ಗ್ಯಾರಂಟಿಗಳಿಗೆ ಮನ್ನಣೆ ನೀಡದ ಮತದಾರ

KannadaprabhaNewsNetwork | Updated : Jun 05 2024, 04:34 AM IST

ಸಾರಾಂಶ

ಗ್ಯಾರಂಟಿಗಳಿಂದಾಗುತ್ತಿರುವ ಅನ್ಯಾಯ ಹಾಗೂ ವಂಚನೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಪ್ರಬುದ್ಧ ಮತದಾರರು ಕಾಂಗ್ರೇಸ್ ಪಕ್ಷವನ್ನು ತಿರಸ್ಕರಿಸಿ ಎನ್‌ಡಿಎ ಅಭ್ಯರ್ಥಿಯನ್ನು ಬಹುಮತದಿಂದ ಆಯ್ಕೆ ಮಾಡಿದ್ದಾರೆಂದು ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ನುಡಿದರು

 ಚಿಂತಾಮಣಿ :  ಕಾಂಗ್ರೇಸ್ ಪಕ್ಷದ ಗ್ಯಾರಂಟಿಗಳಿಂದಾಗುತ್ತಿರುವ ಅನ್ಯಾಯ ಹಾಗೂ ವಂಚನೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಪ್ರಬುದ್ಧ ಮತದಾರರು ಕಾಂಗ್ರೇಸ್ ಪಕ್ಷವನ್ನು ತಿರಸ್ಕರಿಸಿ ಎನ್‌ಡಿಎ ಅಭ್ಯರ್ಥಿಯನ್ನು ಬಹುಮತದಿಂದ ಆಯ್ಕೆ ಮಾಡಿದ್ದಾರೆಂದು ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ನುಡಿದರು. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬು ಗೆಲುವನ್ನು ಸಾಧಿಸಿದ ಹಿನ್ನಲೆಯಲ್ಲಿ ಚಿಂತಾಮಣಿ ನಗರ ಹೊರವಲಯದ ಜೆ ಕೆ ಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾರ್ಯಕರ್ತರಿಗೆ ಅಭಿನಂದನೆ

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳ ಎರಡು ಪಕ್ಷಗಳ ಹಾಲಿ, ಮಾಜಿ ಶಾಸಕರು ಜನಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬುರ ಗೆಲುವಿಗೆ ಸರ್ವ ರೀತಿಯಲ್ಲೂ ದುಡಿದ ಹಿನ್ನಲೆಯಲ್ಲಿ ಮಲ್ಲೇಶ್‌ಬಾಬು67 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ತಮ್ಮ ಪ್ರತಿಸ್ಪರ್ಧಿಯಾದ ಕೆ.ವಿ.ಗೌತಮ್‌ರನ್ನು ಪರಭಾವಗೊಳಿಸಿದ್ದು ಅವರ ಗೆಲುವಿಗೆ ದುಡಿದ ಪ್ರತಿಯೊಬ್ಬರಿಗೂ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 29 ಸಾವಿರ ಮತಗಳ ಅಂತರದಿಂದ ಸೋಲನ್ನು ಕಂಡಿದ್ದರ ಬಗ್ಗೆ ಕೆಲವರು ಲಘುವಾಗಿ ಮಾತನಾಡಿ 29 ರಲ್ಲಿ 9 ಕಳೆದರೂ 20 ಸಾವಿರ ಮತಗಳ ಬಹುಮತ ನಮಗೆ ಕಟ್ಟಿಟ್ಟ ಬುತ್ತಿಯೆಂದು ಭಾವಿಸಿದ್ದವರಿಗೆ 29  ಕಳೆದು ಅದರ ಜೊತೆಗೆ 7250 ಹೆಚ್ಚು ಮತಗಳನ್ನು ನೀಡುವ ಮೂಲಕ ನಮಗೆ ನಾವೇ ಸಾಟಿಯೆಂದು ಬೀಗುತ್ತಿದ್ದವರಿಗೆ ಮತದಾರರು ತಕ್ಕಪಾಠ ಕಲಿಸಿದ್ದು ಮತದಾರರಿಗೆ ಅಭಾರಿಯಾಗಿದ್ದೇವೆಂದರು.

ಮುನಿಸ್ವಾಮಿ ಪ್ರಚಾರ ಪ್ರಭಾವ

ವಿಶೇಷವಾಗಿ ಸಂಸದ ಎಸ್.ಮುನಿಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಬಾಬು ಕಣಕ್ಕೆ ಇಳಿದಾಗಿನಿಂದ ಮತದಾನದ ದಿನದವರೆಗೂ ತಾವೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಮುನಿಸ್ವಾಮಿ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಬಿರುಸಿನ ಪ್ರಚಾರ ನಡೆಸಿ ತಮ್ಮದೇ ಆದ ಶೈಲ್ಲಿಯಲ್ಲಿ ವಿಚಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ಮೂಲಕ ಮತದಾರರನ್ನು ಸೆಳೆಯುವಲ್ಲಿ ಸಫಲರಾದರು. ಇದು ಸಹ ಎನ್‌ಡಿಎ ಅಭ್ಯರ್ಥಿಯ ಗೆಲುವಿಗೆ ಕಾರಣವಾಯಿತೆಂದು ಬಣ್ಣಿಸಿದ್ದರು. ಕಾರ್ಯಕರ್ತರಲ್ಲಿ ಉತ್ಸಾಹ

ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಮಾತನಾಡಿ ಎನ್‌ಡಿಎ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಗೆಲುವು ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಿಂದ ಗೆಲುವನ್ನು ಸಾಧಿಸಿರುವುದು ಎರಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮತ್ತಷ್ಟು ಆಶಾಭಾವನೆಯನ್ನು ಚಿಗುರಿಸಿದ್ದು ಮುಂಬರುವ ಸ್ಥಳೀಯ ಚುನಾವಣೆಗಳಲ್ಲೂ ಎರಡು ಪಕ್ಷದ ಕಾರ್ಯಕರ್ತರು ಮುಖಂಡರ ಸಹಕಾರದೊಂದಿಗೆ ಚುನಾವಣೆಗಳನ್ನು ಎದುರಿಸಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೆಂಕಟೇಶ್, ವೆಂಕಟರವಣಪ್ಪ, ಗುಡೇ ಶ್ರೀನಿವಾಸ್‌ರೆಡ್ಡಿ, ಕೈವಾರ ಸುಬ್ಬಾರೆಡ್ಡಿ, ಅಲ್ಲಬಕಾಷ್, ಕೊತ್ತುರು ಬಾಬು, ಮಧು, ರಾಜಣ್ಣ, ಬೈರಾರೆಡ್ಡಿ, ಬಿಜೆಪಿಯ ನರಸಿಂಹರಾಜು (ರಾಜಣ್ಣ), ಮಂಜುನಾಥಚಾರಿ, ಮಹೇಶ್ ಬೈ, ಶಿವಾರೆಡ್ಡಿ, ದೇವರಾಜ್, ಪ್ರತಾಪ್, ವೆಂಕಟೇಶ್ ಎರಡು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Share this article