ಕೋಲಾರ ಕ್ಷೇತ್ರ : ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ನಿರಾಳ

KannadaprabhaNewsNetwork |  
Published : Mar 31, 2024, 02:05 AM ISTUpdated : Mar 31, 2024, 05:13 AM IST
೩೦ಬ.ಪೇಟೆ-೧ಮಲ್ಲೇಶ್‌ಬಾಬು. | Kannada Prabha

ಸಾರಾಂಶ

ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಜಿಲ್ಲೆಯಲ್ಲಿ ಯಾರಿಗೂ ಪರಿಚಯವಿಲ್ಲ ಉಳಿದಿರುವ ೨೫ ದಿನಗಳಲ್ಲಿ ಮತದಾರರ ವಿಶ್ವಾಸ ಗಳಿಸಬೇಕಿದೆ. ಜೆಡಿಎಸ್‌ನ ಮಲ್ಲೇಶಬಾಬು ಕ್ಷೇತ್ರಕ್ಕೆ ಹಳಬರಾದರೂ ಕಾಂಗ್ರೆಸ್‌ ಜತೆ ಸೆಣಸಬೇಕಿದೆ

 ಬಂಗಾರಪೇಟೆ : ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಿ ಮೂರು ದಿನಗಳು ಕಳೆದರೂ ಎರಡೂ ಪಕ್ಷಗಳಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡದೆ ರಾಜಕೀಯ ತಿಕ್ಕಾಟದಲ್ಲಿ ತೊಡಗಿದ್ದ ಕಾಂಗ್ರೆಸ್,ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಕೊನೆಗೂ ಘೋಷಣೆ ಮಾಡುವ ಮೂಲಕ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ನಿಟ್ಟುಸಿರು ಬಿಡುವಂತಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಲು ಯತ್ನಿಸಿದಾಗ ಘಟಬಂಧನ್ ನಾಯಕರ ಗುಂಪು ಅದಕ್ಕೆ ವಿರೋಧ ವ್ಯಕ್ತಪಡಿಸಿ ಸಚಿವ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದರೆ ಸಾಮೂಹಿಕವಾಗಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು. 

ಘಟಬಂಧನ್‌ಗೆ ದೊರೆತ ಜಯ: 

ಘಟಬಂಧನ್ ಗುಂಪು ಮುನಿಯಪ್ಪ ಅಳಿಯನಿಗೆ ಬಿಟ್ಟು ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಹೈಕಮಾಂಡ್ ಎರಡು ಗುಂಪುಗಳ ಸೂಚಿಸುವ ಅಭ್ಯರ್ಥಿಗಳನ್ನು ಪಕ್ಕಕ್ಕೆ ಇಟ್ಟು ಮೂರನೇ ವ್ಯಕ್ತಿ ಬೆಂಗಳೂರಿನ ಕೆ.ವಿ.ಗೌತಮ್ ರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಘಟಬಂಧನ್ ನಾಯಕರ ಹೋರಾಟಕ್ಕೆ ಜಯಸಿಕ್ಕಂತಾಗಿದ್ದರೆ. 

ಸಚಿವ ಮುನಿಯಪ್ಪರಿಗೆ ಹಿನ್ನಡೆಯಾಗಿದೆ.ಈಗ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಭಿನ್ನಮತವನ್ನು ಬದಿಗೊತ್ತಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವರೇ ಎಂಬುದೇ ಈಗ ಎಲ್ಲರ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ.ಘಟಬಂಧನ್ ನಾಯಕರಿಗೆ ಹೈಕಮಾಂಡ್ ಘೋಷಣೆ ಮಾಡಿರುವ ಅಭ್ಯರ್ಥಿಯನ್ನು ಗೆಲ್ಲಿಸುವುದು ಅನಿವಾರ್ಯವಾಗಿದ್ದರೆ, ಸಚಿವ ಮುನಿಯಪ್ಪ ಮತ್ತು ಅವರ ಬೆಂಬಗಲಿಗರ ಚಿತ್ತ ಎತ್ತ ಎಂಬುದು ನಿಗೂಡವಾಗಿದೆ. ಸಚಿವ ಮುನಿಯಪ್ಪ ಅಳಿಯನಿಗೆ ಟಿಕೆಟೆ ಮಿಸ್ ಆಗಿರುವುದಕ್ಕೆ ಮುನಿಸಿಕೊಂಡಿರುವ ಅವರು ತಮ್ಮ ಸಹಕಾರವಿಲ್ಲದೆ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭವಲ್ಲ ಎಂಬುದನ್ನು ಹೈಕಮಾಂಡ್‌ಗೆ ತಿಳಿಸಲು ಪ್ರಯತ್ನ ಮಾಡುವರೋ ಇಲ್ಲ ಅಭ್ಯರ್ಥಿ ಪರ ಕೆಲಸ ಮಾಡುವರೋ ಎಂಬುದನ್ನು ಕಾದು ನೋಡಬೇಕು.

ಕ್ಷೇತ್ರದಲ್ಲಿ ಅಭ್ಯರ್ಥಿಯ ಪರಿಯ ಇಲ್ಲ

ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಜಿಲ್ಲೆಯಲ್ಲಿ ಯಾರಿಗೂ ಪರಿಚಯವಿಲ್ಲ ಉಳಿದಿರುವ ೨೫ ದಿನಗಳಲ್ಲಿ ೮ತಾಲೂಕುಗಳಲ್ಲಿ ಸಂಚರಿಸಿ ಹೇಗೆ ಮತದಾರರನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸಗಳಿಸುವರೇ ಕಾದು ನೋಡಬೇಕು.ಜೆಡಿಎಸ್‌ನಿಂದ ಮಲ್ಲೇಶ್‌ ಬಾಬು

ಇನ್ನು ಮೈತ್ರಿ ಅಭ್ಯರ್ಥಿಯಾಗಿರುವ ಎಂ.ಮಲ್ಲೇಶಬಾಬು ಜಿಲ್ಲೆಯವರೇ ಎಲ್ಲರಿಗೂ ಚಿರಪರಿಚಿತರು,ಅಲ್ಲದೆ ಎರಡು ಬಾರಿ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಿಂದ ಸ್ಪಧಿಸಿ ಸೋತಿದ್ದರು. ಈಗ ಮೈತ್ರಿ ಅಭ್ಯರ್ಥಿಯಾಗಿರುವುದರಿಂದ ಬಿಜೆಪಿ,ಜೆಡಿಎಸ್ ಪಕ್ಷಗಳ ನಾಯಕರ ಹಾಗೂ ಕಾರ್ಯಕರ್ತರ ಸಹಕಾರದಿಂದ ಮತ್ತೊಮ್ಮೆ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಅಖಾಡಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ಒಳ ಜಗಳದಿಂದ ಗೆದ್ದಿದ್ದರು. ಆದರೆ ಈ ಬಾರಿ ಬಿಜೆಪಿ ಮೈತ್ರಿ ಪರಿಣಾಮ ಜೆಡಿಎಸ್‌ಗೆ ಸ್ಥಾನ ಬಿಟ್ಟು ಕೊಟ್ಟಿರುವ ಪರಿಣಾಮ ಮುನಿಸ್ವಾಮಿ ಮುಂದಿನ ನಡೆ ನಿಗೂಢವಾಗಿದೆ.

PREV

Recommended Stories

ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌
ಕಾಂಗ್ರೆಸಲ್ಲಿ ನವೆಂಬರ್‌ ಕ್ರಾಂತಿ ಖಚಿತ : ಅಶೋಕ್‌