ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ಸಂಘರ್ಷ ಮೂಡಿಸುವ ಹುನ್ನಾರ ಜಾತಿ ಸಮೀಕ್ಷೆ : ಸಂಸದ ಡಾ.ಕೆ.ಸುಧಾಕರ್

KannadaprabhaNewsNetwork |  
Published : Oct 22, 2024, 12:02 AM ISTUpdated : Oct 22, 2024, 04:33 AM IST
ಸಿಕೆಬಿ-3 ಸಂಸದ ಡಾ.ಕೆ.ಸುಧಾಕರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು | Kannada Prabha

ಸಾರಾಂಶ

ಮೇಲ್ಜಾತಿಗಳನ್ನು ಹತ್ತಿಕ್ಕುವುದೇ ಜಾತಿ ಸಮೀಕ್ಷೆಯ ಉದ್ದೇಶ. ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ಸಂಘರ್ಷ ಮೂಡಿಸುವ ಹುನ್ನಾರ ಇದು. ಜಾತಿ ಸಮೀಕ್ಷೆ ನಡೆಸುವ ಯಾವ ಅಧಿಕಾರಿ, ಸಿಬ್ಬಂದಿಯೂ ನಮ್ಮ ಮನೆಗಳಿಗೆ ಬಂದಿಲ್ಲ. ವೈಜ್ಞಾನಿಕವಾಗಿ ಜಾತಿಗಣತಿ ನಡೆಯಲಿ

 ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಖಾಲಿ ಇರುವ 3 ಲಕ್ಷ ಸರ್ಕಾರಿ ಹುದ್ದೆಗಳನ್ನು ಆಧಿಕಾರಕ್ಕೆ ಬಂದ ವರ್ಷದೊಳಗೆ ಭರ್ತಿ ಮಾಡುವುದಾಗಿ ಮತ್ತು ಜನರಿಗೆ ಸೌಭಾಗ್ಯಗಳನ್ನು ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ಹುದ್ದೆಗಳನ್ನು ಹುದ್ದೆಗಳನ್ನು ಭರ್ತಿಮಾಡಿದೆ. ರಾಜ್ಯದ ಸೌಭಾಗ್ಯ ಸರ್ಕಾರ ಹೋಗಿ ದೌರ್ಭಾಗ್ಯ ಸರ್ಕಾರವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಟೀಕಿಸಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಈ ಹಿಂದೆ ಒಳಮೀಸಲಾತಿ ವಿಚಾರವಾಗಿ ತೀರ್ಮಾನಕೈಗೊಂಡಿತ್ತು. ಈಗ ಸುಪ್ರೀಂಕೋರ್ಟ್ ಹೇಳಿದರೂ ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ ಎಂದರು.

ಮೂವರು ಸಚಿವರಿಂದ ತಡೆ

ಒಳಮೀಸಲಾತಿ ಜಾರಿಯನ್ನು ರಾಜ್ಯ ಸರ್ಕಾರದ ಮೂವರು ಸಚಿವರು ತಡೆದಿದ್ದಾರೆ ಎಂದು ಆರೋಪಿಸಿದ ಸಂಸದರು. ಪರಿಶಿಷ್ಟರಲ್ಲಿ ಎಡಗೈ ಸಮಾಜಕ್ಕೆ ನ್ಯಾಯ ಕೊಡಬೇಕು. ಆದರೆ ರಾಜ್ಯ ಸರ್ಕಾರ ಆ ಕೆಲಸ ಮಾಡುತ್ತಿಲ್ಲ. ಇಂತಹವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.ಜೆ.ಕಾಂತರಾಜು ಜಾತಿ ಗಣತಿ ವರದಿ ಕುರಿತು ಮಾತನಾಡಿ, ಮೇಲ್ಜಾತಿಗಳನ್ನು ಹತ್ತಿಕ್ಕುವುದೇ ಜಾತಿ ಸಮೀಕ್ಷೆಯ ಉದ್ದೇಶ. ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ಸಂಘರ್ಷ ಮೂಡಿಸುವ ಹುನ್ನಾರ ಇದು. ಜಾತಿ ಸಮೀಕ್ಷೆ ನಡೆಸುವ ಯಾವ ಅಧಿಕಾರಿ, ಸಿಬ್ಬಂದಿಯೂ ನಮ್ಮ ಮನೆಗಳಿಗೆ ಬಂದಿಲ್ಲ. ವೈಜ್ಞಾನಿಕವಾಗಿ ಜಾತಿಗಣತಿ ನಡೆಯಲಿ ಎಂದು ಹೇಳಿದರು.

ರಸ್ತೆ ಅಗಲೀಕರಣಕ್ಕೆ ವಿರೋಧ

ನಗರದ ಗಂಗಮ್ಮ ಗುಡಿ ರಸ್ತೆ ಬಜಾರ್ ರಸ್ತೆ ಅಗಲೀಕರಣಕ್ಕೆ ವಿರೋದ ವ್ಯಕ್ತಪಡಿಸಿದ ಅ‍ವರು, ಬೆಂಗಳೂರಿನಂತ ಮಹಾನಗರ ಪಾಲಿಕೆಯಲ್ಲೇ ಎಷ್ಟೋ ರಸ್ತೆಗಳು ಅಗಲೀಕರಣ ಮಾಡಿಲ್ಲ. ಇಲ್ಲಿ ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಎರಡೂ ರಸ್ತೆಗಳ ಅಗಲೀಕರಣ ವಿಚಾರ ದೂರದ ಮಾತು. ಶಾಸಕ ಪ್ರದೀಪ್ ಈಶ್ವರ್ ಆ ಮನೆ ಒಡೀತೀನಿ, ಈ ಅಂಗಡಿ ಒಡೆಸ್ತೀನಿ ಅಂತ ಬೊಗಳೆ ಬಿಡುತಿದ್ದಾರೆ ಎಂದರು.

