಪಿಸಿದರು. ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಎಸ್.ಡಿ. ಪಾಟೀಲ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವ ಸಾಯಿ ಕೃಪಾದಲ್ಲಿ ಗುರು ಸ್ಮರಣೆ
ಎಲ್ಲ ತಾಲೂಕುಗಳಿಗೂ ತಲಾ ₹50 ಕೋಟಿ ಬಿಡುಗಡೆಗೊಳಿಸಿ