ಅಣ್ಣಿಗೇರಿ:
ಪಟ್ಟಣದ ಆದಿಕವಿ ಪಂಪ ಅಮೃತ ಕಲಾ ಕುಂಜ ಶಿಕ್ಷಣ ಸಂಸ್ಥೆ ಮತ್ತು ಪಾರ್ವತಮ್ಮ ಮಲ್ಲಪ್ಪ ಹಾಳದೋಟರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಶಿಕ್ಷಕ ಉಮೇಶ ಬಿಲ್ಲಹದ್ದನವರ ಮಾತನಾಡಿ, ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ಕನ್ನಡಪ್ರಭ ಸಂಸ್ಥೆಯು ಮಾರ್ಗದರ್ಶಿ ಪತ್ರಿಕೆ ತಂದಿರುವುದು ಉತ್ತಮ ಕಾರ್ಯ. ಇದರಲ್ಲಿ ಕಠಿಣವಾದ ಸಮಾಜ ವಿಜ್ಞಾನ, ಗಣಿತ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳ ಮಾದರಿ ಪ್ರಶ್ನೆ ಹಾಗೂ ಉತ್ತರಗಳನ್ನು ನೀಡಲಾಗುತ್ತಿದೆ ಮತ್ತು ಸಾಮಾನ್ಯ ಜ್ಞಾನ ಸಂಗ್ರಹಿಸಲು ಪ್ರತಿಭೆಗಳ ಕುರಿತು ವಿಶೇಷ ವರದಿ ಪ್ರಕಟಿಸುವ ಮೂಲಕ ಮಕ್ಕಳ ಕಲಿಕಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ ಎಂದರು.ಶಾಲಾ ಶಿಕ್ಷಕರಾದ ಎಸ್.ಸಿ. ಕರಬುಡ್ಡಿ, ಎಂ.ಎ. ಪಾಟೀಲ, ರಫೀಕ್ ಮುಳಗುಂದ, ಎ.ಐ. ಗಾಣದಮನಿ, ವೈ.ಬಿ. ಅಕ್ಕಿ ಸೇರಿದಂತೆ ಹಲವರಿದ್ದರು.