ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ದಲಿತರ ಮೀಸಲಾತಿ ಹಣ ೧೪,೪೮೨ ಕೋಟಿ ರೂ.ಗಳನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿ ಕೊಂಡಿದ್ದಾರೆ, ಪ್ರತಿ ಭಾರಿ ಅಂಬೇಡ್ಕರ್ ಅನುಯಾಯಿ ಎಂದು ಬೊಗಳೆ ಬಿಡುವವರು ಸಂವಿಧಾನದ ಉಲ್ಲಂಘನೆ ಮಾಡಿ ಎಸ್.ಟಿ.ಪಿ. ಟಿ.ಬಿ.ಎಸ್. ಹಣವನ್ನು ಬೇರೆ ಯೋಜನೆಗಳಿಗೆ ಹಂಚಿಕೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.ನಗರದ ಕೆ.ಎಸ್.ಆರ್.ಟಿ.ಸಿ. ವೃತ್ತದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದಲಿತರ ಮೀಸಲಾತಿ ಹಣ ೧೪,೪೮೨ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ಉಚಿತ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಸರ್ಕಾರದ ಖಜಾನೆ ಖಾಲಿಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆಗಳಿಗೆ ದಲಿತರ ಹಣವನ್ನು ಬಳಸಿಕೊಂಡು ಮಾನ ಉಳಿಸಿಕೊಳ್ಳುತ್ತಿದೆ, ರಾಜ್ಯ ಖಜಾನೆಯನ್ನು ಖಾಲಿ ಮಾಡಿ ಅಭಿವೃದ್ದಿ ಕಾರ್ಯಗಳಿಗೆ ಹಣ ಇಲ್ಲದಂತಾಗಿದೆ, ಐದು ಗ್ಯಾರಂಟಿ ಯೋಜನೆಗಳನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿಯೂ ವಿಫಲರಾಗಿದೆ ಎಂದು ದೂರಿದರು. ಇದು ಸಿದ್ದರಾಮಯ್ಯ ಕೊನೆಯ ಆಟ. ದಲಿತರ ಹಣವನ್ನು ಬೇರೆ ಯೋಜನೆಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ, ದಲಿತರಿಗೆ ಮೋಸ ಮಾಡಿದೆ. ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡು ಅರಮನೆ ಮೈದಾನದಲ್ಲಿ ಐಕ್ಯತೆ ಸಮಾವೇಶ ನಡೆಸಲು ಮುಂದಾಗಿರುವುದು ಖಂಡನೀಯ. ಇವರಿಗೆ ದಲಿತರ ಅಭಿವೃದ್ದಿ ಬಗ್ಗೆ ಕಾಳಜಿ ಇದ್ದಲ್ಲಿ ಕೊಡಲೇ ಮೀಸಲಾತಿ ಹಣವನ್ನು ವಾಪಾಸ್ ಮಾಡಿ ಯೋಜನೆಗೆ ಸದ್ಬಳಿಸಿಕೊಳ್ಳುವಂತೆ ಅಭಿವೃದ್ದಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಸವಾಲ್ ಹಾಕಿದರು.ದೇವರ ಹುಂಡಿ ಹಣ ಕಬಳಿಕೆ
