ಕರ್ನಾಟಕದಿಂದ ತೆಲಂಗಾಣಕ್ಕೆ ₹1000 ಕೋಟಿ ಹೋಗಿದೆ: ಜೋಶಿ ಆರೋಪ

KannadaprabhaNewsNetwork |  
Published : Jul 14, 2024, 01:31 AM ISTUpdated : Jul 14, 2024, 05:06 AM IST
Prahlad Joshi

ಸಾರಾಂಶ

ಹಿಂದೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿದ್ದರೂ ಕಾಂಗ್ರೆಸ್‌ನವರು ನಮ್ಮ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಆದರೀಗ ರಾಜ್ಯದಲ್ಲಿರೋದು 100 ಪರ್ಸೆಂಟ್ ಭ್ರಷ್ಟ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದ್ದಾರೆ.

  ಧಾರವಾಡ :  ರಾಜ್ಯದಲ್ಲಿರೋದು ನೂರು ಪರ್ಸೆಂಟ್ ಭ್ರಷ್ಟ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಹಿಂದೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿದ್ದರೂ ಕಾಂಗ್ರೆಸ್‌ನವರು ನಮ್ಮ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಆದರೀಗ ರಾಜ್ಯದಲ್ಲಿರೋದು 100 ಪರ್ಸೆಂಟ್ ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.

ಕಳೆದೊಂದು ವರ್ಷದಲ್ಲಿ ಕಾಂಗ್ರೆಸ್‌ ನಾಯಕರಿಂದ ಭಾರೀ ಭ್ರಷ್ಟಾಚಾರ ನಡೆದಿದೆ. ಸರಿ ಸುಮಾರು 1000 ಕೋಟಿ ರು. ಸಂಗ್ರಹಿಸಿ ತೆಲಂಗಾಣಕ್ಕೆ ಕೊಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿಗೆ ಗೊತ್ತಿದ್ದೇ ಆದ ಹಗರಣ. ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸಹ ಭಾಗಿಯಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆದಿವೆ ಎಂದು ಗಂಭೀರ ಆರೋಪ ಮಾಡಿದರು.

ಈ ಹಿಂದೆಯೂ ಮುಖ್ಯಮಂತ್ರಿಯವರು ಇದೇ ರೀತಿ ಹಣ ಸಂಗ್ರಹ ಮಾಡಿ ತೆಲಂಗಾಣಕ್ಕೆ ಕಳುಹಿಸಿದ್ದರು. ಇದೀಗ ವಾಲ್ಮೀಕಿ ನಿಗಮದ ಹಣ ನುಂಗಿ ನೀರು ಕುಡಿದಿದ್ದಾರೆ. ಮುಖ್ಯಮಂತ್ರಿಗೆ ಈ ಬಗ್ಗೆ ಎಲ್ಲವೂ ಗೊತ್ತಿದ್ದು, ಇದೀಗ ಹತಾಶ ಭಾವನೆಯಿಂದ ಅವರ ಶಿಷ್ಯರ ಬಗ್ಗೆ ಮಾತನಾಡುತ್ತಿದ್ದಾರೆ. ಶಾಸಕ ದದ್ದಲ ಅವರು ನನ್ನನ್ನು ಬಂಧಿಸಿ ಎಂದು ಎಸ್‌ಐಟಿ ಎದುರು ಏತಕ್ಕೆ ಕೂರಬೇಕಿತ್ತು ಎಂದು ಜೋಶಿ ಪ್ರಶ್ನಿಸಿದರು.

ಲಾಡ್‌ಗೆ ತಿರುಗೇಟು: ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿತ್ತು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ಕೊಡಲಿ ಎಂದಿದ್ದ ಸಚಿವ ಸಂತೋಷ ಲಾಡ್‌ಗೆ ತಿರುಗೇಟು ಕೊಟ್ಟ ಜೋಶಿ, ತಪ್ಪು ಮಾಡಿದವರನ್ನು ಕೇಂದ್ರ ಸರ್ಕಾರ ಶಿಕ್ಷಿಸುತ್ತದೆ. ಆದರೆ, ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಖಜಾನೆಯಿಂದ ಹಣ ಹೋಗಿದೆ ಎಂಬುದು ಮಹತ್ವದ ಸಂಗತಿ ಎಂದರು.

ಇಲೆಕ್ಟ್ರೋ ಬಾಂಡ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ₹1,600 ಕೋಟಿ ಹಣ ಬಂದಿದೆ. ಆ ಹಣ ಎಲ್ಲಿಂದ ಬಂತು. ಹಣವಿಲ್ಲದೆ ಕಾಂಗ್ರೆಸ್‌ ಚುನಾವಣೆ ಮಾಡಿದೆಯಾ? ಕಾರ್ಮಿಕ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಲಾಡ್‌ ವಿರುದ್ಧ ಆರೋಪಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