ಯುವನಿಧಿ ಕಾರ್ಯಕ್ರಮ ಯುವಜನತೆ ಕಣ್ಣಿಗೆ ಮಣ್ಣೆರೆಚುವ ತಂತ್ರ: ಸಂಸದ ಆರೋಪ

KannadaprabhaNewsNetwork |  
Published : Jan 14, 2024, 01:37 AM IST
ಪೊಟೋ: 13ಎಸ್ಎಂಜಿಕೆಪಿ07: ಬಿ.ವೈ.ರಾಘವೇಂದ್ರ  | Kannada Prabha

ಸಾರಾಂಶ

ರಾಜಕೀಯ ಎಂದ ಮೇಲೆ ಹೊಗೊಳೋದು ಇದ್ದಿದ್ದೇ, ತೆಗಳೋದೂ ಇದ್ದಿದ್ದೆ. ಈ ಮಾತಿಗೆ ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಯುವನಿಧಿ ಯೋಜನೆ ಚಾಲನೆ ಸಾಕ್ಷಿ. ಏಕೆಂದರೆ, ಕಾಂಗ್ರೆಸ್ ಸರ್ಕಾರದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಯುವನಿಧಿ ಉತ್ತಮ ಯೋಜನೆ ಎಂದಿದ್ದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಯುವನಿಧಿ ಯೋಜನೆ ಯುವಜನತೆ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಯುವನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮ ಯುವ ಜನತೆ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದು ಸಂಸದ ಬಿ.ವೈ.ರಾಘವೇಂದ್ರ ಕಟುವಾಗಿ ಟೀಕಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪದವಿ ಮುಗಿಸಿ ಆರು ತಿಂಗಳಾದ ನಿರುದ್ಯೋಗಿಗಳಿಗೆ ಮಾತ್ರ ಯುವನಿಧಿ ಭತ್ಯೆ ಸಿಗಲಿದೆ ಎಂದಿದ್ದಾರೆ. ಆದರೆ, ಕೆಲ ವಿ.ವಿ.ಗಳು 2 ತಿಂಗಳ ಹಿಂದಷ್ಟೇ ಫಲಿತಾಂಶ ಪ್ರಕಟಿಸಿವೆ. ಇದರಿಂದ ಈ ವರ್ಷವೇ ಪದವಿ ಮುಗಿಸಿದರೂ ಅವರು ಯುವನಿಧಿಗೆಗೆ ಅರ್ಹರಾಗುವಂತಿಲ್ಲ. ಲೋಕಸಭಾ ಚುನಾವಣೆ ಮುಂದಿಟ್ಟು ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆ ನೀಡಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.22ರ ನಂತರ ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ. ಇದು ತುಂಬಾ ಒಳ್ಳೆಯ ಬದಲಾವಣೆ. ಮುಸ್ಲಿಂ ತುಷ್ಟೀಕರಣ ರಾಜಕಾರಣದಿಂದ ಹೊರಗೆ ಬರಲಿಲ್ಲ ಅಂದ್ರೇ ಕಷ್ಟ ಎಂದು ಗೊತ್ತಾಗಿದೆ ಎಂದು ಮಾಡಿದರು.

ಶಿವಮೊಗ್ಗ ಫ್ರೀಡಂ ಪಾರ್ಕ್ ಅಂತ ಮಾಡಿದ್ದು ನಾನೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇರಬಹುದು. ಯಡಿಯೂರಪ್ಪ ನವರ ಕಾಲದಲ್ಲಿ ಅದು ಆಗಿರೋದು. ಪ್ರೀಡಂ ಪಾರ್ಕ್ ಮಾಡಿರೋದು ಬಿಜೆಪಿ ಸರ್ಕಾರ. ಶಾಸಕ ಚನ್ನಬಸಪ್ಪ ಅವರು ಚಂದ್ರಶೇಖರ್‌ ಆಜಾದ್‌ ಹೆಸರು ಸೂಚಿಸಿದ್ದಾರೆ. ಅದನ್ನು ಕೂಡ ಪರಿಗಣಿಸಿ ಮುಂದೆ ಬೇರೆ ಯಾವುದಾದರೂ ಜಾಗಕ್ಕೆ ಆ ಹೆಸರಿಡಸಲಾಗುವುದು. ಈ ವಿಚಾರ ಕುರಿತಂತೆ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗುವುದು ಎಂದು ಸಂಸದರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಮಧುಸೂದನ್, ಅಣ್ಣಪ್ಪ, ವಿನ್ಸೆಂಟ್ ರೂಡ್ರಿಗಸ್ ಮತ್ತಿತರರು ಇದ್ದರು.

- - - -13ಎಸ್ಎಂಜಿಕೆಪಿ07: ಬಿ.ವೈ.ರಾಘವೇಂದ್ರ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