ಪರೋಲ್‌ ಪಡೆದ ಅಪರಾಧಿಯಿಂದ ಜೆಡಿಯು ಪರ ಪ್ರಚಾರ

KannadaprabhaNewsNetwork |  
Published : May 06, 2024, 12:38 AM ISTUpdated : May 06, 2024, 04:34 AM IST
ಅನಂತ್‌ ಕುಮಾರ್‌ ಸಿಂಗ್‌ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಗೆ ಬಿಹಾರದಿಂದ ಸ್ಪರ್ಧಿಸಿರುವ ನಿತೀಶ್‌ ಕುಮಾರ್‌ ನಾಯಕತ್ವದ ಜನತಾ ದಳದ (ಸಂಯುಕ್ತ) ಅಭ್ಯರ್ಥಿ ಪರ, ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಸೆಂಟ್ರಲ್‌ ಜೈಲು ಸೇರಿರುವ ಅಪರಾಧಿಯೊಬ್ಬರು ಬೃಹತ್‌ ರೋಡ್‌ ಶೋ ಮೂಲಕ ಭಾನುವಾರ ಪ್ರಚಾರ ನಡೆಸಿದ್ದಾರೆ.

ಪಟನಾ: ಲೋಕಸಭೆ ಚುನಾವಣೆಗೆ ಬಿಹಾರದಿಂದ ಸ್ಪರ್ಧಿಸಿರುವ ನಿತೀಶ್‌ ಕುಮಾರ್‌ ನಾಯಕತ್ವದ ಜನತಾ ದಳದ (ಸಂಯುಕ್ತ) ಅಭ್ಯರ್ಥಿ ಪರ, ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಸೆಂಟ್ರಲ್‌ ಜೈಲು ಸೇರಿರುವ ಅಪರಾಧಿಯೊಬ್ಬರು ಬೃಹತ್‌ ರೋಡ್‌ ಶೋ ಮೂಲಕ ಭಾನುವಾರ ಪ್ರಚಾರ ನಡೆಸಿದ್ದಾರೆ.

ಪಟನಾದ ಬ್ಯೂರ್‌ ಸೆಂಟ್ರಲ್‌ ಸೇರಿದ್ದ ಅಪರಾಧಿ ಅನಂತ್‌ ಕುಮಾರ್‌ ಸಿಂಗ್‌ ಭಾನುವಾರ ಬೆಳಗ್ಗೆ 15 ದಿನದ ಪೆರೋಲ್‌ ಮೇಲೆ ಹೊರ ಬಂದಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಬರ್ಹ್‌ ಕ್ಷೇತ್ರದ ಜೆಡಿಯು ಅಭ್ಯರ್ಥಿ ಲಲನ್‌ ಸಿಂಗ್‌ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಛೋಟಾ ಸರ್ಕಾರ್‌ ಎಂದೇ ಹೆಸರು ಪಡೆದಿರುವ ಅನಂತ್‌ ಕುಮಾರ್‌ ಮೊಕಾಮಾ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿದ್ದರು.

ಜೈಲಿನಿಂದ ಹೊರಬಂದ ಅನಂತ್‌ ಅವರನ್ನು ಕಾರುಗಳ ಮೂಲಕ ಡೋಲು, ಹೂಗಳನ್ನು ಅದ್ಧೂರಿ ಸ್ವಾಗತ ಕೋರಲಾಯಿತು. ಸ್ವಾಗತ ಕೋರಲು ಅಪಾರ ಜನಸ್ತೋಮ ನೆರೆದಿತ್ತು. ಜೆಡಿಯು ಅಭ್ಯರ್ಥಿ ಮತ್ತು ಅನಂತ್‌ ಪರ ಜೈಕಾರ ಹಾಕಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಚರಿತ್ರೆ ತಿಳಿದಿದ್ದರಷ್ಟೇ ಚರಿತ್ರೆ ಸೃಷ್ಟಿಸಲು ಸಾಧ್ಯ: ಸಿಎಂ
ಜಲ ನಿರ್ವಹಣೆಗೆ ಸಹಕಾರ ನೀಡಲು ಬದ್ಧ : ಸಿಎಂ