ಶಾಸಕ ಕೊತ್ತೂರು ವಿರುದ್ಧ ಕೋಲಾರ ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಮಾನನಷ್ಟ ಮೊಕದ್ದಮೆ

KannadaprabhaNewsNetwork |  
Published : Sep 04, 2024, 01:54 AM ISTUpdated : Sep 04, 2024, 05:03 AM IST
೩ಕೆಎಲ್‌ಆರ್-೬ನಗರಸಭೆ ಸದಸ್ಯ ಬಿ.ಎಂ.ಮುಬಾರಕ್. | Kannada Prabha

ಸಾರಾಂಶ

ಶಾಸಕ ಕೊತ್ತೂರು ಮಂಜುನಾಥ್ ಅವರು ಚುನಾವಣಾ ಆಯೋಗಕ್ಕೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು ನಗರಸಭಾ ಸದಸ್ಯ ಬಿ.ಎಂ. ಮುಬಾರಕ್ ಆರೋಪಿಸಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ಶಾಸಕರು ಧೈರ್ಯವಾಗಿ ಎದುರಿಸಬೇಕೆಂದೂ ಅವರು ಸವಾಲು ಹಾಕಿದ್ದಾರೆ.

 ಕೋಲಾರ : ತಮ್ಮ ವಿರುದ್ದ 420 ಪ್ರಕರಣ ದಾಖಲಾಗಿ 13 ತಿಂಗಳಾಗಿದೆ ನಿಜ. ಇದರ ತನಿಖೆ ವಿಚಾರಣೆಗೆ ನಾನೇನು ತಡೆಯಾಜ್ಞೆ ತಂದಿಲ್ಲ, ಅದನ್ನು ಧೈರ್ಯವಾಗಿ ಎದುರಿಸುವ ತಾಕತ್ತು ನನಗೆ ಇದೆ. ಶಾಸಕ ಕೊತ್ತೂರು ಮಂಜುನಾಥ್ ಮೇಲೆ 105/2018ಪ್ರಕರಣ ದಾಖಲಾಗಿದೆ. ಇದು 420 ಗಿಂತ ಹೆಚ್ಚಿನ ಆರೋಪವಾಗಿದೆ. ಆದರೆ ಶಾಸಕರು ಇದಕ್ಕೆ ತಡೆಯಾಜ್ಞೆ ತಂದಿರುವುದು ಏಕೆ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಪ್ರಶ್ನಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನದು ಚೆಕ್ ಬೌನ್ಸ್ ಪ್ರಕರಣ. ಆದರೆ ಶಾಸಕರು ಚುನಾವಣೆ ಆಯೋಗಕ್ಕೆ ಮೀಸಲಾತಿಯ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಇಡೀ ಸಮುದಾಯಕ್ಕೆ ಮಾಡಿದ ವಂಚನೆಯಾಗಿದೆ. ಸರ್ಕಾರಕ್ಕೂ ವಂಚನೆಯಾಗಿದೆ ಸಂವಿಧಾನಕ್ಕೆ ದ್ರೋಹ ಬಗೆದು ಕಾನೂನಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ ಎಂದು ಕಿಡಿಕಾರಿದರು.ತಾಕತ್ತಿದ್ದರೆ ವಿಚಾರಣೆ ಎದುರಿಸಿ

ತಾವು ೪೨೦ ಪ್ರಕರಣ ಮಾಡಿದ್ದೇನೆ, ಕಿತ್ತೋದೋನೂ, ಆದರೆ ಅವರು ೨ ಬಾರಿ ಶಾಸಕರಾಗಿ ಲಕ್ಷಾಂತರ ಜನರಿಗೆ ವಂಚಿಸಿದ್ದಾರೆ. ಶಾಸಕ ಕೂತ್ತೂರು ಮಂಜುನಾಥ್‌ಗೆ ತಾಕತ್ತು ಇದ್ದರೆ ಅವರು ತಂದಿರುವಂತ ತಡೆಯಾಜ್ಞೆ ವಾಪಸ್ ಪಡೆದು ಆರೋಪದ ವಿರುದ್ದ ತನಿಖೆ ಎದುರಿಸಲಿ. ಸರ್ವೋಚ್ಚ ನ್ಯಾಯಾಲಯವು ಶಾಸಕರ ಬೋಗಸ್ ಪ್ರಮಾಣ ಪತ್ರದ ವಿರುದ್ಧ 420 ಎಂದು ನಿರ್ಣಯಿಸಿದೆ ಎಂದರು.

