ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಸರ್ಕಾರದ ಕೆಫೆ ಸಂಜೀವಿನಿ ಯೋಜನೆಯಡಿ ಪಾಂಡವಪುರ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಕ್ಕ ಕೆಫೆಗೆ ಸಂಬಂಧಿಸಿದಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಸ್ಥಳ ಪರಿಶೀಲನೆ ನಡೆಸಿದರು.ಮಂಗಳವಾರ ಪಾಂಡವಪುರ ತಾಲೂಕು ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ, ಮಹಿಳಾ ಸ್ವ ಸಹಾಯ ಸಂಘಗಳ ಆರ್ಥಿಕ ಸ್ವಾವಲಂಬನೆಗಾಗಿ ಅಕ್ಕ ಕೆಫೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪಾಂಡವಪುರ ತಾಪಂ ಆವರಣದಲ್ಲಿ ಲಭ್ಯವಿರುವ ಖಾಲಿ ಜಾಗದಲ್ಲಿ ಅಕ್ಕ ಕೆಫೆ ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 3 ಅಕ್ಕ ಕೆಫೆ ಸ್ಥಾಪನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಹೆಚ್ಚುವರಿಯಾಗಿ 5 ಅಕ್ಕ ಕೆಫೆಗಳನ್ನು ಅನುಮೋದನೆ ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಶುಚಿ-ರುಚಿಯಾದ ಹಾಗೂ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ನಿಟ್ಟಿನಲ್ಲಿ ಅಕ್ಕ ಕೆಫೆಗಳು ಕಾರ್ಯನಿರ್ವಹಿಸಲಿವೆ ಎಂದರು.
ಅಕ್ಕ ಕೆಫೆಗೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ, ಜಿಪಂ ಉಪಕಾರ್ಯದರ್ಶಿ ಲಕ್ಷ್ಮಿ, ಕೆಆರ್‌ಐಡಿಎಲ್ ಕಾರ್ಯಪಾಲಕ ಅಭಿಯಂತರ ಸೋಮಶೇಖರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸೇರಿದಂತೆ ಇತರರು ಹಾಜರಿದ್ದರು.ಸೆ.೧೫ ರಿಂದ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಕನ್ನಡಪ್ರಭ ವಾರ್ತೆ ಮಂಡ್ಯ
ಭಾರತ ಸರ್ಕಾರದ ಅಸ್ಮಿತಾ ಯೋಜನೆಯಡಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಸೆ.೧೫, ೧೭, ೧೯ ವರ್ಷದೊಳಗಿನ ಬಾಲಕಿಯರಿಗಾಗಿ ವಿಶೇಷ ಜಿಲ್ಲಾ ಮಟ್ಟದ ವಿಶೇಷ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಕಾರ್ಯಾಧ್ಯಕ್ಷ ಡಾ.ಎಚ್.ಅನಿಲ್‌ಕುಮಾರ್ ಹೇಳಿದರು.ನಗರದ ಪಿಇಎಸ್ ಎಂಜಿನಿಯರಿಂಗ್ ಕ್ಯಾಂಪಸ್‌ನಲ್ಲಿರುವ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ಜರುಗಲಿವೆ. ೭೦ ಮಂದಿ ಸ್ಪರ್ಧಿಗಳು ಆಗಮಿಸುವ ನಿರೀಕ್ಷೆ ಇದೆ. ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ನೋಂದಣಿಗೆ ಸೆ.೧೦ ಕೊನೆಯ ದಿನವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿ ಅಥವಾ ಸರ್ಕಾರಿ ಗುರುತಿನ ಚೀಟಿಯೊಂದಿಗೆ ವಿವರಗಳನ್ನು ಮನೋಹರ್-೯೮೮೬೦೧೩೨೮೮ ಅಥವಾ ವ್ಯಾಟ್ಸಾಪ್‌ಗೆ ಸಂದೇಶ ಕಳುಹಿಸಬಹುದು. ಎಲ್ಲಾ ಆಟಗಾರರು ಕ್ರೀಡಾ ಉಡುಪು, ನಾನ್‌ಮಾರ್ಕಿಂಗ್ ಶೂಗಳು ಮತ್ತು ತಮ್ಮ ಸ್ವಂತ ರಾಕೆಟ್‌ಗಳನ್ನು ತರಬೇಕು. ಆಯೋಜಕರು ಶಟಲ್‌ಗಳನ್ನು ಮಾತ್ರ ಒದಗಿಸುತ್ತಾರೆ ಎಂದರು.ಗೋಷ್ಠಿಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಮನೋಹರ ಹಜಾರೆ ಇದ್ದರು.ದಸರಾ ಕ್ರೀಡಾಕೂಟ: ಭುವನ್ ವಿಭಾಗೀಯ ಮಟ್ಟಕ್ಕೆ ಆಯ್ಕೆ
ಮಂಡ್ಯ:ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಗೊರವಾಲೆ ಗ್ರಾಮದ ಪ್ರೌಢಶಾಲೆಯ 10ನೇ ವಿದ್ಯಾರ್ಥಿ ಜಿ.ವಿ.ಭುವನ್ 5 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಹಾಗೂ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆ ಮುಖ್ಯ ಶಿಕ್ಷಕಿ ಯಮುನಾ ತಿಳಿಸಿದ್ದಾರೆ.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲೂ 800 ಮೀಟರ್, 1500 ಮೀಟರ್ ಹಾಗೂ 3000 ಮೀಟರ್ ಓಟದಲ್ಲೂ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿದ್ದರು. ವಿದ್ಯಾರ್ಥಿಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಎಸ್.ರಾಮಸಂಜೀವಯ್ಯ, ಮುತ್ಯಾಲಪ್ಪ, ಹನುಮಂತ ಪೂಜಾರಿ, ಜಸಿನ್ತಾ ರೋಷಲಿನ್, ಹಾಗೂ ಶಂಕರ್ ಅಭಿನಂದಿಸಿದ್ದಾರೆ.ನಾಳೆ ಲಿಂಗಾಯತ ಮಹಾಸಭೆಮಂಡ್ಯ: ನಗರದ ಪ್ರವಾಸಿ ಮಂದಿರದಲ್ಲಿ ಸೆ.5 ರಂದು ಜಾಗತಿಕ ಲಿಂಗಾಯತ ಮಹಾಸಭಾ ಮಂಡ್ಯ ಜಿಲ್ಲಾ ಘಟಕ ಸ್ಥಾಪಿಸುವ ಸಂಬಂಧ ಸಭೆ ನಡೆಯಲಿದೆ. ಜಿಲ್ಲೆಯ ಲಿಂಗಾಯತ ಸಮಾಜದ ಮುಖಂಡರು, ಬಸವಪರ ಸಂಘಟನೆಗಳ ಪದಾಧಿಕಾರಿಗಳು ಸಭೆಗೆ ಆಗಮಿಸಿ ತಮ್ಮ ಸಲಹೆ, ಸಹಕಾರ ನೀಡುವಂತೆ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಮಹದೇವಪ್ಪ ಕೋರಿದ್ದಾರೆ. ಸಭೆಯಲ್ಲಿ ಸದಸ್ಯತ್ವ ಅಭಿಮಾನ ನಡೆಯಲಿದೆ. ಇತ್ತೀಚಿನ ಎರಡು ಭಾವಚಿತ್ರ, ಸದಸ್ಯತ್ವ ಮೊತ್ತ ತರಬೇಕು. ಹೆಚ್ಚಿನ ಮಾಹಿತಿಗೆ ಮೊ-9449828208 ಸಂಪರ್ಕಿಸಬಹುದು.