ಯುಪಿಎ ಅವಧಿಯ ಮನರೇಗಾ ಯೋಜನೆಯ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಜಿ ರಾಮ್ ಜಿ’ ಕಾಯ್ದೆ ಹಿಂಪಡೆದುಕೊಳ್ಳಲು ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ 45 ದಿನಗಳ ಹೋರಾಟಕ್ಕೆ ಶನಿವಾರ ಚಾಲನೆ ನೀಡಿದೆ.
ನವದೆಹಲಿ: ಯುಪಿಎ ಅವಧಿಯ ಮನರೇಗಾ ಯೋಜನೆಯ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಜಿ ರಾಮ್ ಜಿ’ ಕಾಯ್ದೆ ಹಿಂಪಡೆದುಕೊಳ್ಳಲು ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ 45 ದಿನಗಳ ಹೋರಾಟಕ್ಕೆ ಶನಿವಾರ ಚಾಲನೆ ನೀಡಿದೆ. ಇದರ ಭಾಗವಾಗಿ ಶನಿವಾರ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿಯನ್ನು ನಡೆಸಿದೆ.
ಹೋರಾಟವನ್ನು ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ
ಈ ಕುರಿತು ಎಕ್ಸ್‌ನಲ್ಲಿ ಹೋರಾಟದ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಮೋದಿ ಸರ್ಕಾರವು ಮನರೇಗ ಯೋಜನೆಯನ್ನು ಕೆಡವಿ ಕಸಿದುಕೊಂಡಿರುವ ಕೆಲಸ ಮಾಡುವ ಹಕ್ಕು, ಜೀವನೋಪಾಯ ಮ ತ್ತು ಹೊಣೆಗಾರಿಕೆಯನ್ನು ಪುನಃಸ್ಥಾಪಿಸುವವರೆಗೆ ಈ ಹೋರಾಟವನ್ನು ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ’ ಎಂದು ಉದ್ಘೋಷಿಸಿದ್ದಾರೆ.
ಜ.12ರಿಂದ ಫೆ.25ರವರೆಗೆ ಹೋರಾಟ:
ಹೋರಾಟದ ಹಾದಿಯು ಜ.12ರಿಂದ ಆರಂಭವಾಗಲಿದೆ. ಜ.12ರಿಂದ ಜ.29ರವರೆಗೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಣ್ಣ ಸಣ್ಣ ಸಭೆ, ಸಮಾವೇಶಗಳನ್ನು ನಡೆಸಲಾಗುತ್ತದೆ. ಜ.30ರಂದು ವಾರ್ಡ್ ಮಟ್ಟದಲ್ಲಿ ಶಾಂತಿಯುತ ಸಭೆ ನಡೆಯಲಿದೆ. ಇದಾದ ನಂತರ ಫೆ.7ರಿಂದ 15ರವರೆಗೆ ರಾಜ್ಯ ಮಟ್ಟದಲ್ಲಿ ವಿಧಾನಸಭಾ ಘೇರಾವ್‌ಗಳನ್ನು ಪಕ್ಷ ಆಯೋಜಿಸಲಿದೆ. ಫೆ.16ರಿಂದ ಫೆ.25ರವರೆಗೆ ದೇಶಾದ್ಯಂತ 4 ದೊಡ್ಡ ರ್‍ಯಾಲಿ ನಡೆದು ಪ್ರತಿಭಟನೆ ಸಮಾರೋಪ ನಡೆಯಲಿದೆ.