ಅಲ್ಲೋಲಕಲ್ಲೋಲವಾಗುವ ಪ್ರಕರಣ ಶೀಘ್ರ : ಎಚ್‌ಡಿಕೆ

Published : Aug 31, 2026, 09:58 AM IST
HD Kumaraswamy

ಸಾರಾಂಶ

ಮುಂದಿನ ಹತ್ತು ದಿನಗಳ ನಂತರ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುವಂಥ ಪ್ರಕರಣ ಪ್ರಸ್ತಾಪಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕುತೂಹಲದ ಹೇಳಿಕೆ ನೀಡಿದ್ದಾರೆ.

ಬೆಂಗಳೂರು : ಮುಂದಿನ ಹತ್ತು ದಿನಗಳ ನಂತರ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುವಂಥ ಪ್ರಕರಣ ಪ್ರಸ್ತಾಪಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕುತೂಹಲದ ಹೇಳಿಕೆ ನೀಡಿದ್ದಾರೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾನು ವಿದೇಶ ಪ್ರವಾಸ ಮುಗಿಸಿ ಹತ್ತು ದಿನಗಳ ನಂತರ ವಾಪಸ್ ಬರುತ್ತೇನೆ. ದೇಶದಲ್ಲೇ ಅಲ್ಲೋಲ, ಕಲ್ಲೋಲ ಆಗುವಂಥ ಅತ್ಯಂತ ಪ್ರಮುಖ ವಿಷಯ ಪ್ರಸ್ತಾಪಿಸುತ್ತೇನೆ. ಈ ರಾಜ್ಯದಲ್ಲಿ ಏನೇನು ನಡೆಯುತ್ತಿದೆ, ರಾಜ್ಯವನ್ನು ಎಲ್ಲಿಗೆ ಕೊಂಡೊಯ್ದಿದ್ದಾರೆ ಎಂಬುದನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ ಎಂದು ತಿಳಿಸಿದರು.

ಅಧಿಕಾರಕ್ಕೆ ಏನೇನು ಮಾಡ್ತಾರೆ ನೋಡಿ:

ಎಂತೆಂಥ ಪರಿಸ್ಥಿತಿಯಲ್ಲಿ ಈ ರಾಜ್ಯ ಆಳುತ್ತಿದ್ದಾರೆಂದರೆ ಕೇವಲ ಅಧಿಕಾರ ಹಿಡಿಯಲು ಏನೇನು ಮಾಡುತ್ತಾರೆ ನೋಡಿ. ನಾನು ಎಲ್ಲವನ್ನೂ ನಿಮ್ಮ ಮುಂದಿಡುತ್ತೇನೆ. ಆಗ ಈ ಕುಮಾರಸ್ವಾಮಿ ಏನು ಅಂತ ಹೇಳಿ ಎಂದು ತೀಕ್ಷ್ಣವಾಗಿ ಹೇಳಿದರು.

ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ

ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ. ಒಂದೊಂದು ದಿನವೂ ನಮಗೆ ಮುಖ್ಯ. ಆದರೆ, ಅಲ್ಲಿ ನಮ್ಮ ಕನ್ನಡಿಗರು ಸೇರಿ ಅಕ್ಕ ಸಮ್ಮೇಳನ ಮಾಡುತ್ತಿದ್ದಾರೆ. 25ನೇ ವರ್ಷದ ಕಾರ್ಯಕ್ರಮ. ಬರಲೇಬೇಕು ಎಂಬ ತೀವ್ರ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ, ಅವರ ಸಮಾಧಾನಕ್ಕಾಗಿ ಹೋಗಿ ಬರಬೇಕಿದೆ. ನನಗೆ ಈಗಲೂ ಮನಸ್ಸು ಇಲ್ಲೇ ಇರಬೇಕು ಎಂದಿದೆ. ಪ್ರತಿಯೊಂದು ಕ್ಷಣವೂ ಇಲ್ಲಿರಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾಳೆಯಿಂದ ಬಿಜೆಪಿ ಪಾದಯಾತ್ರೆ : 10 ದಿನ, 175 ಕಿ.ಮೀ. ದೂರ ಕಾಲ್ನಡಿಗೆ
5 ವಿಧಾನ ಪರಿಷತ್‌, 2 ಸಂಪುಟ ಹೆಸರು ಫೈನಲ್‌ಗೆ ಕಸರತ್ತು- ನಟ ರವಿಚಂದ್ರನ್‌ಗೆ ಎಮ್ಮೆಲ್ಸಿ ಸ್ಥಾನ?