ದೇವಾಲಯದ ಹುಂಡಿ ಹಣವನ್ನು ಬಿಡದಂತೆ ಹಣ ಕಬಳಿಸಲು ಮುಂದಾಗಿರುವುದು ನಾಚಿಕೆಗೇಡು, ಆಯೋಧ್ಯೆ ರೈಲಿಗೆ ಬೆಂಕಿ ಹಚ್ಚಲು ಮುಂದಾಗಿದ್ದ ತಾಲಿಬಾನ್ ಸಂಸ್ಕೃತಿ ನಾಯಕರು, ತಾಲಿಬಾನ್ ಏಜೆಂಟ್‌ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ, ಪಿಎಫ್‌ಐ ಸಂಘಟನೆಗಾರರಿಂದ ಶ್ರೀರಾಮಚಂದ್ರ ಭಕ್ತರ ಮೇಲೆ ಹಲ್ಲೆ ಮಾಡಿಸಿದಂತ ಕಾಂಗ್ರೆಸ್‌ನವರು ಮತ್ತೊಂದು ಪ್ರಕರಣದಲ್ಲಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಭೂಸ್ವಾಧೀನ ನೆಪದಲ್ಲಿ ಶ್ರೀರಾಮ ದೇವಾಲಯದ ಮೇಲೆ ದಾಳಿ ಮಾಡಿ ಕಟ್ಟಡವನ್ನು ಕೆಡವಿ ಧ್ವಂಸಗೊಳಿಸಿದ್ದಾರೆ ಎಂದು ದೂರಿದರು.ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ರಾಜ್ಯಾದ್ಯಂತ ಬಿಜೆಪಿ ನೇತೃತ್ವದಲ್ಲಿ ದಲಿತ ಹೋರಾಟಗಳನ್ನು ಕೈಗೆತ್ತಿ ಕೊಂಡಿದೆ, ದಲಿತರ ಹಣ ೧೪,೪೮೨ ಕೋಟಿ ರೂ.ಗಳನ್ನು ಪಕ್ಷವು ನೀಡಿದ್ದ ಭರವಸೆಗಳನ್ನು ಬಳಸಿಕೊಂಡಿದೆ, ಇದರಿಂದಾಗಿ ಮೊರಾರ್ಜಿ ದೇಸಾಯಿ, ಹಿಂದುಳಿದ ವಿದ್ಯಾರ್ಥಿ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳ ವೇತನಕ್ಕೂ ಹಣವಿಲ್ಲದಂತಾಗಿದೆ ಎಂದು ಖಂಡಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಬಂಗಾರಪೇಟೆ ಮಾಜಿ ಪುರಸಭೆ ಅಧ್ಯಕ್ಷ ಚಂದ್ರಾರೆಡ್ಡಿ, ದರಖಾಸ್ತು ಸಮಿತಿ ಮಾಜಿ ಅದ್ಯಕ್ಷ ಬೆಗ್ಲಿಸೂರ್ಯ ಪ್ರಕಾಶ್, ಕೆ.ಯು.ಡಿ.ಎ. ಮಾಜಿ ಅಧ್ಯಕ್ಷರಾದ ಓಂಶಕ್ತಿ ಚಲಪತಿ, ಜಿಲ್ಲಾ ಯುವ ಮೋರ್ಚಾ ಬಾಲಾಜಿ, ಬಜರಂಗದಳ ಬಾಲಾಜಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರಧ್ಯಕ್ಷ ತಿಮ್ಮರಾಯಪ್ಪ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಜಿಲ್ಲಾ ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಇದ್ದರು.ಬಾಕ್ಸ್..............ಟಿಕೆಟ್ ಬಗ್ಗೆ ಚರ್ಚಿಸಿಲ್ಲ: ಮುನಿಸ್ವಾಮಿ
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳು ಕೈಗೆ ಬಿ ಫಾರಂ ಬಂದಂತೆ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ, ನನ್ನ ಅವಧಿ ಇನ್ನು ಪೂರ್ಣಗೊಂಡಿಲ್ಲ, ನನ್ನ ಬಳಿ ಯಾರೂ ಸಹ ಟಿಕೆಟ್‌ಗೆ ಕುರಿತು ಚರ್ಚಿಸಿಲ್ಲ, ಸರ್ವೇ ಕಾರ್ಯ ಪ್ರಗತಿಯಲ್ಲಿದೆ, ಇನ್ನು ಕಾಲಾವಕಾಶ ಇದೆ. ಬಿಜೆಪಿ ದಲಿತ ಪರ ಇದೆ. ರಾಮಭಕ್ತರಿಗೆ, ದೇಶ ಪ್ರೇಮಿಗಳಿಗೆ ಬಿಜೆಪಿಯಿಂದ ಯಾವುದೇ ಅನ್ಯಾಯವಾಗಿಲ್ಲ, ಬಿಜೆಪಿ ಹೈಕಮಾಂಡ್ ಯಾರಿಗೆ ನೀಡಿದರೂ ಸಹ ಬದ್ಧತೆಯಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.