ಇದೆ ವೇಳೆ ರಸ್ತೆ ಅಗಲೀಕರಣಕ್ಕೆ ಸರ್ಕಾರದಲ್ಲಿ ಅನುದಾನ ಏನಾದ್ರು ತಂದಿದ್ದಾರ ಎಲ್ಲಿ ತಂದಿದ್ದಾರೆ ತೋರಿಸಲಿ ಎಂದರು

ಅಕ್ರಮ ಕ್ರಷರ್‌ಗಳನ್ನು ನಿಲ್ಲಿಸೋ ಅಧಿಕಾರ ನನ್ನ ಕೈಯಲಿಲ್ಲ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿವುದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಶನಿವಾರ ಭಾನುವಾರ ಮತ್ತು ಬುಧವಾರ ಎಲ್ಲಿ ಸಂತೆ ನಡೆಯುತ್ತೋ ಅಲ್ಲಿ ಒಳ್ಳೆ ಬಳೆ ಸಿಗುತ್ತೋ ಅಲ್ಲಿಗೆ ಬರಲಿ ತೊಡಿಸಿ ಕಳಿಸ್ತೇವೆ ಎಂದು ಚುಚ್ಚಿದರು. ಪ್ರದೀಪ್ ಈಶ್ವರ್ ಶಾಸಕರಾದ ಹದಿನೇಳು ತಿಂಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಬ್ರಷ್ಟಾಚಾರ ನಡೆಯುತ್ತಿದೆ ಯಾವುದೆ ಕಚೇರಿಗಳಲ್ಲಿ ನೋಡಿದರೂ ಲಂಚಾವತಾರ ದಲ್ಲಾಳಿಗಳ ಮೂಲಕ ಇದೆ. ಕ್ರಷರ್ ಲಾರಿಗಳ ಸಂಚಾರ ಈತನು ಹೇಳಿದ ಲಾರಿಗಳಿಗೆ ಯಾವುದೆ ಅಡೆತಡೆ ಇಲ್ಲ ಅವರಿಂದಲೂ ವಸೂಲಿ, ಕ್ರಷರ್ ಗಳಿಂದಲೂ ವಸೂಲಿ ಮಾಡ್ತಿರೋದು ಗೊತ್ತು. ಮಾಮೂಲಿ ವಸೂಲಿಗೆ ಇಳಿದಿದ್ದಾರೆ. ನಗರಸಭೆಗೆ ಮೂರು ತಿಂಗಳಿಂದ ಪೌರಾಯುಕ್ತರನ್ನ ಹುಡುಕಿ ನೇಮಕ ಮಾಡಿಸುವ ಒಂದು ಸಣ್ಣ ಕೆಲಸ ಮಾಡೊಲಿಕ್ಕೂ ಶಾಸಕರಿಂದ ಆಗಿಲ್ಲ ಎಂದರು.

ಆಸ್ಪತ್ರೆಗೆ ಸೇರಿದ 40 ಎಕರೆ ಇದೆ

ಟ್ರಾಮಾ ಸ್ಕೀಂ ನಲ್ಲಿ ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿಗೆ ಮಂಜೂರಾಗಿರೋ 50 ಬೆಡ್ ಆಸ್ಪತ್ರೆ ಸ್ಥಾಪನೆಗೆ ಸ್ಥಳವಾಕಾಶ ಎರಲಿಲ್ಲ ಎನ್ನುತ್ತಿದ್ದಾರೆ. ಮೆಡಿಕಲ್ ಕಾಲೇಜ್ ಆಸ್ಪತ್ರೆಲಿ 40 ಎಕರೆ ಜಮೀನಿದೆ. ಐಸಿಯು ಘಟಕ ನಿರ್ಮಾಣಕ್ಕೆ ಒಂದು ಎಕರೆ ಜಮೀನಷ್ಟೆ ಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇನ್ನೊಂದು 6 ತಿಂಗಳು ಮಾತ್ರ ಇರ್ತೀರಾ. ಆಮೇಲೆ ಇವರ ರಾಜಕೀಯ ಎಲ್ಲೀವರೆಗೂ ನಡೆಯುತ್ತೆ ನೋಡೋಣ ಎಂದರು.

ಈ ವೇಳೆ ನಗರಸಭಾ ಅಧ್ಯಕ್ಷ ಎ.ಗಜೇಂದ್ರ,ಜೆಡಿಎಸ್ ಕಾರ್ಯಾಧ್ಯಕ್ಷ ಕೆ ಆರ್ ರೆಡ್ಡಿ,ವೆಂಕಟೇಶಪ್ಪ ಮತ್ತಿತರರು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು