ಮೊದಲ ಸುತ್ತು 9 ಸಾವಿರ ಅಂತರದಿಂದ ಪ್ರಾರಂಭಿಸಿ ೯ನೇ ಸುತ್ತಿನಲ್ಲಿ 71 ಸಾವಿರ ಅಂತರದವರೆಗೆ ಏರಿಕೆಯಾಗಿದ್ದವರು 13 ನಲ್ಲಿ ಕೇವಲ 2 ಸಾವಿರ ಮತಗಳ ಅಂತರಕ್ಕೆ ಇಳಿಕೆಯಾಗಿದ್ದು ಎಲ್ಲರಲ್ಲಿ ಕುತೂಹಲ ಕೆರಳಿಸಿತ್ತು.
ಕೋಲಾರ : ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ (ಬಿಜೆಪಿ-ಜೆ.ಡಿ.ಎಸ್ ಮೈತ್ರಿ) ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ತಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ಗಿಂತ ಹೆಚ್ಚಿನ 71,388 ಬಹುಮತಗಳಿಂದ ವಿಜೇತರಾದರು.ಎಂ.ಮಲ್ಲೇಶ್ ಬಾಬು ೬೯೧೪೮೧ ಮತಗಳು ಪಡೆದರೆ ಕೆ.ವಿ.ಗೌತಮ್ 620093 ಮತಗಳನ್ನು ಪಡೆದಿದ್ದಾರೆ, ಪ್ರಾರಂಭದಿಂದ ಮಲ್ಲೇಶ್ ಬಾಬು ಬಹುಮತಗಳ ಅಂತರ ಕಾಪಾಡಿಕೊಂಡು ಬಂದಿದ್ದರು. ಮತಗಳ ಏರಿಕೆ , ಇಳಿಕೆ
ಮೊದಲ ಸುತ್ತು 9 ಸಾವಿರ ಅಂತರದಿಂದ ಪ್ರಾರಂಭಿಸಿ ೯ನೇ ಸುತ್ತಿನಲ್ಲಿ71 ಸಾವಿರ ಅಂತರದವರೆಗೆ ಏರಿಕೆಯಾಗಿದ್ದವರು 13 ನಲ್ಲಿ ಕೇವಲ 2 ಸಾವಿರ ಮತಗಳ ಅಂತರಕ್ಕೆ ಇಳಿಕೆಯಾಗಿದ್ದು ಎಲ್ಲರಲ್ಲಿ ಕುತೂಹಲ ಕೆರಳಿಸಿ, ಅಭ್ಯರ್ಥಿಗಳ ಎದೆ ಢವ ಢವ ಗುಟ್ಟಿಸಿದರು ನಂತರದಲ್ಲಿ ಜೆಡಿಎಸ್ ಹಂತ ಹಂತವಾಗಿ ಏರಿಕೆಯಾಗಿ ಕೊನೆಯ ಸುತ್ತಿನಲ್ಲಿ ಮಲ್ಲೇಶ್ ಬಾಬು 71,388 ಮತಗಳಲ್ಲಿ ಜಯಬೇರಿ ಬಾರಿಸಿದರು.ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 18 ಮಂದಿ ಅಭ್ಯರ್ಥಿಗಳು ಹಾಗೂ ನೋಟಾಗೆ ಸೇರಿದಂತೆ 13,49,397ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ. ವಿಶೇಷವೇನೆಂದರೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ೧೮ ಮಂದಿ ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾಗೆ 5831 ಮತಗಳನ್ನು ಚಲಾಯಿದ್ದಾರೆ. ಕಾಂಗ್ರೆಸ್ ಮತ್ತು ಎನ್.ಡಿ.ಎ. ಮೈತ್ರಿ ಅಭ್ಯರ್ಥಿ ಹೊರತು, ಉಳಿದ ೧೬ ಮಂದಿ ವಿವಿಧ ಅಭ್ಯರ್ಥಿಗಳು ಠೇವಣಿ ಕಳೆದು ಕೊಂಡಿದ್ದಾರೆ, 1206 ಮತಗಳು ಅಸಿಂಧುಗೊಂಡಿದೆ. ಇತರ ಅಭ್ಯರ್ಥಿಗಳು ಗಳಿಸಿದ ಮತ
ಬಹುಜನ ಸಮಾಜದ ಅಭ್ಯರ್ಥಿ ಎಸ್,ಬಿ, ಸುರೇಶ್ಮ4732 ತಗಳು, ಸೋಷಿಯಲ್ ಪಾರ್ಟಿ ಅಭ್ಯರ್ಥಿ ಡಿ.ಗೋಪಾಲಕೃಷ್ಣ1669 ಮತಗಳು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತಿಮ್ಮರಾಯಪ್ಪ 864 ಮತಗಳು, ಉತ್ತಮ ಪ್ರಜಾಕೀಯ ಪಾರ್ಟಿ ದೇವರಾಜ.ಎ ಅಲಸೂರುದಿನ್ನೆ 1354 ಮತಗಳು, ಡೆಲ್ಲಿ ಜನತಾ ಪಾರ್ಟಿ ಕೆ.ಆರ್.ದೇವರಾಜ4597 ಮತಗಳು, ಕರ್ನಾಟಕ ರಾಷ್ಟ್ರೀಯ ಸಮಿತಿ(ಕೆ.ಆರ್.ಎಸ್.) ಮಹೇಶ್ ಎ.ವಿ.1065 ಮತಗಳು, ವಿದುತಲೈ ಚಿರುತೈಗಳ್ ಕಟ್ಚಿಎಂ.ಸೊ. ಹಳ್ಳಿ ವೇಣು 521 ಮತಗಳು ಪಡೆದಿದ್ದಾರೆ.ಪಕ್ಷೇತರರಾಗಿ ಕೃಷ್ಣಯ್ಯ.ಎನ್ 433 ಮತಗಳು, ಎಸ್.ಎನ್.ನಾರಾಯಣಸ್ವಾಮಿ 1985 ಮತಗಳು, ಎಂಎಸ್.ಬದರೀನಾರಾಯಣ 1116 ಮತಗಳು, ಎಂ.ಮುನಿಗಂಗಪ್ಪ 604 ಮತಗಳು, ಆರ್.ರಾಜೇಂದ್ರ 751 ಮತಗಳು, ಆರ್.ರಂಜಿತ್ ಕುಮಾರ್ ೨೧೧೮ ಮತಗಳು, ಡಾ.ಎಂ.ವೆಂಕಟಸ್ವಾಮಿ 3354 ಮತಗಳು, ಹೋಳೂರು ಶ್ರೀನಿವಾಸ್ 6162 ಮತಗಳು, ಸುಮನ್ ಹೆಚ್.ಎನ್.6487 ಮತಗಳು ಪಡೆಯುವ ಮೂಲಕ ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿನ ೮ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ,26 ,914 ಮತದಾರರು ಇದ್ದು, ಈ ಪೈಕಿ 13,49,397 ಮತಗಳು ಚಲಾಯಿತಗೊಂಡಿದ್ದವು.