ಗೌರಿ-ಗಣೇಶ ಹಬ್ಬಕ್ಕೆ ಶಾಸಕ ಪುಟ್ಟಸ್ವಾಮಿಗೌಡರಿಂದ 38 ಗ್ರಾಮಗಳ ಮಹಿಳೆಯರಿಗೆ ಬಾಗಿನ ವಿತರಣೆ

KannadaprabhaNewsNetwork |  
Published : Sep 04, 2024, 01:50 AM ISTUpdated : Sep 04, 2024, 05:08 AM IST
ಗೌರಿ ಹಬ್ಬದ ಪ್ರಯುಕ್ತ ಅಕ್ಕ-ತಂಗಿಯರಿಗೆ ಬಾಗಿನ | Kannada Prabha

ಸಾರಾಂಶ

ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಅವರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ತೊಂಡೇಭಾವಿ ಹೋಬಳಿಯ 38 ಗ್ರಾಮಗಳ ಮಹಿಳೆಯರಿಗೆ ಬಾಗಿನ ವಿತರಿಸಿದರು. ತಮ್ಮ ಗೆಲುವಿನಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಶ್ಲಾಘಿಸಿದ ಅವರು, ಕ್ಷೇತ್ರದ ಮಹಿಳೆಯರ ಸಬಲೀಕರಣಕ್ಕೆ ಮಹತ್ವ ನೀಡುವುದಾಗಿ ಭರವಸೆ ನೀಡಿದರು.

  ಗೌರಿಬಿದನೂರು : ಪ್ರತಿ ವರ್ಷದಂತೆ ಈ ವರ್ಷವು ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಹೆಸರಿನಲ್ಲಿ ಮಂಗಳವಾರ ಮಹಿಳೆಯರಿಗೆ ಬಾಗಿನ ವಿತರಿಸಲಾಯಿತು.

ತಾಲೂಕಿನ ತೊಂಡೇಭಾವಿ ಹೋಬಳಿಯ ಬೇವನಹಳ್ಳಿ ಗ್ರಾಮ ಪಂಚಾಯತಿ, ಕಲ್ಲಿನಾಯಕನಹಳ್ಳಿ ಗ್ರಾಮ ಪಂಚಾಯಿತಿ, ತೊಂಡೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 38 ಗ್ರಾಮಗಳ ಮಹಿಳೆಯರಿಗೆ ಬಾಗಿನ ನೀಡಲಾಯಿತು.

ತಾಲೂಕಿನ ಶಾಸಕನಾಗಿ ಇರುವವರೆಗೆ ಕ್ಷೇತ್ರದ ನನ್ನ ಅಕ್ಕ-ತಂಗಿಯರಿಗೆ ಬಾಗಿನ ನೀಡುತ್ತೇನೆ. ನನ್ನ ಗೆಲುವಿನಲ್ಲಿ ಮಹಿಳೆಯರ ಪಾತ್ರವೆ ಹೆಚ್ಚಿನದಾಗಿದ್ದು, ಕ್ಷೇತ್ರದ ಮಹಿಳೆಯರ ಸಬಲೀಕರಣಕ್ಕೆ ತಾವು ಹೆಚ್ಚು ಒತ್ತು ನೀಡುತ್ತಾ ಬಂದಿದ್ದೇನೆ. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಮನೆಗೆ ಬಾಗಿನ ತಲುಪಿಸಲಾಗುವುದು ಎಂದರು.

ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಜನತೆಗೆ ತಲುಪಿಸಲು ಬದ್ಧನಾಗಿದ್ದೇನೆ. ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡದ್ದೇನೆ ಎಂದು ಶಾಸಕರು ಹೇಳಿದರು

ಕಳೆದ 20-22 ದಿನಗಳಿಂದ ತಾಲ್ಲೂಕಿನಾದ್ಯಂತ ಶಾಸಕ ಕೆ.ಹೆಚ್.‌ ಪುಟ್ಟಸ್ವಾಮಿಗೌಡ, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಪ್ರತಿ ಮನೆ-ಮನೆಗಳಿಗೂ ತೆರಳಿ ಬಾಗಿನ ವಿತರಿಸುತ್ತಿದ್ದಾರೆ. ಶಾಸಕ ಕೆ.ಹೆಚ್.‌ ಪುಟ್ಟಸ್ವಾಮಿಗೌಡ ಅವರ ಭಾವಚಿತ್ರ ಹೊಂದಿರುವ ಬ್ಯಾಗ್‌ಗಳಲ್ಲಿ ಬಾಗಿನ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಕೆ.ಹೆಚ್.ಪಿ. ಫೌಂಡೇಷನ್‌ ಮುಖ್ಯ ಕಾರ್ಯನಿರ್ವಾಹಕ ಶ್ರೀನಿವಾಸಗೌಡ, ಕೋಚಿಮುಲ್‌ ಡೈರಿ ಕಾಂತರಾಜು ಮತ್ತು ಪ್ರತಿ ಪಂಚಾಯಿತಿಗಳ ಕೆ.ಹೆಚ್.ಪಿ.ಬಣದ ಪ್ರಮುಖ ಮುಖಂಡರುಗಳು, ಚುನಾಯಿತ ಜನಪ್ರತಿನಿಧಿಗಳು,ಸಿಬ್ಬಂದಿ, ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು
ಒಂದಲ್ಲಾ ಒಂದು ದಿನ ಹಿಜಾಬ್‌ ಧರಿಸಿದಾಕೆ ಪ್ರಧಾನಿ ಆಗ್ತಾಳೆ : ಒವೈಸಿ