ಮಾನನಷ್ಟ ಮೊಕದ್ದಮೆ ನೋಟಿಸ್‌

ಶಾಸಕರನ್ನು ತಾವು ಆರ್.ಎಸ್.ಎಸ್ ಏಜೆಂಟ್ ಎಂದಿರುವುದು ನಿಜ. ಅದನ್ನು ನಿಮ್ಮ ಮುಂದೆಯೇ ಒಪ್ಪಿ ಕೊಂಡಿದ್ದಾರೆ. ತಮ್ಮನ್ನು ತಾಲಿಬಾನ್ ಎಂದು ಟೀಕಿಸಿದ್ದಾರೆ. ಇದರ ವಿರುದ್ದ ನಾನು ನ್ಯಾಯಾಲಯದಲ್ಲಿ  ಮಾನನಷ್ಟ ಮೊಕದ್ದಮ್ಮೆ ದಾಖಲು ಮಾಡಿ ವಕೀಲರಿಂದ ನೊಟೀಸ್ ಜಾರಿ ಮಾಡಿಸಿದ್ದೇನೆ, ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪರವಾದ ಅಭ್ಯರ್ಥಿಗಳಿಗೆ ಪ್ರಚಾರ ಮಾಡಿದ್ದರು. ಆದ್ದರಿಂದ ನಾನು ಅವರನ್ನು ಬಿಜೆಪಿ ಏಜೆಂಟ್ ಎಂದು ದೂರಿದ್ದೇನೆ ಎಂದರು.ಮಾತಿಗೆ ಮೌಲ್ಯ ಇರಬೇಕು

ನೂರು ಮಂದಿ ಅಲ್ಪಸಂಖ್ಯಾತರು ಇರದ ವಾರ್ಡಿನಿಂದ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಬಹುಮತದಿಂದ ಆಯ್ಕೆಯಾದ ನನ್ನನ್ನು ತಾಲಿಬಾನ್ ಎಂದಿರುವುದು ಹಾಸ್ಯಸ್ಪದ, ರಾಜ್ಯದ ಆಡಳಿತರೂಢ ಸರ್ಕಾರದ ಭಾಗವಾಗಿರುವ ಅವರ ಮಾತುಗಳಿಗೆ ಮೌಲ್ಯ ಇರಬೇಕು ಎಂದರು.ಆ.೨೭ರಂದು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪಕ್ಷಾತೀತವಾಗಿ ನಡೆದಿದೆ ಹೊರತಾಗಿ ಯಾವುದೇ ಪಕ್ಷಗಳ ಪರವಾಗಿ ನಡೆದಿಲ್ಲ, ಅಲ್ಪಸಂಖ್ಯಾತರು ಇಲ್ಲ ಅಂದರೆ ನೀವಿಲ್ಲ. ಇಷ್ಟಕ್ಕೂ ಅಲ್ಪಸಂಖ್ಯಾತರಿಗೆ ನಿಮ್ಮ ಕೊಡುಗೆ ಏನು. ಕ್ಷೇತ್ರದ ಯಾವ ಹಳ್ಳಿ, ಯಾವ ಬಡಾವಣೆ ಎಲ್ಲಿದೆ ಎಂಬುವುದು ಅರಿಯದ ಅವರು ನಸೀರ್ ಅಹಮದ್, ಅನಿಲ್ ಕುಮಾರ್‌ರನ್ನು ಮುಂದಿಟ್ಟುಕೊಂಡು ತಾಕತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ಪಕ್ಕಕ್ಕೆ ಇಟ್ಟು ತಾಕತ್ತು ತೋರಿಸಲಿ ಎಂದು ಸವಾಲು ಹಾಕಿದರು.ಅಸಹಜ ಸಾವು ಪ್ರಕರಣ ತನಿಖೆಯಾಗಲಿ

ನಾನು 40-50 ಕುಟುಂಬಗಳನ್ನು ಹಾಳು ಮಾಡಿದ್ದೇನೆಂದು ಆರೋಪಿಸಿರುವ ಅವರು ಅಧಿಕೃತವಾದ ದಾಖಲೆಗಳಿದ್ದರೆ ಹಾಜರುಪಡಿಸಲಿ, ನಾನು ಇದಕ್ಕೆ ಪ್ರತಿಯಾಗಿ ನಾನು ಸಹ ಅವರು ಶಾಸಕರಾಗಿದ್ದ ಅವಧಿಯಿಂದ ಈವರೆಗೂ ಮುಳಬಾಗಿಲಿನಲ್ಲಿ ನಡೆದಿರುವ ಅಸಹಜ ಸಾವುಗಳ ಕುರಿತು ತನಿಖೆ ಮಾಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿಎಂ-ಎಚ್‌ಡಿಕೆ ಜಿ ರಾಮ್‌ ಜಿ ಸ್ಕೀಂ ಸವಾಲು ಸಮರ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು